shocked ಮಗುವನ್ನು ಮೊಸಳೆ ಬಾಯಿಗೆಸೆದ ತಾಯಿ : ಘಟನಗೆ ಬೆಚ್ಚಿಬಿದ್ದ ಪಟ್ಟಣ
ದಾಂಡೇಲಿ : ಪತಿ ಮೇಲಿನ ಸಿಟ್ಟಿಗೆ ಹೆತ್ತ ಮಗನನ್ನೇ ತಾಯಿಯೊಬ್ಬಳು ಮೊಸಳೆ ಬಾಯಿಗೆ ಎಸೆದ ಹೃದಯವಿದ್ರಾವಕ ಘಟನೆ ಶನಿವಾರದಂದು ನಡೆದಿದ್ದು ಈ ಘಟನಗೆ ದಾಂಡೇಲಿ ಪಟ್ಟಣ ಬೆಚ್ಚಿದೆ.
ಹೌದು ನಗರದ ಹಾಲಮಡ್ಡಿಯ ಸಾವಿತ್ರಿ ಸೀಳಿನ್ ಆರೋಪಿ ಮಹಿಳೆ ಶನಿವಾರ ಸಂಜೆ ಪತಿ ರವಿಕುಮಾರ್ ಜತೆ ಸಾವಿತ್ರಿ ಜಗಳವಾಡಿದ್ದರು. ಬಳಿಕ ಅದೇ ಸಿಟ್ಟಿನಲ್ಲಿ ೬ ವರ್ಷದ ಮಗ ವಿನೋದನನ್ನು ಕರೆದೊಯ್ದು ಮನೆಯ ಸಮೀಪದ ಕೊಳಚೆ ನೀರಿನ ನಾಲೆಗೆ ಎಸೆದು ಹೋಗಿದ್ದರು.
ಆದರೆ ಕೆಲ ಹೊತ್ತಿನಲ್ಲೇ ತಪ್ಪಿನ ಅರಿವಾಗಿ ತಾನು ಮಾಡಿದ್ದ ತಪ್ಪನ್ನು ಮನೆಯವರಿಗೆ ತಿಳಿಸಿದ್ದರು. ತಕ್ಷಣವೇ ಕುಟುಂಬಸ್ಥರು, ಸ್ಥಳೀಯರು ರಾತ್ರಿಯೇ ನಾಲೆ ಬಳಿ ಧಾವಿಸಿದರಾದರೂ ಕಾಲ ಮಿಂಚಿ ಹೋಗಿತ್ತು. ನಾಲೆಯಲ್ಲಿ ಎಷ್ಟೇ ಹುಡುಕಾಡಿದರೂ ಮಗು ಪತ್ತೆಯಾಗಿಲಲ್ಲಿ.
ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿದಾಗ ಭಾನುವಾರ ಬೆಳಗ್ಗೆ ಮೃತದೇಹ ಸಿಕ್ಕಿದೆ. ಬಾಲಕನ ಶವ ಮೊಸಳೆ ತಿಂದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಬಾಲಕನಿಗೆ ಮೂರ್ಛ ರೋಗ ಇತ್ತೆಂದು ತಿಳಿದು ಬಂದಿದೆ.
ಸಿಟ್ಟಿನಲ್ಲಿ ಮಗನನ್ನು ಮೊಸಳೆ ಬಾಯಿಗೆ ಎಸೆದ ಸಾವಿತ್ರಿ ಬಳಿಕ ಮೃತದೇಹದ ಎದುರು ಕಣ್ಣೀರಿಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಸಾವಿತ್ರಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.
ದಾಂಡೇಲಿ ಡಿವೈಎಸ್ಪಿ ಶಿವಾನಂದ ಮದರಖಂಡಿ, ಸಿಪಿಐ ಭೀಮಣ್ಣ ಸೂರಿ, ಪಿಎಸ್‌ಐ ಕೃಷ್ಣ ಅರಕೇರಿ, ಜಗದೀಶ ನಾಯ್ಕ, ಸಿಬ್ಬಂದಿಯಾದ ಚಿನ್ಮಯಿ ಪತ್ತಾರ, ದಯಾನಂದ, ಮಂಜುನಾಥ, ಅಬ್ದುಲ್ ಪಟೇಲ್ ಇತರರು ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.