Blood donation camp ಥೆಲಸಿಮಿಯಾ ಪೀಡಿತ ಮಕ್ಕಳಿಗಾಗಿ ಜೂನ್ 16 ರಂದು ರಕ್ತದಾನ ಶಿಬಿರ
ಇಳಕಲ್ : ಮಕ್ಕಳಲ್ಲಿ ಕಾಡುವ ಮಾರಕ ಥೆಲಿಸಿಮಿಯಾ ರೋಗವನ್ನು ತಡೆಗಟ್ಟಲು ರಕ್ತದ ಅವಶ್ಯಕತೆ ಬಹಳಷ್ಟಿದ್ದು ಅಂತಹ ಮಕ್ಕಳಿಗಾಗಿ ರಕ್ತದಾನ ಶಿಬಿರವನ್ನು ಜೂನ್ 16 ಭಾನುವಾರದಂದು ಹಮ್ಮಿಕೊಳ್ಳಲಾಗಿದೆ ಎಂದು ಮಹೇಶ್ವರಿ ಚಿಕ್ಕಮಕ್ಖಳ ಆಸ್ಪತ್ರೆಯ ಮುಖ್ಯ ವೈದ್ಯ ಪವನಕುಮಾರ ದರಕ ಹೇಳಿದರು.
ಗುರುವಾರದಂದು ಮಹೇಶ್ವರಿ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಇಳಕಲ್, ಹುನಗುಂದ ಕುಷ್ಟಗಿ ತಾಲೂಕುಗಳಲ್ಲಿ ಥೆಲಸಿಮಿಯಾ ಪೀಡಿತ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ ಅಂತಹ ಮಕ್ಕಳನ್ನು ಅವರ ಗ್ರುಪ್ಪಿನ ರಕ್ತವನ್ನು ಕಾಲಕಾಲಕ್ಕೆ ನೀಡಬೇಕು ಅದಕ್ಕಾಗಿ ರಕ್ತದ ಶೇಖರಣೆ ಅತ್ಯವಶ್ಯವಾಗಿದೆ.
ಈ ನಿಟ್ಟಿನಲ್ಲಿ ರಾಮಾನುಜಾಚಾರ್ಯ ಫೌಂಡೇಶನ್ ಸಾಕಷ್ಟು ರೀತಿಯಲ್ಲಿ ಕಾರ್ಯ ಪ್ರವರ್ತವಾಗಿ ಹಣದ ದೇಣಿಗೆ ಸಂಗ್ರಹಿಸುವ ಜೊತೆಗೆ ರಕ್ತವನ್ನು ಸಹ ಶೇಖರಣೆ ಮಾಡಲು ಪ್ರಯತ್ನ ಮಾಡುತ್ತಲಿದೆ ಸಾರ್ವಜನಿಕರಿಂದ ಉತ್ತಮ ಬೆಂಬಲ ದೊರೆಕಿದೆ ಈ ಬಾರಿಯೂ ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡಿ ಇದನ್ನು ಯಶಸ್ವಿಯಾಗಿಸಬೇಕು ಎಂದು ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಗೋಕುಲ ದರಕ,ರಮಾನಂದ ದರಕ ದಂತ ವೈದ್ಯೆ ರಶ್ಮೀ ದರಕ ಮತ್ತಿತರರು ಉಪಸ್ಥಿತರಿದ್ದರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)