ಸಾಹಿತಿ, ಶಿಕ್ಷಕ ಎಚ್.ಎಸ್.ಗೌಡರಿಗೆ ಚಾಲುಕ್ಯ ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿ
ಇಳಕಲ್ : ನಗರದ ಸಾಹಿತಿ ಶಿಕ್ಷಕ ಎಚ್.ಎಸ್.ಗೌಡರಿಗೆ ಚಾಲುಕ್ಯ ಅತ್ಯುತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಯನ್ನು ನೀಡಿ ಸತ್ಕರಿಸಲಾಗಿದೆ.
ಐಹೊಳೆ ಪಟ್ಟಣದಲ್ಲಿ ನಡೆದ ವಿಶ್ವ ಬಂಜಾರ ಕಲಾ ಸಾಹಿತ್ಯಿಕ ಸಂಘ ಅಮೀನಗಡ ಹಾಗೂ ಬರಹವೇ ಶಕ್ತಿ ವೇದಿಕೆ ಪ್ರಥಮ ಚಾಲುಕ್ಯ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತಿ, ಶಿಕ್ಷಕ, ಎಚ್.ಎಸ್.ಗೌಡರ ಅವರ ಶೈಕ್ಷಣಿಕಕ್ಷೇತ್ರದಲ್ಲಿ ಗಣನೀಯ ಸೇವೆಯನ್ನು ಹಾಗೂ ಕನ್ನಡದ, ನೆಲ,ಜಲ,ಭಾಷೆ, ಸಂಸ್ಕೃತಿಯ,
ಹಿತಕ್ಕಾಗಿ ಮಾಡಿರುವ ಸೇವೆಯನ್ನು ಗುರುತಿಸಿ ಅವರಿಗೆ “ಚಾಲುಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು” ನೀಡಿ ಗೌರವಿಸಲಾಗಿದೆ ಎಂದು ರಾಜ್ಯಾಧ್ಯಕ್ಷ ಎಚ್,ವಾಯ್,ರಾಠೋಡ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಜಯಶ್ರೀ ಭಂಡಾರಿ, ಚಂದ್ರಕಾAತ ಚವ್ಹಾಣ, ಜೇನು ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
ವರದಿ : ಭೀಮಣ್ಣ ಗಾಣಿಗೇರ