A condolence center witnessing a love marriage ಪ್ರೇಮ ವಿವಾಹಕ್ಕೆ ಸಾಕ್ಷಿಯಾದ ಸಾಂತ್ವನ ಕೇಂದ್ರ

WhatsApp Group Join Now
Telegram Group Join Now
Instagram Group Join Now
Spread the love

 A condolence center witnessing a love marriage ಪ್ರೇಮ ವಿವಾಹಕ್ಕೆ ಸಾಕ್ಷಿಯಾದ ಸಾಂತ್ವನ ಕೇಂದ್ರ

 love marriage ಪ್ರೇಮ ವಿವಾಹಕ್ಕೆ ಸಾಕ್ಷಿಯಾದ ಸಾಂತ್ವನ ಕೇಂದ್ರ

ಇಳಕಲ್ಲ: ಅಂತರಜಾತೀಯ ಯುವಕ ಯುವತಿಯ ಪ್ರೇಮ ವಿವಾಹಕ್ಕೆ ಇಲ್ಲಿನ ಸಾಂತ್ವನ ಕೇಂದ್ರ ಸಾಕ್ಷಿಯಾಯಿತು.

ಮುಷ್ಟಿಗೇರಿ ಗ್ರಾಮದ ಹೊನ್ನಪ್ಪ ವಡ್ಡರ ಇವರ ಪುತ್ರಿ ಮಹಾಲಕ್ಷ್ಮಿ ಅದೇ ಗ್ರಾಮದ ದ್ಯಾಮಣ್ಣ ನಾಯ್ಕರ ಅವರ ಪುತ್ರ ಭೀಮಣ್ಣ ಜೊತೆಗೆ ಪ್ರೇಮಿಸುತ್ತಿದ್ದಳು.ಆದರೆ ಹುಡುಗಿಗೆ ವಯಸ್ಸಾಗದ ಕಾರಣ ಬಾಗಲಕೋಟೆ ನ್ಯಾಯಾಲಯದಲ್ಲಿ ಪ್ರಕರಣ ನಡೆದು ಮಹಾಲಕ್ಷ್ಮಿಯನ್ನು ಇಳಕಲ್ ಸಾಂತ್ವನ ಕೇಂದ್ರಕ್ಕೆ ಸೇರಿಸಲಾಗಿತ್ತು.

ಆಶಾದೀಪ ಅಂಗವಿಕಲರ ಸಂಸ್ಥೆಯ ಸಾಂತ್ವನ ಕೇಂದ್ರದಲ್ಲಿ ಇದ್ದ ಮಹಾಲಕ್ಷ್ಮಿಗೆ ಮದುವೆ ವಯಸ್ಸು ಆದ ನಂತರ ಅದೇ ಯುವಕನ ಜೊತೆಗೆ ಸೋಮವಾರದಂದು ಸಾಂಪ್ರದಾಯಿಕವಾಗಿ ವಿವಾಹವನ್ನು ಸಂಸ್ಥೆಯ ಸದಸ್ಯರು ಪದಾಧಿಕಾರಿಗಳು ಹಿರಿಯರ ಸಮ್ಮುಖದಲ್ಲಿ ನೆರವೇರಿಸಿದರು.

ಈ ಸಮಯದಲ್ಲಿ ಸಂಸ್ಥೆಯ ಗೌರವಾಧ್ಯಕ್ಷರು ಹಾಗೂ ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ, ಬಾಗಲಕೋಟೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ,ಹುನಗುಂದ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿ.ಎ.ಗಿರಿತಮ್ಮಣ್ಣನವರ.

ಸಂಸ್ಥೆಯ ಸ್ಥಾಪಕ ಅಧ್ಯಕ್ಷ ರಘು ಹುಬ್ಬಳ್ಳಿ. ಸಂಸ್ಥೆಯ ಅಧ್ಯಕ್ಷ ಚಂದ್ರು ಅಪ್ಪಾಜಿ. ಸಂಸ್ಥೆಯ ಸಹ ಕಾರ್ಯದರ್ಶಿ ಹುಸೇನಸಾಬ ಮುದಗಲ್ಲ, ಮುಷ್ಟಿಗೇರಿ ಗ್ರಾಮದ ಹಿರಿಯರಾದ ಮಾರುತಿ ತಿಮ್ಮಣ್ಣ ಬಾದಾಮಿ. ಚನ್ನಬಸಪ್ಪ ಮುತ್ತೂರು.

ಮಹಿಳಾ ಸಾಂತ್ವನ ಕೇಂದ್ರದ ಕೌಟುಂಬಿಕ ಸಲಹೆಗಾರರಾದ ಭಾಗ್ಯಶ್ರೀ ಜುಲಗುಡ್ಡ. ಸಮಾಜ ಸೇವಕರಾದ ಅಮೃತ ಹುಬ್ಬಳ್ಳಿ ಮಂಜುಳಾ ಮೆದಿಕೇರಿ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು. ಹಿರಿಯ ನಾಗರಿಕರು ಉಪಸ್ಥಿತರಿದ್ದರು.

 

 


Spread the love

Leave a Comment

error: Content is protected !!