ಕ್ರೀಡೆಯಿಂದ ಉತ್ತಮ ಆರೋಗ್ಯ ವೃದ್ಧಿ : ಶಾಸಕ ವಿಜಯಾನಂದ ಕಾಶಪ್ಪನವರ
ಹುನಗುಂದ : ಕ್ರೀಡೆಯಲ್ಲಿ ಭಾಗವಹಿಸುವದರಿಂದ ನಿತ್ಯ ಒತ್ತಡದ ಜೀವನಕ್ಕೆ ಮುಕ್ತಿ ಸಿಗುತ್ತದೆ. ಕ್ರೀಡೆಯಿಂದ ಉತ್ತಮ ಆರೋಗ್ಯ ಕಾಪಾಡಲು ಸಾಧ್ಯ ಕ್ರೀಡೆಯಲ್ಲಿ ಸೋಲು-ಗೆಲವು ಇರುತ್ತದೆ ಅದನ್ನೂ ಯಾರು ವೈಯಕ್ತಿಕವಾಗಿ ತೆಗೆದುಕೊಳ್ಳದೇ ಸಮನಾಗಿ ಸ್ವೀಕರಿಸಬೇಕೆಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.ಹುನಗುಂದ ಪಟ್ಟಣದ ತಾಲೂಕಾ ಕ್ರೀಡಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ತಾಲೂಕಾ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಹುನಗುಂದ-ಇಲಕಲ್ಲ ತಾಲೂಕಿನ ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳು, ರಾಜ್ಯ ನೌಕರರ ಸಂಘ, ಭಾರತೀಯ ವೈಧ್ಯಕೀಯ ಸಂಘದ ಹಾಗೂ ಆಯುಷ್ಯ ಪಡ್ರೇಷನ್ ಆಫ್ ಇಂಡಿಯಾ ಸಹಯೋಗದಿಂದ ಹಮ್ಮಿಕೊಂಡ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೇಟ್ ಪಂದ್ಯಾವಳಿಗೆ ಶಾಸಕ ವಿಜಯಾನಂದ ಕಾಶಪ್ಪನವರ ಚಾಲನೆಯನ್ನು ನೀಡಿ ಮಾತನಾಡಿದರು.
ಹುನಗುಂದ ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಅಂಗಡಿ, ಬದಾಮಿ ತಾಲೂಕಾ ಆರೋಗ್ಯಾಧಿಕಾರಿ ಡಾ.ಎಂ.ಬಿ.ಪಾಟೀಲ, ಮುಖ್ಯವೈಧ್ಯಾಧಿಕಾರಿ ಡಾ.ಮಂಜುನಾಥ ಅಂಕೋಲೇಕರ, ಡಾ. ರೇವಣ ಸಿದ್ದಪ್ಪ, ಡಾ.ಚುರಚಪ್ಪ ಶೆಲಲ್ಲಿಕೇರಿ, ಸಹಾಯಕ ಆಡಳಿತಾಧಿಕಾರಿ ಆರ್.ಡಿ,ಕನ್ನೊಳ್ಳಿ, ಆರೋಗ್ಯ ರಕ್ಷಣಾ ಸಮಿತಿ ಉಪಾಧ್ಯಕ್ಷ ಶಿವಾನಂದ ಕಂಠಿ, ಸದಸ್ಯರಾದ ಸಂಜೀವ ಜೋಷಿ,ರಫೀಕ ವಾಲೀಕಾರ, ಅಮರೇಶ ನಾಗೂರ, ನೌಕರರ ಸಂಘದ ಅಧ್ಯಕ್ಷರಾದ ಸಂಗಣ್ಣ ಹಂಡಿ, ಪರಶುರಾಮ ಪಮ್ಮಾರ ಸೇರಿದಂತೆ ಇತರರು ಇದ್ದರು.