World Environment Day Celebration ಎಸ್ ಎಸ್ ಕಡಪಟ್ಟಿ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ
ವಿಶ್ವ ಪರಿಸರ ದಿನ ಆಚರಣೆ
ಹುನಗುಂದ: ಪರಿಸರವನ್ನು ಉಳಿಸಬೇಕಾದರೆ ಹೆಚ್ಚು ಗಿಡ-ಮರಳನ್ನು ಬೆಳಸಬೇಕು ಕಾಡನ್ನು ಬೆಳಸಿ ನಾಡು ಉಳಿಸಿ. ಕಾಡು ಬೆಳೆದರೆ ಉತ್ತಮವಾದ ಮಳೆ ಬೆಳೆಯಾಗುತ್ತದೆ. ಇದರಿಂದ ಪ್ರತಿಯೊಬ್ಬರೂ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಮಾತಾ ಎಜುಕೇಶನ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜ ಕಡಪಟ್ಟಿ ಹೇಳಿದರು.
ಪಟ್ಟಣದ ಎಸ್ ಎಸ್ ಕಡಪಟ್ಟಿ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯಲ್ಲಿ ಬುಧವಾರ ನಡೆದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಟ್ಟು ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಆಧುನಿಕ ಜೀವನ ಶೈಲಿಯೊಂದಿಗೆ ಪರಿಸರ ಅವನತಿಯ ಅಂಚಿಗೆ ಬಂದಿದೆ. ಇಂದಿನ ಮಕ್ಕಳು ಪರಿಸರವನ್ನು ಉಳಿಸುವುದು ಅನಿವಾರ್ಯವಾಗಿದೆ. ಪರಿಸರ ದಿನಾಚರಣೆಯಲ್ಲಿ ಮಾತ್ರ ಗಿಡ ನೆಡುವುದನ್ನು ಬಿಟ್ಟು, ಸದಾ ಕಾಲ ಪರಿಸರದ ಕಾಳಜಿ ಹೊಂದಬೇಕು. ವಿದ್ಯಾರ್ಥಿಗಳು ತಮ್ಮ ಬಡಾವಣೆಯ ರಸ್ತೆ ಪಕ್ಕದಲ್ಲಿ, ಮನೆಯ ಅಕ್ಕ-ಪಕ್ಕದಲ್ಲಿ ಗಿಡಗಳನ್ನು ನೆಟ್ಟು ಪೋಷಿಸಬೇಕು.
ಪ್ರಸ್ತುತ ದಿನಗಳಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿದ್ದು, ಈ ವರ್ಷದ ಬೇಸಿಗೆಯಲ್ಲಿ ಶೇ.೪೨ ಡಿಗ್ರಿಯಷ್ಟು ಅತಿ ಹೆಚ್ಚಿನ ಬಿಸಿಲಿನ ತಾಪಮಾನ ದಾಖಲಾಗಿದ್ದು ಆದ್ದರಿಂದ ಗಿಡಗಳನ್ನು ಕಡೆಯುವದರಿಂದ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಪರಿಸರವನ್ನು ಉಳಿಸಬೇಕಾದರೆ ಹೆಚ್ಚು ಗಿಡ-ಮರಗಳನ್ನು ಬೆಳಸಬೇಕು ಎಂದು ತಿಳಿಸಿದರು.
ಶಾಲೆಯ ವಿದ್ಯಾರ್ಥಿಗಳು ಪರಸರ ರಕ್ಷಣೆ ಕುರಿತು ಕಿರು ನಾಟಕವನ್ನು ಮಾಡಿದರು. ಶಾಲೆಯ ಆಡಳಿತ ಅಧಿಕಾರಿ ಲತಾ ಕಡಪಟ್ಟಿ, ಪ್ರಿಸ್ಸಿಪಾಲ್ ಸಾಯಿ ಕೃಷ್ಣಾ, ಶಿಕ್ಷಕರಾದ ಪ್ರದೀಪ ರಾಠೋಡ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗಳು ಇದ್ದರು.






