ಭಯೋತ್ಪಾದಕರೊಂದಿಗಿನ ಎನ್ಕೌಂಟರ್ನಲ್ಲಿ ಒಬ್ಬ ಅಧಿಕಾರಿ ಸೇರಿದಂತೆ ನಾಲ್ವರು 4 ಯೋಧರು ಹುತಾತ್ಮ.
ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ಅಧಿಕಾರಿ ಸೇರಿದಂತೆ ನಾಲ್ವರು ಭಾರತೀಯ ಸೇನೆಯ ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ರಾಷ್ಟ್ರೀಯ ರೈಫಲ್ಸ್ ಮತ್ತು ಜೆ & ಕೆ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು ಒಳಗೊಂಡ ಜಂಟಿ ಪಡೆಗಳು ಸೋಮವಾರ ರಾತ್ರಿ 7:45 ರ ಸುಮಾರಿಗೆ ಧಾರಿ ಗೋಟೆ ಉರರ್ಬಗಿ ಬಳಿಯ ದೇಸಾ ಅರಣ್ಯ ಪ್ರದೇಶದಲ್ಲಿ ಕಾರ್ಡನ್ ಮತ್ತು ಶೋಧ ಕಾರ್ಯಾಚರಣೆ ಪ್ರಾರಂಭಿಸಿದ ಗುಂಡಿನ ಚಕಮಕಿಯಲ್ಲಿ 4 ಯೋಧರು ಹುತಾತ್ಮ ರಾಗಿದ್ದಾರೆ.
ಹುತಾತ್ಮರಾದವರಲ್ಲಿ ಇತ್ತೀಚೆಗೆ ಬಡ್ತಿ ಪಡೆದ 10ನೇ ರಾಷ್ಟ್ರೀಯ ರೈಫಲ್ಸ್ನ ಮೇಜರ್ ಬ್ರಿಜೇಶ್ ಥಪ್ಪ ಕೂಡ ಸೇರಿದ್ದಾರೆ. ಇತರ ಸಾವುನೋವುಗಳ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಆರಂಭದಲ್ಲಿ, ಭಯೋತ್ಪಾದಕರೊಂದಿಗಿನ ಘರ್ಷಣೆ 20 ನಿಮಿಷಗಳ ಕಾಲ ನಡೆಯಿತು, ಇದರ ಪರಿಣಾಮವಾಗಿ ಅಧಿಕಾರಿ ಸೇರಿದಂತೆ ಐವರು ಭದ್ರತಾ ಸಿಬ್ಬಂದಿ ಗಾಯಗೊಂಡರು, ನಂತರ ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ಕರೆದೊಯ್ದ ನಂತರ ಹುತಾತ್ಮ ರಾಗಿದ್ದಾರೆ.
ಕಾರ್ಯಾಚರಣೆಯನ್ನು ಮುಂದುವರಿಸಲು ಹೆಚ್ಚುವರಿ ಪಡೆಗಳನ್ನು ಆ ಪ್ರದೇಶಕ್ಕೆ ನಿಯೋಜಿಸಲಾಯಿಗಿದೆ,
ಈ ಘಟನೆಯು ರಾಜಕೀಯ ತಿರುವು ಪಡೆದಿದ್ದು, ಕಾಂಗ್ರೆಸ್ ಪಕ್ಷವು ಬಿಜೆಪಿಯು ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಾಗಿನಿಂದ ಭಯೋತ್ಪಾದಕ ದಾಳಿಗಳ ಹೆಚ್ಚಳ ವಾಗಿವೆ ಎಂದು ಆರೋಪಿಸಿವೆ. 38 ದಿನಗಳಲ್ಲಿ ಒಂಬತ್ತು ಭಯೋತ್ಪಾದಕ ದಾಳಿಗಳು ನಡೆದಿವೆ,
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಭಾರತೀಯ ಸೇನಾ ಮುಖ್ಯಸ್ಥರು ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ, ಕೇಂದ್ರ ಸಚಿವ ಮತ್ತು ದೋಡಾದ ಸಂಸದ ಜಿತೇಂದ್ರ ಸಿಂಗ್ ಈ ಘಟನೆಯ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸಲು ಮತ್ತು ಶಾಂತಿ ಕಾಪಾಡಿಕೊಳ್ಳಲು ತಿಳಿಸಲಾಗಿದೆ.