Fisherman ನದಿಯಲ್ಲಿ ಬಲೆಗೆ ಬಿದ್ದ ೩೮ ಕೆ ಜಿ ಮೀನು ಮೀನುಗಾರ ಫುಲ್ ಖುಷ್
ಆಲಮಟ್ಟಿ ಕೃಷ್ಣಾ ನದಿಯಹಳೆ ಚಿಮ್ಮಲಗಿ ಬಳಿಯ ಬಾವಾಸಾಬ್ ಗುಡ್ಡದ ಬಳಿ ಗುರುವಾರ ಮೀನುಗಾರಿಕೆ ನಡೆಸುತ್ತಿದ್ದ ಸ್ಥಳೀಯ ಮೀನುಗಾರರೊಬ್ಬನಿಗೆ ೩೮ ಕೆ. ಜಿ ತೂಕದ ದೊಡ್ಡ ಮೀನು ಬಲೆಗೆ ಬಿದ್ದಿದೆ.
ಮೀನುಗಾರ ಭರತ ಯಮನೂರಿ ಸಾಳೆ ಹೇಳುವಂತೆ, ‘ಇದು ಕಟ್ಟಾ ಜಾತಿಗೆ ಸೇರಿದ ಮೀನಾಗಿದ್ದು, ೩೮ ಕೆ. ಜಿ ತೂಕವಿದೆ. ಕಳೆದ ವಾರ ೩೫ ಕೆ. ಜಿ ತೂಕದ ಮೀನು ಇದೇ ಸ್ಥಳದಲ್ಲಿ ಇನ್ನೊಬ್ಬ ಮೀನುಗಾರನಿಗೆ ಸಿಕ್ಕಿತ್ತು. ಈಗ ನನಗೆ ಸಿಕ್ಕಿದೆ ಎಂದು ಪುಷ್ ಖುಷಿಯಾಗಿದೆ ಎಂದು ನಮ್ಮೊಂದಿಗೆ ಹಂಚಿಕೊAಡಿದ್ದಾರೆ.