ಜನಸ್ಪಂದನಾ ಗ್ರಾಮ ಮಟ್ಟದಲ್ಲೂ ಜನರ ಸಮಸ್ಯೆಗೆ ದನಿಯಾಗಲಿದೆ : ಶಾಸಕ ಕಾಶಪ್ಪನವರ
ಹುನಗುಂದ: ಜನ ಸ್ಪಂದನ ಕಾರ್ಯಕ್ರಮದಲ್ಲಿ ಸ್ವೀಕರಿಸಲಾಗಿರುವ ಎಲ್ಲ ಅರ್ಜಿಗಳನ್ನು ಸಂಬAಧ ಪಟ್ಟ ಇಲಾಖೆಗೆ ಪಟ್ಟಿಮಾಡಿ ನೀಡಲಾಗಿದ್ದು ಯಾವುದೇ ಅಧಿಕಾರಿಗಳು ವಿಳಂಭ ದೋರಣೆ ಅನುಸರಿಸಬಾರದು ಎಲ್ಲ ಅಧಿಕಾರಿಗಳು ಸಕರಾತ್ಮಕವಾಗಿ ಸ್ವಂಧಿಸಬೇಕು ಎಂದು ಜಿಲ್ಲಾಧಿಕಾರಿ ಜಾನಕಿ.ಕೆ.ಎಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಗುರವಾರ ನಡೆದ ತಾಲೂಕು ಮಟ್ಟದ ಜನಸ್ವಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸುಮಾರು ೧೧೧ ಅರ್ಜಿಗಳು ಸಲ್ಲಿಕೆಯಾಗಿವೆ ಯುಕೆಪಿ, ನಿವೇಶನ ಮಂಜೂರಾತಿ, ಮೂಲಭೂತ, ರಸ್ತೆ ಮೂಲಸೌಲಭ್ಯಕ್ಕೆ ಒತ್ತಾಯಿಸಿ ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸಿದ್ದಾರೆ
ಈ ಎಲ್ಲ ಅರ್ಜಿಗಳನ್ನು ಇತ್ಯರ್ಥಪಡಿಸಲಾಗುವುದು. ಈ ಕಾರ್ಯಕ್ರಮವು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಕಾರ್ಯಕ್ರಮವಾಗಿದ್ದು ಸಂಪೂರ್ಣ ಜನರ ಸಮಸ್ಯೆಗಳನ್ನು ಪರಿಹರಿಸಲು ಮುಖ್ಯ ಮಂತ್ರಿಗಳ ಆದೇಶವಾಗಿದೆ ಎಂದು ತಿಳಿಸಿದರು.
ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ರೈತರ, ಕಾರ್ಮಿಕರ, ಸಾರ್ವಜನಿಕರ, ಮುಳುಗಡೆ ಸಂತ್ರಸ್ತರ ಸಮಸ್ಯೆ ಗ್ರಾಮೀಣ ಪ್ರದೇಶಗಳ ರಸ್ತೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಅಧಿಕಾರಿಗಳು ತತ್‌ಕ್ಷಣದಲ್ಲಿ ಸೂಕ್ತ ಕ್ರಮಕೈಗೊಂಡು ೧ ವಾರದಲ್ಲಿ ಉತ್ತರವನ್ನು ನೀಡಬೇಕು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜ್ಯ ಮತ್ತು ಜಿಲ್ಲಾ ತಾಲೂಕು ಮಟ್ಟದಲ್ಲಿ ಜನಸ್ವಂದನಾ ಕಾರ್ಯಕ್ರಮವನ್ನು ೩ ತಿಂಗಳಗೊಮ್ಮೆ ಜನಸ್ವಂದನೆ ಕಾರ್ಯಕ್ರಮ ಮಾಡಿ ಜನರ ಅಹವಾಲು ಸ್ವೀಕರಿಸಿ ಎಲ್ಲಾ ತಾಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಿದ್ದು ಜನರಿಗೆ ನ್ಯಾಯವನ್ನು ಒದಗಿಸುವ ಕಾರ್ಯಾಕ್ರಮವನ್ನು ಸರ್ಕಾರ ಮಾಡುತ್ತಿದೆ.
ಆದ್ದರಿಂದ ಜನಪರ ನಮ್ಮ ಸರ್ಕಾರ ವಾಗಿದೆ. ಅಧಿಕಾರಿ ಹಾಗೂ ಇಲಾಖೆಯ ಮೇಲೆ ವಿಶ್ವಾಸ ಮೂಡಿಸುವ ಕಾರ್ಯವಾಗಬೇಕು ಇದು ಪ್ರಜಾಪ್ರಭುತ್ವದ ದೊಡ್ಡ ಶಕ್ತಿ, ಪ್ರಜೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ.
ಇದು ಗ್ರಾಮ ಮಟ್ಟದಲ್ಲೂ ನಡೆದು ಜನರ ಸಮಸ್ಯೆಗೆ ದನಿಯಾಗಲಿದೆ ಎಂದು ಹೇಳಿದರು.ರೈತ ಸಂಘದಿAದ ರೈತರಿಗೆ ಬೆಳೆ ಪರಿಹಾರ ಮತ್ತು ಬೆಳೆ ವಿಮೆ ಸರಿಯಾಗಿ ಸರ್ಕಾರದಿಂದ ಬಂದಿಲ್ಲ ಆದ್ದರಿಂದ ಕೂಡಲೇ ರೈತರ ಖಾತೆಗಳಿಗೆ ಬೆಳೆ ಪರಿಹಾರ ಹಣ ನೀಡುವಂತೆ ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು.
ಘಟ್ಟಿಗನೂರ ಗ್ರಾಮಸ್ಥರು ಹುನಗುಂದ ದಿಂದ ನಿಡಸನೂರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ದುರಸ್ಥಿ ಮಾಡುವಂತೆ ಶಾಸಕ ವಿಜಯಾನಂದ ಕಾಶಪ್ಪನವರ ಜಿಪಂ ಅಧಿಕಾರಿಗೆ ಸೂಚಿಸಿದರು.
ಹುನಗುಂದ ಪಟ್ಟಣದ ಜಿ.ಬಿ.ಕಂಬಾಳಿಮಠ ಅವರು ಹಿರೇಹಳ್ಳ ಹೂಳು ಸ್ವಚ್ಚಗೊಳಿಸುವಂತೆ ಮತ್ತು ನಗರದಲ್ಲಿನ ಬಡಾವಣೆಗಳಲ್ಲಿನ ರಸ್ತೆಗಳನ್ನು ನಿರ್ಮಿಸಬೇಕು. ಬೀದಿ ದೀಪವನ್ನು ಅಳವಡಿಸಬೇಕು.
ಒಳಚರಂಡಿ ಕಾಮಗಾರಿಯನ್ನು ಆರಂಭಿಸಬೇಕು, ಸರ್ಕಾರಿ ಐಟಿಐ ಕಾಲೇಜಿಗೆ ನಿವೇಶನ ನೀಡಬೇಕು ಸೇರಿದಂತೆ ಅನೇಕ ಅರ್ಜಿಗಳನ್ನು ಶಾಸಕರಿಗೆ ನೀಡಿದರು.
ಜಿಪಂ ಸಿಇಒ ಶಶಿಧರ ಕುರೇರ, ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ, ತಹಸೀಲ್ದಾರ ನಿಂಗಪ್ಪ ಬಿರಾದರ, ಸಿಪಿಐ ಸುನೀಲ ಸವದಿ, ಬಿಇಒ ಜಾಸ್ಮೀನ ಕಿಲ್ಲೇದಾರ, ಪಿಎಸ್‌ಐ ಚನ್ನಯ್ಯ ದೇವೂರ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.