MASKI ಅಲಾಯಿ ಕುಣಿ ಬೆಂಕಿಯಲ್ಲಿ ಸುಟ್ಟು ವ್ಯಕ್ತಿ ಸಾವು
ಮಸ್ಕಿ: ಮೊಹರಂ ಹಬ್ಬದ ನಿಮಿತ್ಯವಾಗಿ ಅಲಾಯಿ ಕುಣಿಯಲ್ಲಿ ಅಗ್ನಿ ಪ್ರವೇಶ ಮಾಡುವ ವೇಳೆ ಕುಣಿಯಲ್ಲಿ ಸಿಲುಕಿಕೊಂಡು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಬೊಮ್ಮನಾಳ-ಯು ಗ್ರಾಮದಲ್ಲಿ ನಡೆದಿದೆ.
ಯಮನಪ್ಪ ನಾಯಕ(೪೫) ಮೃತಪಟ್ಟಿರುವ ವ್ಯಕ್ತಿ, ಮಸ್ಕಿ ತಾಲೂಕಿನ ಬೊಮ್ಮನಾಳ-ಯು ಗ್ರಾಮದ ಮದೀಸಿ ಮುಂಭಾಗದಲ್ಲಿರುವ ಬೆಂಕಿ ಹತ್ತಿ ಉರಿಯುತ್ತಿರುವ ಅಲಾಯಿ ಕುಣಿಯಲ್ಲಿ ಸೋಮವಾರ
ಅಗ್ನಿ ಪ್ರವೇಶ ಮಾಡುವಾಗ ಕುಣಿಯಲ್ಲಿನ ಕಟ್ಟಿಗೆಯಲ್ಲಿ ಕಾಲು ಸಿಲುಕಿಕೊಂಡಿದ್ದು, ಹೊರಗಡೆ ಬರಲು ಒದ್ದಾಡಿದರು. ಕುಣಿಯಿಂದ ಬರಲು ಆಗಲಿಲ್ಲ, ಇದರಿಂದ ಬೆಂಕಿಯಲ್ಲಿ ದೇಹ ಸುಟ್ಟು ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.
ಈ ಕುರಿತು ತುರವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್‌ಐ ಸುಜಾತ ಅವರು ತಿಳಿಸಿದ್ದಾರೆ.