Car accident ಒನ್ವ್ಹೇದಲ್ಲಿ ಕಾರು ಅಪಘಾತ : ಪ್ರಾಣಾಪಾಯದಿಂದ ಪಾರು
ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಗುಗ್ಗಲಮರಿ ಕ್ರಾಸ್ ಹತ್ತಿರ ನಡೆದ ಅಪಘಾತದಲ್ಲಿ ಇಬ್ಬರಿಗೆ ಗಾಯವಾಗಿ ಕಾರು ಸಂಪೂರ್ಣ ನುಚ್ಚಾದ ಘಟನೆ ಮಂಗಳವಾರದAದು ನಡೆದಿದೆ.
ಹೈವೇಯಲ್ಲಿ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದರಿಂದ ಒನ್ ವ್ಹೇಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಕುರಿತು ಇಳಕಲ್ಲ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರು ಅಪಘಾತದಲ್ಲಿ ಸಂಪೂರ್ಣ ನುಜ್ಜು ಗುಚ್ಚಾಗಿದೆ.ಹೆದ್ದಾರಿಯಲ್ಲಿ ಕಾಮಗಾರಿಯನ್ನು ಬೇಗನೆ ಮುಗಿಸಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಇಲ್ಲದಿದ್ದರೆ ಅಲ್ಲಿ ಹೆಚ್ಚು ಅಪಘಾತ ಪ್ರಕರಣಗಳು ನಡೆಯುತ್ತಿವೆ. ಮೊನ್ನೆ ತಾನೆ ಲಾರಿ ಮತ್ತು ಬಸ್ ನಡುವೆ ಸರಣಿ ಅಪಘಾತ ಸಂಭವಿಸಿರುವದು ಇಲ್ಲಿ ಸ್ಮರಿಸಬಹುದು.