ಲೋಕಸಭೆ ಚುನಾವಣೆ : ಬಿರು ಬಿಸಿಲಿನಲ್ಲಿ ಪ್ರಚಾರ ನಡೆಸಿದ ಮುಖಂಡರು
೨೦೨೪ ಲೋಕಸಭಾ ಚುನಾವಣೆಯ ಅಂಗವಾಗಿ ಹಿಂದೂ ನವ ವರ್ಷದ ಸುದೀನವಾದ ಯುಗಾದಿ ಹಬ್ಬದಂದು ಹುನಗುಂದ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರ ಪುತ್ರ ರಾಜುಗೌಡ ಪಾಟೀಲ್ ಇಳಕಲ್ ತಾಲೂಕಿನ ಗೊರಬಾಳ ಗ್ರಾಮದಲ್ಲಿ ಬಿರುಬಿಸಿಲಿನಲ್ಲಿಯೂ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಮನೆ ಮನೆಗೆ ತೆರಳಿ ಅಭ್ಯರ್ಥಿಪರ ಪ್ರಚಾರ ಕಾರ್ಯವನ್ನು ಮಂಗಳವಾರದ0ದು ಆರಂಭಿಸಿದ್ದಾರೆ.
ಗೊರಬಾಳದ ಶ್ರೀ ದುರ್ಗಮ್ಮದೇವಿ ದೇವಸ್ಥಾನದಿಂದ ದೇವಿಯ ದರ್ಶನ ಆಶೀರ್ವಾದ ಪಡೆದು ಪ್ರಚಾರ ಆರಂಭಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಮಹಾಂತಗೌಡ ಪಾಟೀಲ್ ಪ್ರಧಾನ ಕಾರ್ಯದರ್ಶಿ ಬಸವರಾಜ ಹುನಕುಂಟಿ ಗೊರಬಾಳ ಗ್ರಾಮದ ಮುಖಂಡರಾದ ಪರಶುರಾಮ ಅಮಾತ್ಯಪ್ಪನವರ್ ಪಿಕೆಪಿಎಸ್ ಅಧ್ಯಕ್ಷ ಮಹಾಂತೇಶ ಪೂಜಾರಿ ಮುಖಂಡರಾದ ಬಸಪ್ಪ ಕಾತ್ರಾಳ, ವೆಂಕಪ್ಪ ಪೂಜಾರಿ, ಗಿರಿಯಪ್ಪ ಲಕ್ಕುಂಡಿ,ಕAಟೆಪ್ಪ ಲಕ್ಕುಂಡಿ, ಅನಿಲ್ ಬಡಿಗೇರ, ಆದರ್ಶ ಪಾಟೀಲ್ ಹಾಗೂ ಪಕ್ಷದ ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.