Patience is essential in student life: Entrepreneur Dr. Ravi Bavage ವಿದ್ಯಾರ್ಥಿ ಜೀವನದಲ್ಲಿ ತಾಳ್ಮೆ ಅಗತ್ಯ : ಉದ್ಯಮಿದಾರ ಡಾ. ರವಿ ಬಾವಗೆ

WhatsApp Group Join Now
Telegram Group Join Now
Instagram Group Join Now
Spread the love

 

Patience is essential in student life: Entrepreneur Dr. Ravi Bavage ವಿದ್ಯಾರ್ಥಿ ಜೀವನದಲ್ಲಿ ತಾಳ್ಮೆ ಅಗತ್ಯ : ಉದ್ಯಮಿದಾರ ಡಾ. ರವಿ ಬಾವಗೆ

ವಿದ್ಯಾರ್ಥಿ ಜೀವನದಲ್ಲಿ ತಾಳ್ಮೆ ಅಗತ್ಯ : ಉದ್ಯಮಿದಾರ ಡಾ. ರವಿ ಬಾವಗೆ

ಇಳಕಲ್ : ಮೊಬೈಲ್ ಮತ್ತು ಯು ಟೂಬ್ ಗಳಲ್ಲಿ ಸಕಲ ಮಾಹಿತಿ ಸಿಗುವಾಗ ಯಾಕೆ ಓದಬೇಕು ಎಂಬ ಪ್ರಶ್ನೆ ಕಾಡುತ್ತಿದ್ದು ವಿದ್ಯಾರ್ಥಿಗಳಿಗೆ ತಾಳ್ಮೆ ಅಗತ್ಯವಾಗಿದ್ದು ಅದಕ್ಕಾಗಿ ಓದಲೇ ಬೇಕು ಎಂದು ಬೀದರದ ಉದ್ಯಮಿದಾರ ಡಾ.ರವಿ ಬಾವಗೆ ಹೇಳಿದರು.

ಅವರು ಇಲ್ಲಿನ ಸ್ಪಂದನ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿ ನಾವು ಸಾಧಿಸಬೇಕಾದ ವಿಷಯದ ಬಗ್ಗೆ ಇತರರ ಜೊತೆಗೆ ಚರ್ಚಿಸಿ ಅದರ ಬಗ್ಗೆ ಸ್ಪಷ್ಟವಾದ ಮತ್ತು ನಿಖರವಾದ ಗೊತ್ತು ಗುರಿ ಹೊಂದಬೇಕು ಎಂದು ಹೇಳಿದರು.

ಬೆಂಗಳೂರು ರಿನಿ ಟೆಕ್ನಾಲಜಿ ಮುಖ್ಯ ಕಾರ್ಯನಿರ್ವಾಹಕ ನಿಂಗಪ್ಪ ಉಪ್ಪಾಳ ಮಾತನಾಡಿ ಶಿಷ್ಯ ಮತ್ತು ಗುರು ಸಂಬAಧ ನೀರು ಮತ್ತು ಮೀನುಗಳ ಸಂಬAಧವಿದ್ದAತೆಯಾಗಿದ್ದು ಪ್ರತಿ ಶಿಷ್ಯನ ಹಿಂದೆಯೂ ಗುರುವಿನ ಮಾರ್ಗದರ್ಶನ ಇರುತ್ತದೆ ಅದಕ್ಕೆ ಕಠಿಣ ಪರಿಶ್ರಮ ಇರಬೇಕಾಗುತ್ತದೆ ಎಂದು ಹೇಳಿದರು.

ಪ್ರಶ್ನೆ ಮಾಡದೇ ಏನನ್ನೂ ಒಪ್ಪಿಕೊಳ್ಳಬೇಡಿ ಎಂದು ಸಾಕ್ರೆಟಿಸ್ ಹೇಳಿದ ಹಾಗೆ ಪ್ರತಿಯೊಬ್ಬರೂ ಪ್ರಶ್ನೆ ಕೇಳುವ ತಾಕತ್ತು ಪಡೆದುಕೊಳ್ಳಬೇಕು ಎಂದು ಇನ್ನೊರ್ವ ಅತಿಥಿ ಬೆಂಗಳೂರಿನ ರಾಜೀವ ಪಟೇಲ್ ಹೇಳಿದರು.

ವೇದಿಕೆಯಲ್ಲಿ ಸ್ಪಂದನ ವಿದ್ಯಾವರ್ಧಕ ಸಂಘದ ಅಧ್ಯಕ್ಷೆ ಅಕ್ಕಮಹಾದೇವಿ ಕೌದಿ ಉಪಾಧ್ಯಕ್ಷ ಲಕ್ಷ್ಮಣಸಾ ಅರಸಿದ್ದಿ ವಿದ್ಯಾರ್ಥಿ ಪ್ರತಿನಿಧಿ ಅನುಜಾ ವರ್ಕಲ್ ಉಪಸ್ಥಿತರಿದ್ದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಅಮರೇಶ ಕೌದಿ ವಹಿಸಿದ್ದರು.ಅನಿಲ ಬೆನ್ನೂರ ಪ್ರಾರ್ಥಿಸಿದರು, ಬಸವರಾಜ ತುಂಬಗಿ ಸ್ವಾಗತಿಸಿದರು ರವಿ ಅರಸಿದ್ದಿ ಪರಿಚಯಿಸಿದರು ಬಿ ವಿರೇಶ ಪ್ರಾಸ್ತಾವಿಕವಾಗಿ ಮಾತನಾಡಿದರು ಲಕ್ಷ್ಮಣ ಹಾದಿಮನಿ ವಂದಿಸಿದರು ಪ್ರಕಾಶ ನಾಲತವಾಡ ಮತ್ತು ಜ್ಯೋತಿ ಜಿ ಎಂ ನಿರೂಪಿಸಿದರು.

 


Spread the love

Leave a Comment

error: Content is protected !!