ಪ್ರತಿ 120 ಕಿ.ಮೀಗೆ ಪಾಲಿ ಟ್ರಾಮಾ ಕೇರ್ ಸೆಂಟರ್ ಸ್ಥಾಪಿಸುವಂತೆ ಸಂಸದ MP ಡಾ.ಸಿ. ಎನ್.ಮಂಜುನಾಥ್ ಮನವಿ
ಚಳಿಗಾಲದ ಅಧಿವೇಶನ ದಲ್ಲಿ ಮಾತನಾಡಿದಡಾ.ಸಿ. ಎನ್.ಮಂಜುನಾಥ್ ಅವರು ಕಳೆದ 10 ವರ್ಷದ ಅವಧಿಯಲ್ಲಿ ದೇಶದ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆ ತರುವ ಜತೆ ಎಂಬಿಬಿಎಸ್, ಪಿಜಿ ಸೀಟ್ಗಳು ಹಾಗೂ ವೈದ್ಯಕೀಯ ಕಾಲೇಜುಗಳ ಸಂಖ್ಯೆಯನ್ನು ಹೆಚ್ಚಿಸಿದ ಪ್ರಧಾನಿ ಶ್ರೀ ನರೇಂದ್ರಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳು ಸಲ್ಲಿಸಿ ಮಾತನಾಡಿದ ಅವರು.ರಸ್ತೆ ಅಪಘಾತದಲ್ಲಿ ಮೃತರಾಗುವವರ ಸಂಖ್ಯೆ ಶೇಕಡಾ 13ರಷ್ಟು ಏರಿಕೆ ಆಗಿದ್ದು, ಈ ಸಮಸ್ಯೆಗೆ ತುರ್ತಾಗಿ ಪರಿಹಾರ ಕಂಡುಕೊಳ್ಳುವ ಅವಶ್ಯಕತೆಯಿದೆ.
ರಸ್ತೆ ಅಪಘಾತಕ್ಕೆ ಒಳಗಾದವರ ಪ್ರಾಣ ಉಳಿಸಲು ಬೆಂಗಳೂರು ನಿಮ್ಹಾನ್ಸ್ ನಾರ್ತ್ ಕ್ಯಾಂಪಸ್ನಲ್ಲಿ 300 ಹಾಸಿಗೆಗಳ ಪಾಲಿ ಟ್ರಾಮಾ ಕೇರ್ ಸೆಂಟರ್ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಪ್ರತಿ 120 ಕಿ.ಮೀಗೆ ಒಂದು ಪಾಲಿ ಟ್ರಾಮಾ ಕೇರ್ ಕೇಂದ್ರ ಸ್ಥಾಪಿಸುವಂತೆ ಸಂಸತ್ತಿನಲ್ಲಿ ಮನವಿ ಮಾಡಿದರು.
ಬೆಂಗಳೂರಿನಲ್ಲಿ 1.65 ಲಕ್ಷ ಸಿಜಿಎಚ್ಎಸ್ ಫಲಾನುಭವಿಗಳನ್ನು ಹೊಂದಿದೆ. ಆದರೆ, ಇಲ್ಲಿರುವುರು ಕೇವಲ 10 ಡಿಸ್ಪೆನ್ಸರಿಗಳನ್ನು ಮಾತ್ರ. ಈ ದಿಶೆಯಲ್ಲಿ ಡಿಸ್ಪೆನ್ಸರಿಗಳ ಸಂಖ್ಯೆಯನ್ನು ಏರಿಕೆ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದರು.