ಬಾಣಂತಿ ರಕ್ತಸ್ರಾವದಿಂದ ಸಾವು : ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಇಳಕಲ್ : ಮುಂಜಾನೆ ೯-೨೦ ಕ್ಕೆ ಮಹಿಳೆಯೊಬ್ಬಳು ಗಂಡು ಮಗುವಿಗೆ ಜನುಮ ನೀಡಿದ ನಂತರ ಅಧಿಕ ರಕ್ತಸ್ರಾವವಾಗಿ ಸಾವನ್ನಪ್ಪಿದ ಘಟನೆ ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ಲ ಗ್ರಾಮದಿಂದ ವರದಿಯಾಗಿದೆ.
ಕಂದಗಲ್ಲ ಗ್ರಾಮದ ನಿರ್ಮಲಾ ಮಂಜುನಾಥ ಪೋಲಿಸಪಾಟೀಲ ಕಂದಗಲ್ಲ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ ನಂತರ ರಕ್ತಸ್ರಾವ ಕ್ಕೆ ಒಳಗಾದಳು ಕೂಡಲೇ ಅವಳನ್ನು ಅಂಬುಲೆನ್ಸ್ ಮೂಲಕ
ಇಳಕಲ್ ನಗರದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಕರೆತರಲಾಯಿತು ಆದರೆ ಅಧಿಕ ರಕ್ತಸ್ರಾವ ಆದ ಕಾರಣ ನಿರ್ಮಲಾ ೧೨-೪೫ ಕ್ಕೆ ಸಾವನ್ನಪ್ಪಿದ್ದಳು ಎಂದು ವೈದ್ಯೆ ಅಂಜುಮ್ ಆರಾ ಪೋಲಿಸರಿಗೆ ಕೊಟ್ಟ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹಿರೇಅರಳ್ಳೋಳ್ಳಿ ಗ್ರಾಮದ ನಿರ್ಮಲಾ ಗಂಡ ಮಂಜುನಾಥ ಪೋಲಿಸಪಾಟೀಲ ಸುದ್ದಿಗಾರರೊಂದಿಗೆ ಮಾತನಾಡಿ ವೈದ್ಯರು ಸರಿಯಾಗಿ ಚಿಕಿತ್ಸೆಯನ್ನು ನೀಡಿದರೇ ನನ್ನ ಹೆಂಡತಿ ಉಳಿಯುತ್ತಿದ್ದಳು ಎಂದು ಪತಿ ಮಂಜುನಾಥ ಆಕ್ರೋಶವನ್ನು ವ್ಯಕ್ತಪಡಿಸಿದರು. ಕುಟುಂಬಸ್ಥರು ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಪಿಎಸ್‌ಐ ಮಲ್ಲು ಸತ್ತಿಗೌಡರ ಭೇಟಿ ನೀಡಿದ್ದಾರೆ
ಸುದ್ದಿ ತಿಳಿದು ಆಸ್ಪತ್ರೆಗೆ ಆಗಮಿಸಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿತ್ತು. ಕಂದಗಲ್ಲ ಗ್ರಾಮದ ಆಸ್ಪತ್ರೆಗೆ ಸರಿಯಾಗಿ ವೈದ್ಯರು ಸಮಯಕ್ಕೆ ಸರಿಯಾಗಿ ಬಾರದೇ ಹೋಗುವದರಿಂದ ಅಲ್ಲಿನ ನರ್ಸಗಳೇ ಹೆರಿಗೆಯನ್ನು ಮಾಡುತ್ತಿದ್ದು ಇಂತಹ ರಕ್ತಸ್ರಾವ ಆದಾಗ ಬೇರೆ ಆಸ್ಪತ್ರೆಗಳಿಗೆ ಕಳಿಸುತ್ತಾರೆ,
ವೈದ್ಯರು ಇದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಇನ್ನೂ ಮುಂದೆ ಇಂತಹ ಘಟನೆಗಳನ್ನು ನಡೆಯದಂತೆ ಆರೋಗ್ಯ ಇಲಾಖೆ ಎಚ್ಚರಿಕೆಯನ್ನು ವಹಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಕಾಯಾಧ್ಯಕ್ಷ ಗುರು ಗಾಣಿಗೇರ,
ಜಿಲ್ಲಾ ಉಪಾಧ್ಯಕ್ಷ ಶಶಿಕಾಂತ ಬಂಡರಗಲ್ಲ, ರಸೂಲಸಾಬ ತಹಸೀಲ್ದಾರ, ಬಸನಗೌಡ ಪೈಲ್ ರಾಜಮಹಮ್ಮದ ನದಾಫ್, ಕೃಷ್ಣಾ ಜಾಲಿಹಾಳ, ಬಸವನಗೌಡ ದಾದ್ಮಿ , ಮಹಾಂತೇಶ ಐಹೊಳ್ಳಿ ಆಗ್ರಹಿಸಿದ್ದಾರೆ.