Dr. Baba Saheb Ambedkar : ಕೃಷ್ಣಾಪೂರ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೩ ನೇ ಜಯಂತಿ ಆಚರಣೆ
ಬಾಗಲಕೋಟೆ ಜಿಲ್ಲೆಯ ಇಲಕಲ್ಲ ತಾಲೂಕಿನ ಕೃಷ್ಣಾಪೂರ ಗ್ರಾಮದಲ್ಲಿ ನಡೆದ ಭಾರತ ರತ್ನ,ಭಾಗ್ಯವಿಧಾತ, ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೩ನೇ ಜಯಂತಿಯನ್ನು ಗ್ರಾಮದ ದಲಿತ ಬಾಂಧವರು ಮತ್ತು ಎಲ್ಲಾ ಸಮುದಾಯದ ಯುವಕರು ತಾಯಂದಿರು ಸೇರಿ ಬಹಳ ಅದ್ದೂರಿಯಾಗಿ ಆಚರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿದ್ದ ಪ್ರಿಯದರ್ಶಿನಿ ಆಮದಿಹಾಳ ಅವರು ಮಾತನಾಡುತ್ತಾ
ಡಾ.ಭೀಮರಾವ್ ಅಂಬೇಡ್ಕರ್ ಅವರು ಭಾರತೀಯ ನ್ಯಾಯಶಾಸ್ತ್ರಜ್ಞ,ಅರ್ಥಶಾಸ್ತ್ರಜ್ಞ,ರಾಜಕಾರಣಿ ಮತ್ತು ಸಮಾಜ ಸುಧಾರಕರಾಗಿದ್ದರು ಮತ್ತು ಅಸ್ಪೃಶ್ಯತೆ ವಿರುದ್ಧ ಸಮಾಜ ತಾರತಮ್ಯದ ವಿರುದ್ಧ ಹೋರಾಟ ಮಾಡಿದರು ಮತ್ತು ಮಹಿಳೆಯರ ಹಕ್ಕುಗಳನ್ನು ಸಹ ಸಿಗುವಂತೆ ಮಾಡಿದ್ದಾರೆ.
ಮತ್ತು ಕಾರ್ಮಿಕ ಅವರು ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ ಮತ್ತು ಭಾರತದ ಸಂವಿಧಾನ ಸ್ಥಾಪಿಸಿದವರು ಎಂದು ತಿಳಿಸಿದರು. ನಂತರ ಶರಣಪ್ಪ ಆಮದಿಹಾಳ ಡಾ.ಬಿ.ಆರ್.ಅಂಬೇಡ್ಕರ್ ದಲಿತ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ಅವರು ಮಾತನಾಡಿ ಡಾ.ಬಿ.ಆರ್ ಅಂಬೇಡ್ಕರ್ ಅವರು ನಮಗೆ ಕೊಟ್ಟಂತಹ ಕೊಡುಗೆ ಒಂದಲ್ಲ ಎರಡಲ್ಲ ಇದು ಒಂದು ವಿಶ್ವದ ಅತಿ ದೊಡ್ಡ ಮರ ಇದು,ವಿಶ್ವದ ಎಲ್ಲಾ ಜನರಿಗೆ ನೆರಳು ನೀಡಿದ ಮರ ಡಾ.ಬಾಬಾಸಾಹೇಬ್ ಅಂಬೇಡ್ಕರ್.ಅವರ ಮಾರ್ಗದಲ್ಲಿ ನಡೆದರೆ ನಮಗೆ ಯಾವ ಕೊರತೆಯಾಗುವುದಿಲ್ಲ ಮತ್ತು ಮುಂದಿನ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜನರು ಸೇರಿ ಮತ್ತು ಅದ್ದೂರಿಯಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸೋಣ ಎಂದು ಹೇಳಿದರು.