House collapsed ಭಾರೀ ಮಳೆಗೆ ಮನೆ ಕುಸಿದು : ವ್ಯಕ್ತಿಯೋರ್ವ ಸಾವು
ಬಾಗಲಕೋಟೆ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಜಂತಿ ಮನೆ ಕುಸಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ಜರುಗಿದೆ.
ಜಮಖಂಡಿ ನಗರದ ಮೋಮಿನ ಗಲ್ಲಿಯ ಮುಸ್ತಾಕ ಮಕಬುಲ್ ಸಾಬ್ ಆವಟಿ (೪೩) ಮೃತ ದುರ್ದೈವಿ. ಮುಸ್ತಾಕ ಅವರ ಪತ್ನಿ, ಮಕ್ಕಳು ಪಕ್ಕದ ಇನ್ನೊಂದು ಮನೆಯಲ್ಲಿದ್ದಾಗ ಘಟನೆ ನಡೆದಿದೆ. ಇನ್ನು ಘಟನಾ ಸ್ಥಳಕ್ಕೆ ತಹಸೀಲ್ದಾರ್ ಹಾಗೂ ಶಹರ್ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






