ಸಂಶಾಯಸ್ಪದವಾಗಿ ತಿರುಗಾಡಿದ ಮೈಲಾರಲಿಂಗ ವೇಷಧಾರಿಗಳು !
ಇಳಕಲ್ : ಇಲ್ಲಿನ ಬಡಾವಣೆಗಳಲ್ಲಿ ಮೈಲಾರಲಿಂಗ ವೇಷ ಧರಿಸಿದ ವ್ಯಕ್ತಿಗಳು ಸಂಶಾಯಸ್ಪವಾಗಿ ತಿರುಗಾಡುತ್ತಿರುವದು ಕಂಡು ಬರುತ್ತಿದೆ.
ಗುರುವಾರದಂದು ನಗರದ ವಿಜಯನಗರ ಬಡಾವಣೆಯಲ್ಲಿ ಮೂವರು ಮೈಲಾರಲಿಂಗ ವೇಷ ಧರಿಸಿ ಹೊರಟಾಗ ಅವರನ್ನು ಅಲ್ಲಿನ ನಿವಾಸಿ ಸುನೀಲ ಚವ್ಹಾಣ ಎಂಬುವವರು ಮನೆಯಿಂದ ಹೊರಗೆ ಹೋಗಿ ಯಾರು ನೀವು ಇಲ್ಲಿ ಏಕೆ ಬಂದಿದ್ದೀರಿ ಎಂದು ವಿಚಾರಿಸಿದ್ದಾರೆ .
ಆದರೆ ಅವರು ತಡವರಿಸಿ ಉತ್ತರ ಕೊಟ್ಟಾಗ ಇವರ ಅನುಮಾನ ಹೆಚ್ಚಾಗಿ ನಿಜ ಹೇಳುತ್ತಿರೋ ಪೋಲಿಸರಿಗೆ ಹೇಳೋಣವೋ ಎಂದಾಗ ಅವರು ಅಲ್ಲಿ ಏನೂ ಉತ್ತರಿಸದೇ ಓಡಿ ಹೋದರು ಎಂದು ಸುನೀಲ ಪತ್ರಿಕೆಗೆ ತಿಳಿಸಿದರು.
ಇತ್ತೀಚೆಗೆ ಇದೇ ಬಡಾವಣೆಯಲ್ಲಿ ಓರ್ವ ಬೆಂಗಳೂರು ವ್ಯಕ್ತಿಯ ಮನೆ ಕಳ್ಳತನ ಹಗಲು ಸಮಯದಲ್ಲಿ ನಡೆದಿತ್ತು ಅಲ್ಲದೇ ಅಲ್ಲೇ ಮುಂದುಗಡೆ ಇರುವ ಬಸವೇಶ್ವರ ಸರ್ಕಲ್ ನಲ್ಲಿ ಐದಾರು ಅಂಗಡಿ ಕಳ್ಳತನ ನಡೆದಿದ್ದರೆ ನಗರದ ಟೀಚರ್ಸ್ ಕಾಲೋನಿಯಲ್ಲಿ ಕಳ್ಳತನಕ್ಕೆ ವಿಫಲ ಯತ್ನವಾದ ಪ್ರಸಂಗಗಳು ಇನ್ನೂ ಹಚ್ಚು ಹಸಿರಾಗಿವೆ.
ನಗರದ ಎಲ್ಲಾ ಬಡಾವಣೆಗಳ ಜನರು ಅನುಮಾನಾಸ್ಪದ ವ್ಯಕ್ತಿಗಳ ಚಲನವಲನದ ಬಗ್ಗೆ ನಿಗಾ ಇಡಿ ಅವಶ್ಯಬಿದ್ದರೆ ೧೧೨ ಕ್ಕೆ ಮೊಬೈಲ್ ಮಾಡಿ ಎಂದು ಪೋಲಿಸರು ಸಾಕಷ್ಟು ಮನವಿ ಮಾಡಿದ್ದು ಈಗ ಪ್ರಯೋಜನಕ್ಕೆ ಬರುತ್ತಿದೆ.