ಟಿಕೆಟ್ ಕೈ ತಪ್ಪಿದರೆ :ಎಲೆಕ್ಷನ್ ಬಾಯ್‌ಕಾಟ್ ವೀಣಾ ಕಾಶಪ್ಪನವರ ಬೆಂಬಲಿಗರ ನಿರ್ಧಾರ!
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಬಾಗಲಕೋಟೆ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಅವರಿಗೆ ಬಾಗಲಕೋಟೆ ಲೋಕಸಭಾ ಕಾಂಗ್ರೆಸ್ ಪಕ್ಷದ ಟಿಕೇಟ್ ನೀಡಬೇಕು ಎಂದು ಪಕ್ಷದ ಮಹಿಳಾ ಘಟಕದ ನಾರಿಮಣಿಯರು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
ಪಕ್ಷದ ಅಭಿವೃದ್ಧಿಗಾಗಿ ವೀಣಾ ಕಾಶಪ್ಪನವರ ಸಾಕಷ್ಟು ಸಂಘಟನೆಯನ್ನು ಮಾಡುವ ಜೊತೆಗೆ ಈಗಾಗಲೇ ಹಲವಾರು ಸಾರ್ವಜನಿಕ ಸಮಾರಂಭಗಳನ್ನು ಜಿಲ್ಲೆಯಾದ್ಯಂತ ನಡೆಸಿದ್ದಾರೆ ವಿವಿಕೆ ಫೌಂಡೇಶನ್ ವತಿಯಿಂದ ಸಾಕಷ್ಟು ಯುವಜನರಿಗೆ ಸದುಪಯೋಗ ಆಗುವ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಏರ್ಪಡಿಸಿ ಪ್ರೋತ್ಸಾಹ ಮಾಡಿದ್ದಾರೆ.
ಇಂತಹ ಸಮಯದಲ್ಲಿ ಪಕ್ಷದ ಟಿಕೇಟ್ ಬೇರೆಯವರಿಗೆ ನೀಡುವ ಬದಲಿಗೆ ಪಕ್ಷಕ್ಕಾಗಿ ಅಹರ್ನಿಶಿ ದುಡಿದ ವೀಣಾ ಅವರಿಗೆ ನೀಡಲೇಬೇಕು ಬೇರೆಯಾರಿಗಾದರೂ ಟಿಕೆಟ್ ನೀಡಿದರೇ ಮತದಾನವನ್ನು ಬಹಿಷ್ಕರಿಸುತ್ತೇವೆ ಎಂದು ಮಹಿಳೆಯರಾದ ಸಂಗೀತಾ ಮಡಿವಾಳರ ಸುವರ್ಣ ಪಲ್ಲೇದ ಮಂಜುಳಾ ಗರಡಿಮನಿ ಮತ್ತಿತರರು ಪಕ್ಷದ ವರಿಷ್ಠರಾದ ಸಿಎಂ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಅವರನ್ನು ಆಗ್ರಹಿಸಿದ್ದಾರೆ.