ಇಳಕಲ್ ನಗರದಲ್ಲಿ ಡ್ರೋನ್ ಹಾರಿಸಿದ ಪೋಲಿಸರು
ಇಳಕಲ್ : ಬಕ್ರೀದ್ ಹಬ್ಬದ ಸಮಯದಲ್ಲಿ ಯಾವುದೇ ರೀತಿಯ ಅಹಿಕತರ ಘಟನೆಗಳು ಮತ್ತು ಗೋ ಹತ್ಯೆಗಳು ನಡೆಯದಂತೆ ನೋಡಿಕೊಳ್ಳಲು ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಶಹರ್ ಪೋಲಿಸ್ ಠಾಣೆಯ ಪಿಎಸ್‌ಐ ಎಸ್.ಆರ್.ನಾಯಕ ನೇತೃತ್ವದಲ್ಲಿ ಡ್ರೋನ್ ಹಾರಿಸುವ ಮೂಲಕ ಊರಲ್ಲಿನ ಚಲನ ವಲನಗಳನ್ನು ವೀಕ್ಷಣೆ ಮಾಡಿದರು.
ನಗರದ ಪ್ರಮುಖ ಸ್ಥಳಗಳಲ್ಲಿ ಡ್ರೋನ ಹಾರಿಸುವ ಮೂಲಕ ವಿಡಿಯೋಗಳನ್ನು ಸೆರೆ ಹಿಡಿದು ತದ ನಂತರ ಮಾಧ್ಯಮದೊಂದಿಗೆ ಮಾತನಾಡಿದ ಪಿಎಸ್‌ಐ ಎಸ್.ಆರ್.ನಾಯಕ ಬಾಗಲಕೋಟ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಆದೇಶ ಮೇರೆಗೆ ಇದನ್ನು ಮಾಡಲಾಗುತ್ತಿದೆ. ಬಕ್ರೀದ್ ಹಬ್ಬದಲ್ಲಿ ಗೋ ಹತ್ಯೆಯನ್ನು ಮಾಡುವದನ್ನು ನಿಷೇಧಿಸಲಾಗಿದೆ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯನ್ನು ನೀಡಿದ್ದೇವೆ. ಆದರೂ ನಮಗೆ ತಿಳಿಯದೇ ಗೋ ಹತ್ಯೆಯನ್ನು ಮಾಡುತ್ತಿದ್ದರೇ ಅಂತವರ ಮೇಲೆ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.
ಸಾರ್ವಜನಿಕರಿಗೆ ಗೋ ಹತ್ಯೆಯ ಬಗ್ಗೆ ಮತ್ತು ಅಹಿತಕರ ಘಟನೆಗಳು ಬಗ್ಗೆ ಮಾಹಿತಿ ಬಂದರೆ ಶಹರ್ ಪೋಲಿಸ್ ಠಾಣೆಗೆ ಮಾಹಿತಿ ತಿಳಿಸಬೇಕು ಇಲ್ಲವೇ ೧೧೨ ಕರೆ ಮಾಡಿ ಎಂದು ಹೇಳಿದರು.
ವರದಿ : ಭೀಮಣ್ಣ ಗಾಣಿಗೇರ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ