ರಷ್ಯಾ ಸೇನೆಗೆ ನೇಮಕಗೊಂಡಿರುವ ಎಲ್ಲ ಭಾರತೀಯರನ್ನು ಬಿಡುಗಡೆ ಮಾಡಲಿರುವ ರಷ್ಯಾ
ಪ್ರಧಾನಿ ಮೋದಿ ಅವರು ಸೋಮವಾರ ಮಾಸ್ಕೋದ ಅಧ್ಯಕ್ಷರ ನಿವಾಸದಲ್ಲಿ ಪುಟಿನ್ ಅವರನ್ನು ಭೇಟಿಯಾದರು.ತಮ್ಮ ಭೇಟಿಯ ಸಮಯದಲ್ಲಿ, ಇಬ್ಬರು ನಾಯಕರು ಉಕ್ರೇನ್ನ ಪರಿಸ್ಥಿತಿಯ ಬಗ್ಗೆ ಚರ್ಚಿಸಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಇತ್ತೀಚಿನ ಭೇಟಿಯ ನಂತರ, ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಭಾರತೀಯರನ್ನು ಬಿಡುಗಡೆ ಮಾಡಲು ಮತ್ತು ಮರಳಲು ರಷ್ಯಾ ಅನುಕೂಲ ಮಾಡಿಕೊಡಲಿದೆ. ಅಧ್ಯಕ್ಷ ಪುಟಿನ್ ಅವರೊಂದಿಗಿನ ಭೇಟಿಯಲ್ಲಿ ಪ್ರಧಾನಿ ಮೋದಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.