Yatna was blocked by the women ಒಂದೆಡೆ ಯತ್ನಾಳಗೆ ಮಹಿಳೆಯರಿಂದ ತಡೆ ಇನ್ನೊಂದೆಡೆ ಕೂಡಿದ ಯುವಕರಿಂದಶಾಸಕ ಕಾಶಪ್ಪನವರಿಗೆ
ಮೋದಿ ಮೋದಿ ಕೂಗು
ಇಳಕಲ್ ನಗರಕ್ಕೆ ಶುಕ್ರವಾರದಂದು ರಾತ್ರಿ ಭಾಷಣಕ್ಕೆಂದು ಬರುತ್ತಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳರಿಗೆ ಮಹಿಳೆಯರು ಅಡ್ಡಗಟ್ಟಿದರೆಇನ್ನೊಂದೆಡೆ ಯತ್ನಾಳ ಭಾಷಣ ಮುಗಿದಾಗ ಕಂಠಿಸರ್ಕಲ್‌ಗೆ ಬಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರಿಗೆ ಯುವಕರ ದಂಡು ಮೋದಿ ಮೋದಿ ಎಂದು ಕೂಗು ಹಾಕಿದ ಘಟನೆ ಶುಕ್ರವಾರದಂದು ರಾತ್ರಿ ನಡೆಯಿತು.
ಬಸವೇಶ್ವರ ಸರ್ಕಲ್ ಮಾರ್ಗವಾಗಿ ಕಂಠಿ ಸರ್ಕಲ್ ಗೆ ಬರುತ್ತಿದ್ದ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಅಡ್ಡಗಟ್ಟಿದ ಕೆಲ ಮಹಿಳೆಯರು ಏನೇನೋ ಮಾತನಾಡುತ್ತಾ ಸಮಯ ವ್ಯಯ ಮಾಡಿ ಅವರು ಭಾಷಣಕ್ಕೆ ಹೋಗದಂತೆ ನೋಡಿದರೂ ಅಲ್ಲಿಂದ ಬಸನಗೌಡ ಪಾಟೀಲ ೯-೪೫ ಕ್ಕೆ ಕಂಠಿ ಸರ್ಕಲ್ ಗೆ ಬಂದು ಭಾಷಣ ಆರಂಭಿಸಿ ಇಳಕಲ್ ಪಾಕಿಸ್ತಾನದಲ್ಲಿ ಇದೆಯೇ ಎಂದು ಪ್ರಶ್ನಿಸುತ್ತಾ ಹೆಂಗಸರನ್ನು ಮುಂದೆ ಮಾಡಿ ನನಗೆ ಅಡ್ಡ ಹಾಕಿದ್ದಾರೆ ಎಂದು ಕುಟುಕಿದರು.
ಹತ್ತು ಗಂಟೆಗೆ ಇನ್ನೂ ಎರಡು ನಿಮಿಷ ಇದ್ದಾಗಲೇ ತಮ್ಮ ಭಾಷಣ ಮುಗಿಸಿ ವೇದಿಕೆಯಿಂದ ಕೆಳಗಿಳಿದ ಅವರನ್ನು ಸ್ಥಳೀಯ ಬಿಜೆಪಿ ನಾಯಕರು ಹಿಂಬಾಲಿಸಿದರು ಭಾಷಣಕ್ಕೆ ಕೂಡಿದ ಸಾವಿರಾರು ಜನರು ಮನೆಗೆ ಮರಳುತ್ತಿದ್ದಾಗ ಅದೇ ದಾರಿಯಲ್ಲಿ ಬಂದ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ಯುವಕರು ಸುತ್ತುವರೆದು ಮೋದಿ ಮೋದಿ ಎಂದು ಕೂಗಾಡ ತೊಡಗಿದರು. ಹೀಗಾಗಿ ಶಾಸಕರು ಕಾರಿನಿಂದ ಕೆಳಗಿಳಿದು ನಡೆಯುತ್ತಾ ಸಾಗಿ ನಿಮಗೆ ಶನಿವಾರದಂದು ಇಲ್ಲಿಯೇ ಉತ್ತರ ಕೊಡುವೆ ಎಂದು ಹೇಳಿದರು.