An attempt to steal a house in Ilakalla Teachers Colony ಇಳಕಲ್ಲದ ಟೀಚರ್ಸ್ ಕಾಲೋನಿಯಲ್ಲಿ ಮನೆ ಕಳ್ಳತನಕ್ಕೆ ಯತ್ನ

WhatsApp Group Join Now
Telegram Group Join Now
Instagram Group Join Now
Spread the love

 An attempt to steal a house in Ilakalla Teachers Colony ಇಳಕಲ್ಲದ ಟೀಚರ್ಸ್ ಕಾಲೋನಿಯಲ್ಲಿ ಮನೆ ಕಳ್ಳತನಕ್ಕೆ ಯತ್ನ

Ilakalla Teachers Colony ಇಳಕಲ್ಲದ ಟೀಚರ್ಸ್ ಕಾಲೋನಿಯಲ್ಲಿ ಮನೆ ಕಳ್ಳತನಕ್ಕೆ ಯತ್ನ

ಇಳಕಲ್ಲ :  ಯಾರೋ ಕಳ್ಳರು ಮನೆ ಕಳ್ಳತನಕ್ಕೆ ಇಲ್ಲಿನ ಟೀಚರ್ಸ್ ಕಾಲೋನಿಯಲ್ಲಿ ಯತ್ನವನ್ನು ಬುಧವಾರ ರಾತ್ರಿ ಮಾಡಲು ಹೋಗಿದ್ದು ಅದರಲ್ಲಿ ವಿಫಲಗೊಂಡಿದ್ದಾರೆ.

ಟೀಚರ್ಸ್ ಕಾಲೋನಿಯ ಕೆಲವು ನಿರ್ದಿಷ್ಟ ಮನೆಗಳನ್ನು ಗುರುತು ಮಾಡಿ ಅವುಗಳನ್ನು ಬಿಟ್ಟು ಉಳಿದ ಮನೆಗಳಿಗೆ ಹೊರಗಿನಿಂದ ಚಿಲಕ ಹಾಕಿ ಮನೆಗಳ ಕಳ್ಳತನಕ್ಕೆ ಯತ್ನಿಸಿದ್ದಾರೆ .

ಆದರೆ ಆ ಸಮಯದಲ್ಲಿ ಬಹುತೇಕ ಜನ ಇನ್ನೂ ನಿದ್ದೆಗೆ ಜಾರದ ಕಾರಣ ಕಳ್ಳರ ಸಪ್ಪಳಕ್ಕೆ ಎಚ್ಚರಗೊಂಡು ಬಾಯಿ ಮಾಡಲು ಶುರು ಹಚ್ಚಿಕೊಂಡಿದ್ದಾರೆ.ಇದರಿAದಾಗಿ ಹೊರಗಿನಿಂದ ಚಿಲಕ ಹಾಕಿದ ಮನೆಯವರು ಹೊರಗೆ ಬರಲು ಹೋದಾಗ ಅವರು ಲಾಕ್ ಆಗಿದ್ದು ಗೊತ್ತಾಗಿ ಬೇರೆಬೇರೆ ಎಡೆ ಮೊಬೈಲ್ ಹಚ್ಚಿ ಇತರ ಜನರನ್ನು ಎಚ್ಚರಗೊಳಿಸಿದ್ದಾರೆ.

ಬೇರೆ ಮನೆಯ ಬಾಗಿಲು ತೆಗೆದು ಜನರು ಹೊರ ಬರುವದನ್ನು ಕಂಡಾಗ ಕಳ್ಳರು ಅಲ್ಲಿಂದ ಬರಿಗೈಯಲ್ಲಿ ಜಾಗ ಖಾಲಿ ಮಾಡಿದ್ದಾರೆ.

ಈ ವಿಷಯವನ್ನು ಶಿಕ್ಷಕ ರವಿ ಜಲದುರ್ಗ ಇಳಕಲ್ ಮಂದಿ ಬಳಗದ ಮುಖ್ಯಸ್ಥ ಮುತ್ತುರಾಜ ಅಕ್ಕಿಯವರಿಗೆ ತಿಳಿಸಿದಾಗ ಅವರು ಇದನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿ ಕೊಂಡಿದ್ದಾರೆ.

ನಗರದಲ್ಲಿ ವಾಲ್ಮೀಕಿ ದೇವಸ್ಥಾನದ ವಾಣಿಜ್ಯ ಸಂಕೀರ್ಣದಲ್ಲಿ ಅಂಗಡಿ ಒಂದರಲ್ಲಿ ಚಾರ್ಜಗೆ ಇಟ್ಟಿದ್ದ ೪೮ ಸಾವಿರ ರೂ ಮೌಲ್ಯದ ಮೊಬೈಲ್ ಕಳ್ಳತನವಾಗಿದೆ ಗುರುವಾರದಂದು ಮುಂಜಾನೆ ತರಕಾರಿ ತರಲು ಹೋದಾಗ ಮೂವರ ಮೊಬೈಲ್‌ಗಳನ್ನು ಕಳ್ಳರು ಎಗರಿಸಿದ್ದ ಬಗ್ಗೆ ತಿಳಿದು ಬಂದಿದೆ.

ಟೀಚರ್ಸ್ ಕಾಲೋನಿಗೆ ಪೋಲಿಸರು ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಿದ್ದಾರೆ ಜನರನ್ನು ವಿಚಾರಿಸಿ ಘಟನೆ ನಡೆದ ಬಗ್ಗೆ ವಿವರವಾದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.

 

ವರದಿ : ಭೀಮಣ್ಣ ಗಾಣಿಗೇರ


Spread the love

Leave a Comment

error: Content is protected !!