Electrocution ವಿದ್ಯುತ್ ಪ್ರಹರಿಸಿ : ಮಹಿಳೆ ಸಾವು
ನಾರಾಯಣಪುರ : ಬಟ್ಟೆ ತೊಳೆದು ಒಣಗಿಸಲು ಬಟ್ಟೆಯನ್ನು ತಂತಿಗೆ ಹಾಕುವ ವೇಳೆ ಮನೆಗೆ ಸಂಪರ್ಕದ ವಿದ್ಯುತ್ ತಂತಿಯು ಬಟ್ಟೆ ಹಾಕುವ
ತಂತಿಗೆ ತಗುಲಿದ್ದರಿಂದ ವಿದ್ಯುತ್ ಪ್ರಹರಿಸಿ ಮಹಿಳೆಯೊಬ್ಬಳು ಮೃತ ಪಟ್ಟಿರುವ ಘಟನೆ ರಾಜನ ಕೋಳೂರ ಗ್ರಾಮದ ಮನೆಯೊಂದರಲ್ಲಿ ಬುಧವಾರ ಸಾಯಂಕಾಲ ಜರುಗಿದೆ..
ಮೃತ ಮಹಿಳೆ ಸವಿತಾ ದೊಡ್ಡಮನಿ ವಯಸ್ಸು (೩೦) ಮುದನೂರು ಗ್ರಾಮದವರು ರಾಜಕೋಳುರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಟಾಪ್ ನರ್ಸ ಆಗಿ ಸೇವೆ ಸಲ್ಲಿಸುತ್ತಿದ್ದರು.
ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿದ್ದಾರೆ.