ಇಳಕಲ್ದ ಗ್ರಾಮದೇವತೆಗೆ ಉಡಿ ತುಂಬಿ ಭಕ್ತಿಯನ್ನು ಮೆರೆದ ಭಕ್ತ ಸಮೂಹ
ಬಾಗಲಕೋಟ : ಜಿಲ್ಲೆಯ ಇಳಕಲ್ಲ ಕಿಲ್ಲಾ ಓಣಿಯ ಗ್ರಾಮದೇವತೆ ದ್ಯಾಮವ್ವನ ಉಡಿಯನ್ನು ಶುಕ್ರವಾರದಂದು ಮುಂಜಾನೆ ೭ ಗಂಟೆಯಿAದಲೇ ಸಾವಿರಾರು ಭಕ್ತರು ಉಂಡಿ ತುಂಬಿ ತಮ್ಮ ಭಕ್ತಿಭಾವ ಮೆರೆದರು.
ವಾಡಿಕೆಯಂತೆ ಮೊದಲಿಗೆ ಕಿಲ್ಲಾ ಓಣಿಯ ಎಲ್ಲಾ ಹಿರಿಯರು ಮತ್ತು ಪ್ರಮುಖರು ಸೇರಿಕೊಂಡು ಎಂ ಎಸ್ ಪಾಟೀಲರವರ ಮನೆಯಿಂದ ಉಡಿ ತುಂಬಿದ ನಂತರ ನಗರದ ಭಕ್ತರು ದೇವಿಗೆ ಎಡೆ ಅರ್ಪಿಸಿ ಹಣ್ಣುಕಾಯಿ ಸಲ್ಲಿಸಿದರು.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಇಡೀ ಊರಿನ ಜನತೆ ಜಾತಿ ಧರ್ಮ ಬೇಧ ಮರೆತು ದೇವಿಗೆ ಎಡೆ ಅರ್ಪಿಸುತ್ತಿದ್ದ ದೃಶ್ಯಗಳನ್ನು ನೋಡಬಹುದಾಗಿತ್ತು.
ವರದಿ: ಭೀಮಣ್ಣ ಗಾಣಿಗೇರ ಇಳಕಲ್ಲ