Alien ಏಲಿಯನ್ಗಳು ಮಾನವರ ವೇಷ ಧರಿಸಿ ನಮ್ಮ ನಡುವೆ ರಹಸ್ಯವಾಗಿ ವಾಸಿಸುತ್ತಿರಬಹುದು : ಹಾರ್ವರ್ಡ್
ಹಾರ್ವರ್ಡ್ ವಿಶ್ವವಿದ್ಯಾನಿಲಯದ ಒಂದು ಅಧ್ಯಯನವು ಏಲಿಯನ್ (ಭೂಮ್ಯತೀತ ಜೀವಿಗಳು) ಮಾನವರ ವೇಷ ಧರಿಸಿ ನಮ್ಮ ನಡುವೆ ರಹಸ್ಯವಾಗಿ ವಾಸಿಸುತ್ತಿರಬಹುದು ಎಂಬ ಊಹೆಯನ್ನು ಒಳಗೊಂಡಿರುವ ವಾದವನ್ನು ಪರಿಚಯಿಸಿದೆ. ಹಾರ್ವರ್ಡ್ನ ಹ್ಯೂಮನ್ ಫ್ಲೂರಿಶಿಂಗ್ ಪ್ರೋಗ್ರಾಂ ನಡೆಸಿದ ಸಂಶೋಧನೆಯು ಗುರುತಿಸಲಾಗದ ಅಸಹಜ ವಿದ್ಯಮಾನಗಳು (UFOs) ಮತ್ತು ಹಾರುವ ತಟ್ಟೆಯ ತರಹದ ವಸ್ತುಗಳು (ಯುಎಫ್ಒ) ಇರುವಿಕೆಯನ್ನು ಪರಿಶೀಲನೆ ಮಾಡಲು ಮುಂದಾಗಿತ್ತು, ಅವು ನಮ್ಮ ಗ್ರಹದ ನಮಗೆ ಯಾರಿಗೂ ಕಾಣದೆ ಗುಪ್ತವಾಗಿ ವಾಸಿಸುತ್ತಿರುವ ನಾಗರಿಕತೆಗಳೊಂದಿಗೆ ಸಂಪರ್ಕ ಸಾಧಿಸಿ ಅಥವಾ ಹೆಚ್ಚಿನ ಮುಂದುವರೆದ ತಂತ್ರಜ್ಞಾನದೊಂದಿಗೆ ಇರುವ ಜೀವಿಗಳು ಭೂಮಿಗೆ ಭೇಟಿ ನೀಡುವ ಬಾಹ್ಯಾಕಾಶ ನೌಕೆ ಆಗಿರಬಹುದು ಎಂದು ಊಹಿಸಲಾಗಿದೆ,
ನಾಲ್ಕು ಕುತೂಹಲಕಾರಿ ಸಿದ್ಧಾಂತಗಳು
“ದಿ ಕ್ರಿಪ್ಟೋಟೆರೆಸ್ಟ್ರಿಯಲ್ ಹೈಪೋಥೆಸಿಸ್ಃ ಎ ಕೇಸ್ ಫಾರ್ ಸೈಂಟಿಫಿಕ್ ಓಪನ್ ನೆಸ್ ಟು ಎ ಹಿಡನ್ಡ್ ಅರ್ಥ್ಲಿ ಎಕ್ಸ್ಪ್ಲನೇಷನ್ ಫಾರ್ ಅನ್ಐಡೆಂಟಿಫೈಡ್ ಅನೋಮಾಲಸ್ ಫಿನೋಮಿನಾ” ಎಂಬ ಶೀರ್ಷಿಕೆಯಡಿಯಲ್ಲಿ ಪ್ರಕಟವಾದ ಈ ಅಧ್ಯಯನವು ಈ ಜೀವಿಗಳ ಬಗ್ಗೆ ನಾಲ್ಕು ಕುತೂಹಲಕಾರಿ ಸಿದ್ಧಾಂತಗಳನ್ನು ಮಂಡಿಸಿವೆ.
1. ಮಾನವ ಕ್ರಿಪ್ಟೊಟೆರೆಸ್ಟ್ರಿಯಲ್ಸ್ಃ ಈ ಸಿದ್ಧಾಂತವು ತಾಂತ್ರಿಕವಾಗಿ ಮುಂದುವರಿದ ಪ್ರಾಚೀನ ಮಾನವ ನಾಗರಿಕತೆಯು ಪ್ರವಾಹದಂತಹ ವಿನಾಶಕಾರಿ ವಿಪತ್ತುಗಳನ್ನು ಎದುರಿಸಿ ಅತಿ ಕಡಿಮೆ ಸಂಖ್ಯಾ ಪ್ರಮಾಣದಲ್ಲಿ ಭೂಮಿಯ ನಿಗೂಢ ಪ್ರದೇಶಗಳಲ್ಲಿ ಉಳಿದುಕೊಂಡಿರಬಹುದು. ಎಂದು ಹೇಳುತ್ತದೆ.
2. ಹೋಮಿನಿಡ್/ಥೆರೊಪಾಡ್ ಕ್ರಿಪ್ಟೊಟೆರೆಸ್ಟ್ರಿಯಲ್ಸ್ಃ ಈ ಸಿದ್ಧಾಂತದ ಪ್ರಕಾರ, ಈ ಜೀವಿಗಳು ಮಾನವರೊಂದಿಗೆ ರಹಸ್ಯವಾಗಿ ವಿಕಸನಗೊಳ್ಳುತ್ತಿರುವ ಮಾನವ-ಅಲ್ಲದ ನಾಗರಿಕತೆಯಿಂದ ಬಂದ ಕೋತಿ-ರೀತಿಯ ಹೋಮಿನಿಡ್ಗಳು ಅಥವಾ ಬುದ್ಧಿವಂತ ಡೈನೋಸಾರ್ಗಳ ವಂಶಸ್ಥರಾಗಿರಬಹುದು.
3. ಭೂಮ್ಯತೀತ/ಎಕ್ಸ್ಟ್ರಟೆಂಪೆಸ್ಟ್ರಿಯಲ್ ಕ್ರಿಪ್ಟೊಟೆರೆಸ್ಟ್ರಿಯಲ್ಸ್ಃ ಈ ಜೀವಿಗಳು ಮೂಲತಃ ಬಾಹ್ಯಾಕಾಶದಿಂದ ಅಥವಾ ಮಾನವ ಭವಿಷ್ಯದಿಂದ ಬಂದಿರಬಹುದು ನಂತರ ಬಹುಶಃ ಚಂದ್ರನ ಮೇಲೆ ರಹಸ್ಯವಾಗಿ ವಾಸಿಸಲು ಹೊಂದಿಕೊಂಡಿರಬಹುದು ಎಂದು ಅಧ್ಯಯನವು ಹೇಳುತ್ತದೆ .
4. ಮ್ಯಾಜಿಕಲ್ ಕ್ರಿಪ್ಟೊಟೆರೆಸ್ಟ್ರಿಯಲ್ಸ್ (ಸಿ. ಟಿ. ಎಚ್. 4) ಏಲಿಯನ್ ಅನ್ನು “ಭೂಗತ ದೇವತೆಗಳು” ಎಂದು ವಿವರಿಸಲಾಗಿದೆ, ಈ ಘಟಕಗಳು ಯಕ್ಷ ಯಕ್ಷಿಣಿಯರು, ಪೌರಾಣಿಕ ಜೀವಿಗಳನ್ನು ಹೋಲುತ್ತವೆ.
ಹಾರ್ವರ್ಡ್ ವಿಶ್ವವಿದ್ಯಾನಿಲಯ ಈ ಜೀವಿಗಳ ಬಗ್ಗೆ ನಾಲ್ಕು ಕುತೂಹಲಕಾರಿ ಸಿದ್ಧಾಂತಗಳನ್ನು ಮಂಡಿಸಿವೆ.