
Public beware ಸಾರ್ವಜನಿಕರೇ ಎಚ್ಚರ್ !!! ಮಹಿಳೆಯರೇ ನೀವು ಬಲು ಎಚ್ಚರದೀಂದಿರಿ
ತಪ್ಪದೇ ಈ ಸುದ್ದಿಯನ್ನು ಓದಿ
ಇಳಕಲ್ : ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎಚ್ಚುತ್ತಿರುವ ಕಳ್ಳತನ ಪ್ರಕರಣಗಳು ಹೌದು ಮನೆಗಳ್ಳತನ ಮತ್ತು ಸರಗಳ್ಳತನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಆದ್ದರಿಂದ ಸಾರ್ವಜನಿಕರು ಎಚ್ಚರವಾಗಿರಬೇಕಾಗಿದೆ.
ಮನೆಯಲ್ಲಿ ಒಡವೆ ಮತ್ತು ಹಣವನ್ನು ಇಡದೇ ತಮ್ಮ ಬ್ಯಾಂಕ್ ಖಾತೆಗಳಲ್ಲಿ ಇಟ್ಟುಕೊಳ್ಳಬೇಕು ನೀವು ಊರಿಗೆ ಹೋಗುವ ಸಮಯದಲ್ಲಿ ಪೋಲಿಸರಿಗೆ ಮತ್ತು ಅಕ್ಕ ಪಕ್ಕದ ಮನೆಯವರಿಗೆ ಮನೆಯತ್ತ ನೋಡಿಕೊಳ್ಳಿ ಎಂದು ಹೇಳಬೇಕು ಮನೆಯಲ್ಲಿ ಬಂಗಾರದ ವಸ್ತುಗಳಾಗಲಿ ಅಥವಾ ಹಣವಾಗಲಿ ಇಡಬಾರದು.
ಮನೆಯ ಹೊರಗಡೆ ಮತ್ತು ಒಳಗಡೆ ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳಬೇಕು, ಇನ್ನೂ ಮಹಿಳೆಯರು ನಿರ್ಜನ ಪ್ರದೇಶದಲ್ಲಿ ಮೈತುಂಬ ಒಡವೆಗಳನ್ನು ಹಾಕಿಕೊಂಡು ಸಂಚರಿಸಬಾರದು ಸರಗಳ್ಳರು ನಿಮ್ಮ ಚಲನ ವಲನಗಳ ಮೇಲೆ ಕಣ್ಣಿಟ್ಟು ಕಾಯ್ದು ನಿಮ್ಮ ಮೇಲೆ ದಾಳಿ ಮಾಡಿ ಸರಗಳ್ಳತನ ಮಾಡವುದುದಲ್ಲದೇ ನಿಮ್ಮ ಮೇಲೆ ಹಲ್ಲೆಯನ್ನು ಮಾಡುತ್ತಾರೆ.
ಆದಷ್ಟು ಮಹಿಳೆಯರು ಮೈತುಂಬ ಆಭರಣಗಳನ್ನು ಧರಿಸಿಕೊಂಡು ಒಬ್ಬೊಬ್ಬರೇ ಸಂಚರಿಸಬಾರದು ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು ಪೋಲಿಸರ ಜೊತೆಗೆ ಸಹಕರಿಸಬೇಕು ಕಳ್ಳತನ ಆಗದಂತೆ ಎಚ್ಚರಿಕೆ ವಹಿಸಬೇಕು.
* ನಿಮ್ಮ ಮನೆಯ ಸುತ್ತಮುತ್ತ ಅಪರಿಚಿತರು ಕಂಡರೆ ತಕ್ಷಣವೇ ಸಮೀಪದ ಪೋಲಿಸ್ ಠಾಣೆಗೆ ಮಾಹಿತಿಯನ್ನು ತಿಳಿಸಿರಿ ಇಲ್ಲವೇ ಪೋಲಿಸ್ ಸಹಾಯವಾಣಿ 112 ಸಂಪರ್ಕಿಸಿರಿ ಎಂದು ಇಳಕಲ್ ಶಹರ್ ಪೋಲಿಸ್ ಠಾಣೆಯ ಪಿಎಸ್ಐ ಸೋಮೇಶ ಗೆಜ್ಜಿ ಪಬ್ಲಿಕ್ ಟೈಮ್ಸ್ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ*
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)





