Congress’ 10 guarantees: From health benefits to employment promises-ಶ್ರಮಿಕರು, ಶೋಷಿತರಿಗೆ ನ್ಯಾಯ: ಕಾಂಗ್ರೆಸ್ 10 ಗ್ಯಾರಂಟಿ ಘೋಷಣೆ

WhatsApp Group Join Now
Telegram Group Join Now
Instagram Group Join Now
Spread the love

ಶ್ರಮಿಕರು, ಶೋಷಿತರಿಗೆ ನ್ಯಾಯ: ಕಾಂಗ್ರೆಸ್ 10 ಗ್ಯಾರಂಟಿ ಘೋಷಣೆ

 

ಶ್ರಮಿಕರು, ಶೋಷಿತರಿಗೆ ನ್ಯಾಯ: ಕಾಂಗ್ರೆಸ್ 10 ಗ್ಯಾರಂಟಿ ಘೋಷಣೆ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯುವಕರಿಗೆ, ರೈತರಿಗೆ, ಮಹಿಳೆಯರಿಗೆ ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದ ಕಾಂಗ್ರೆಸ್, ಶನಿವಾರ ಮತ್ತೆರಡು ಗ್ಯಾರಂಟಿಗಳನ್ನು ನೀಡಿದೆ. ಈ ಬಾರಿ ಕಾರ್ಮಿಕರಿಗೆ ಶಕ್ತಿ ತುಂಬಲು ಶ್ರಮಿಕ್ ನ್ಯಾಯ್, ಪರಿಶಿಷ್ಟರು, ಇತರೆ ಹಿಂದುಳಿದವರಿಗೆ ಹಿಸ್ಸೇದಾರಿ ನ್ಯಾಯ್ ಗ್ಯಾರಂಟಿ ನೀಡಿದೆ. ಹಿಸ್ಸೇದಾರಿ (ಶೋಷಿತ) ನ್ಯಾಯದ ಮೂಲಕ ಬಡವರು ಮತ್ತು ಶ್ರೀಮಂತರ ನಡುವಿನ ಕಂದಕವನ್ನು ಕಡಿಮೆ ಮಾಡುವುದಾಗಿ ಕಾಂಗ್ರೆಸ್ ಹೇಳಿಕೊಂಡಿದೆ.

ಶ್ರಮಿಕ ನ್ಯಾಯ್ ಗ್ಯಾರಂಟಿ

1 ಆರೋಗ್ಯದ ಹಕ್ಕು: ಎಲ್ಲಕಾರ್ಮಿಕರಿಗೂ ಸಾರ್ವತ್ರಿಕ ಆರೋಗ್ಯ ಕಾಳಜಿ ನೀಡಲು ಉಚಿತ ಔಷಧ, ಚಿಕಿತ್ಸೆ ಅಗತ್ಯ ಪರೀಕ್ಷೆ ಸರ್ಜರಿ ವ್ಯವಸ್ಥೆ ಕಲ್ಪಿಸುವ ಆರೋಗ್ಯದ ಹಕ್ಕು.

2ದಿನಗೂಲಿ ಗ್ಯಾರಂಟಿ: ಕಾರ್ಮಿಕರಿಗೆ ಸಮಾನ ವೇತನ ದೊರೆಯಬೇಕೆಂಬ ಪರಿಕಲ್ಪನೆಯಡಿ 400 ರೂಪಾಯಿ ಮೊತ್ತವನ್ನು ಕನಿಷ್ಠ ದಿನಗೂಲಿಯಾಗಿ ನಿಗದಿಪಡಿಸುವ ಗ್ಯಾರಂಟಿ.

3 ನಗರಕ್ಕೆ ನರೇಗಾ: ನರೇಗಾ ಯೋಜನೆಯಡಿ ದೇಶವ್ಯಾಪಿ ದಿನಕ್ಕೆ 400 ರೂ.ಗಳನ್ನೇ ಕಡ್ಡಾಯಗೊಳಿಸುವುದು, ನಗರ ಪ್ರದೇಶಕ್ಕೂ ಉದ್ಯೋಗ ಖಾತ್ರಿ ಕಾಯ್ದೆಯನ್ನು ರೂಪಿಸುವುದು.

4ಸಾಮಾಜಿಕ ಭದ್ರತೆ ಗ್ಯಾರಂಟಿ:ಎಲ್ಲಅಸಂಘಟಿತ ಕಾರ್ಮಿಕರಿಗೆ ಜೀವ ವಿಮೆ ಮತ್ತು ಅಪಘಾತ ವಿಮೆಗಳನ್ನು ಕಲ್ಪಿಸುವ ಸಮಗ್ರ ಸಾಮಾಜಿಕ ಭದ್ರತೆಯ ಗ್ಯಾರಂಟಿ.

5 ಗುತ್ತಿಗೆ ನೇಮಕ ಇಲ್ಲ: ಕೇಂದ್ರ ಸರ್ಕಾರದಲ್ಲಿ ಗುತ್ತಿಗೆ ಸಿಬ್ಬಂದಿ ನೇಮಕಕ್ಕೆ ತಡೆ. ಖಾಸಗಿ ವಲಯದಲ್ಲಿ ಗುತ್ತಿಗೆ ಉದ್ಯೋಗಿಗಳಿಗೂ ಸಾಮಾಜಿಕ ಭದ್ರತೆ ನೀಡಲು ಕ್ರಮ.

 

ಶೋಷಿತರಿಗೆ ನ್ಯಾಯ್ ಗ್ಯಾರಂಟಿ

1 ಜಾತಿಗಣತಿ ಗ್ಯಾರಂಟಿ: ಜನಸಂಖ್ಯೆಯ ಸಮಗ್ರ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಸಮೀಕ್ಷೆಯನ್ನುನಡೆಸಿ, ದೇಶದ ಸಂಪತ್ತಿನಲ್ಲಿ ಎಲ್ಲ ಜಾತಿ ಮತ್ತು ಸಮುದಾಯಗಳ ಪ್ರಾತಿನಿಧ್ಯಕ್ಕೆ ತಕ್ಕಂತೆ ಪಾಲು.

2 ಮೀಸಲು ಮಿತಿ ರದ್ದು: ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಇರುವ ಶೇ.50ರ ಮೀಸಲಾತಿಯ ಮಿತಿಯನ್ನು ಹೆಚ್ಚಿಸಲು ಸಂವಿಧಾನಕ್ಕೆ ತಿದ್ದುಪಡಿ ತರಲಾಗುವುದು.

3ವಿಶೇಷ ಘಟಕ ಯೋಜನೆ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿಶೇಷ ಘಟಕ ಯೋಜನೆಯನ್ನು ಪುನಶ್ವೇತನಗೊಳಿಸಿ ಆಯವ್ಯಯದಲ್ಲಿ ನಿಗದಿತ ಪ್ರಮಾಣದ ಅನುದಾನ ಮೀಸಲಿಡಲಾಗುವುದು.

4 ಅದಿವಾಸಿಗಳ ಹಕ್ಕು ರಕ್ಷಣೆ: ಆದಿವಾಸಿಗಳ ಅರಣ್ಯ ಹಕ್ಕುಗಳನ್ನು ರಕ್ಷಿಸಲಾಗುವುದು. 1. ವರ್ಷದೊಳಗೆ ಬಾಕಿ ಇರುವ ಅರಣ್ಯ ಹಕ್ಕು ಪ್ರಕರಣಗಳ       ಇತ್ಯರ್ಥಪಡಿಸಲಾಗುವುದು

5 ಕನಿಷ್ಠ ಬೆಂಬಲ ಬೆಲೆ: ಆದಿವಾಸಿಗ ಬದುಕಿನ ಸುಧಾರಣೆಗೆ ಕಿರು ಅರಣ್ಯ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿ ಮಾಡಲಾಗುವುದು.


Spread the love

Leave a Comment

error: Content is protected !!