ಹೆಚ್ಚಾದ ಬೀದಿ ನಾಯಿಗಳ ಹಾವಳಿ : ಬೀದಿ ನಾಯಿಗಳ ದಾಳಿಗೆ ಬಲಿಯಾದ ಹಸುಕರು
ಬಾಗಲಕೋಟ : ಜಿಲ್ಲೆಯ ಇಳಕಲ್ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಇಂದು ಬುಧವಾರದಂದು ನಗರದ ನಾಲ್ಕನೇ ವಾರ್ಡಿನ ಶ್ರೀಖಂಡೆ ಅವರ ಮನೆಯ ಹತ್ತಿರದ ಬಯಲು ಜಾಗೆಯಲ್ಲಿ ನಾಲ್ಕೆöÊದು ನಾಯಿಗಳು ಕರುವಿನ ಮೇಲೆ ದಾಳಿ ನಡೆಸಿ ಕರುವನ್ನು ಬಲಿ ಪಡೆದ ಘಟನೆ ಜರುಗಿದೆ.
ಈ ಬಯಲಿನ ಜಾಗೆಯಲ್ಲಿ ನಗರದ ಸಾಕಷ್ಟು ದನಗಳು ಇಲ್ಲಿ ಬಂದು ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿರುತಿದ್ದು ಅಲ್ಲಿನ ಬೀದಿ ನಾಯಿಗಳಿಗೆ ಹಸು ಕರುಗಳ ಮೇಲೆ ದಾಳಿ ನಡೆಸಿದ್ದರಿಂದ ಹಸುಕರುಗಳು ಬಲಿಯಾಗುತ್ತವೆ.
ಸಣ್ಣ ಮಕ್ಕಳು ಅಲ್ಲಿ ಸಂಚರಿಸುತ್ತಿರುವಾಗ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡುವ ಸಂಭವವಿದ್ದು ಸಂಬAಧಪಟ್ಟ ಅಧಿಕಾರಿಗಳು ಬೇಗನೆ ಎಚ್ಚೆತ್ತುಕೊಂಡು ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬೇಕು ಎಂದು ಸ್ಥಳೀಯ ನಿವಾಸಿಗಳು ಮತ್ತು ಮುತ್ತುರಾಜ ಅಕ್ಕಿ ಸಂಬAಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಒಂದು ತಿಂಗಳ ಹಿಂದಷ್ಟೇ ನಗರದ ಗಾಂಧಿ ಚೌಕದ ಅಕ್ಕಿ ಅವರ ಅಂಗಡಿಯ ಮುಂದೆ ರಾತ್ರಿ ಸಮಯದಲ್ಲಿ ಹೊರಟ್ಟಿದ್ದ ವ್ಯಕ್ತಿಯೊರ್ವನ ಮೇಲೆ ನಾಲ್ಕೆöÊದು ನಾಯಿ ದಾಳಿ ಮಾಡಿ ಗಾಯಗೊಳಿಸಿದ್ದ ಘಟನೆ ಇಲ್ಲಿ ಸ್ಮರಿಸಬಹುದಾಗಿದೆ.
ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)