ಸ್ನೇಹಿತನ ಪತ್ನಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ಹಣ್ಣು ವ್ಯಾಪಾರಿ ಕಳ್ಳನಾಗಿ ಮಾರ್ಪಟ್ಟ
ಇತ್ತೀಚೆಗೆ ಗಿರಿನಗರ ಪೊಲೀಸರು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿದ್ದಕ್ಕಾಗಿ ಬಂಧಿತನಾಗಿದ್ದ ಕಳ್ಳನೊಬ್ಬ .ಹಣ್ಣು ವ್ಯಾಪಾರಿ ಕಳ್ಳನಾಗಿ ಮಾರ್ಪಟ್ಟ ಘಟನೆ ನಡೆದಿದೆ . ಸ್ತನ ಕ್ಯಾನ್ಸರ್ ರೋಗಿಯಾಗಿದ್ದ ತನ್ನ ಸ್ನೇಹಿತನ ಪತ್ನಿಯ ಚಿಕಿತ್ಸೆಗಾಗಿ ಕಳ್ಳತನ ಮಾಡಿರುದಾಗಿ ಒಪ್ಪಿಕೊಂಡಿದ್ದಾನೆ.
ಸೋಲದೇವನಹಳ್ಳಿಯ ಅಶೋಕ್ ಅಲಿಯಾಸ್ ಆಪಲ್ (33) ಎಂಬ ಆರೋಪಿ, ಆತನ ಪತ್ನಿ ಆತನನ್ನು ತೊರೆದ ನಂತರ ದಂಪತಿಗಆಹಾರ ಮತ್ತು ಆಶ್ರಯವನ್ನು ಒದಗಿಸಿದ್ದರಿಂದ ಸಹಾಯ ಹಸ್ತ ಚಾಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಮಂಜುನಾಥ ಕೆ. ಡಿ ನೇತೃತ್ವದ ತಂಡ ಆತನನ್ನು ಬ್ಯಾದರಹಳ್ಳಿ ನಿವಾಸಿ ಸತೀಶ್ ಅಲಿಯಾಸ್ ಸತ್ಯ (40) ನೊಂದಿಗೆ ಬಂಧಿಸಿದೆ. ಜೂನ್ 26ರಂದು ಶಕ್ತಿ ಗಣಪತಿ ದೇವಾಲಯದ ಬಳಿಯ ಗಿರಿನಗರ 2ನೇ ಹಂತದ ಸಾಫ್ಟ್ವೇರ್ ಇಂಜಿನಿಯರ್ ನಿಖಿಲ್ ಇ. ಆರ್. ಗೆ ಸೇರಿದ ಬೈಕ್ (ಬಜಾಜ್ ಪಲ್ಸರ್ 220) ಕಳ್ಳತನದ ಬಗ್ಗೆ ತನಿಖೆ ನಡೆಸುತ್ತಿದ್ದಾಗ ಪೊಲೀಸ ತಂಡವು ಇಬ್ಬರನ್ನೂ ಬಂಧಿಸಿತು.
ಕೊಲೆ, ದರೋಡೆ, ಸರಪಳಿ ಕಳ್ಳತನ ಮತ್ತು ಕಳ್ಳತನ ಸೇರಿದಂತೆ 42 ಪ್ರಕರಣಗಳಲ್ಲಿ ಸತೀಶ್ ಭಾಗಿಯಾಗಿದ್ದರೆ, ಅಶೋಕ್ 15 ಪ್ರಕರಣಗಳನ್ನು ಎದುರಿಸುತ್ತಿದ್ದು, ಒಂದು ತಿಂಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಅಪರಾಧಗಳಲ್ಲಿ ಭಾಗಿಯಾಗಿದ್ದ ಕಾರಣ ಒಂದೂವರೆ ವರ್ಷಗಳ ಹಿಂದೆ ಅಶೋಕ್ ಅವರ ಪತ್ನಿ ಅವರನ್ನು ತ್ಯಜಿಸಿದ್ದರು. ಅಂದಿನಿಂದ ಆತ ತನ್ನ ಆಪ್ತ ಸ್ನೇಹಿತನ ಮನೆಯಲ್ಲಿ ವಾಸಿಸುತ್ತಿದ್ದಾನೆ.
ಟೆಲಿಕಾಂ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಆತನ ಸ್ನೇಹಿತನ ಪತ್ನಿ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಆಕೆಯ ಚಿಕಿತ್ಸೆಗಾಗಿ ವಾಹನಗಳನ್ನು ಮಾರಾಟ ಮಾಡಿದ ನಂತರ ತಾನು ಗಳಿಸಿದ ಹೆಚ್ಚಿನ ಹಣವನ್ನು ಅಶೋಕ್ ನೀಡಿದ್ದಾನೆ. ಅಪರಾಧ ಜಗತ್ತಿಗೆ ಪ್ರವೇಶಿಸುವ ಮೊದಲು ಹಣ್ಣು ಮಾರಾಟಗಾರನಾಗಿದ್ದ ಅಶೋಕ್ ಅವರನ್ನು ಆಪಲ್ ಎಂದು ಕರೆಯಲಾಗುತ್ತದೆ.
ಇವರಿಬ್ಬರು ರಾತ್ರಿ ವೇಳೆ ಬೀಗ ಹಾಕಿದ ಮನೆಗಳಿಗೆ ನುಗ್ಗಿ ದ್ವಿಚಕ್ರ ವಾಹನಗಳನ್ನು ಕದಿಯುವಂತಹ ಅಪರಾಧ ಮಾಡಿದ್ದಾರೆ.
ಅವರ ಮುಖ್ಯ ಗುರಿಯೆಂದರೆ ಪಲ್ಸರ್ ಮತ್ತು ಕೆಟಿಎಂ ಬೈಕ್ಗಳು. ಬಂಧಿತರಿಂದ 10.7 ಲಕ್ಷ ಮೌಲ್ಯದ ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳತನವಾದ ಬೈಕ್ಗಳನ್ನು ಬ್ಯಾದರಹಳ್ಳಿ ಬಳಿಯ ಖಾಲಿ ಸ್ಥಳದಲ್ಲಿ ನಿಲ್ಲಿಸಿ, ನಿರೀಕ್ಷಿತ ಖರೀದಿದಾರರನ್ನು ಹುಡುಕುತ್ತಿದ್ದರು.