ವಿಧಾನಸಭಾ ಕ್ಷೇತ್ರದ ನೀರಾವರಿ ಯೋಜನೆಗಳ ಬಗ್ಗೆ ಚರ್ಚೆ
ಬೆಂಗಳೂರ : ಜಲಸಂಪನ್ಮೂಲ ಇಲಾಖೆ, ಜಲಸಂಪನ್ಮೂಲ ಸಚಿವರು ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ
ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷರು
ಶಾಸಕ ವಿಜಯಾನಂದ ಕಾಶಪ್ಪನವರ ಅವರು ಭಾಗವಹಿಸಿ ಚರ್ಚಿಸಿದರು.ರಾಮಥಾಳ -ಮರೋಳ ೧ನೇ ಹಂತದ ಯೋಜನೆಯಲ್ಲಿ ೧೪೫೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಹೊಂದಿರುವ ಕಾಲುವೆ ಶಿಥಿಲಾವಸ್ಥೆಯಲ್ಲಿ
ಇದ್ದು ಹೊಸ ಕಾಲುವೆ ಮಾಡುವ ಮೂಲಕ ನೀರಾವರಿ ಒದಗಿಸುವಂತೆ ಮತ್ತು ೨ನೇ ಹಂತದ ಯೋಜನೆಯಲ್ಲಿ ೬೦ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಹೊಸ
ತಂತ್ರಜ್ಞಾನ ಮೂಲಕ ನೀರಾವರಿ ಸೌಲಭ್ಯವನ್ನು ರೈತರಿಗೆ ತಲುಪುವಂತೆ ಮಾಡುವಂತೆ ಒತ್ತಾಯಿಸಿದರು.
ಕೊಪ್ಪಳ ಏತನೀರಾವರಿ ಯೋಜನೆಯಲ್ಲಿ ೮೫೦೦ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಮಂಜೂರಾತಿ ಮಾಡುವ ಮೂಲಕ ನೀರಾವರಿ ಯೋಜನೆ ಪ್ರಾರಂಭಿಸುವAತೆ ತಿಳಿಸಿ
ನಂದವಾಡಗಿ ಏತನೀರಾವರಿ ಯೋಜನೆಯಲ್ಲಿ ಹುನಗುಂದ ಮತಕ್ಷೇತ್ರದ ೨೬ಗ್ರಾಮಗಳಿಗೆ ನೀರಾವರಿ ಸೌಲಭ್ಯ ಒದಗಿಸಬೇಕು ಪುನರ್ವಸತಿ ಪುನರ್ ನಿರ್ಮಾಣ ಇಲಾಖೆ
ಕೃಷ್ಣಾ ಮತ್ತು ಮಲಪ್ರಭಾ ನದಿ ಪಾತ್ರದಲ್ಲಿರುವ ಹುನಗುಂದ ಮತಕ್ಷೇತ್ರದ ಬೆಳಗಲ್ ,ಹೂವನೂರ ಸೇರಿದಂತೆ ೨೬ ಗ್ರಾಮಗಳನ್ನು ಮುಳುಗಡೆ ಪ್ರದೇಶ ಎಂದು ಘೋಷಣೆ ಮಾಡುವಂತೆ ಆಗ್ರಹಿಸಿದರು.