ಕಲ್ಯಾಣ ವಿಧೇಯಕ ಯೋಜನೆಗೆ ರಂಗಭೂಮಿ ಕಲಾವಿದರನ್ನು ಸೇರಿಸಿ ಶಾಸಕ ಕಾಶಪ್ಪನವರ
ಬೆಂಗಳೂರ: ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ ಕಲ್ಯಾಣ ವಿಧೇಯಕ -೨೦೨೪ ವನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಮಂಡಿಸಿ ಅಂಗೀಕರಿಸಲಾದ ಈ ಯೋಜನೆಯಡಿ ಸಿನಿಮಾ ಹಾಗೂ ಇತರ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಸಂಘಟಿತರಾಗಿ ದುಡಿಯುವ ಕಾರ್ಯಕರ್ತರಲ್ಲಿ ರಂಗಭೂಮಿ ಕಲಾವಿದರನ್ನು ಸೇರಿಸಲು ಶಾಸಕ ವಿಜಯಾನಂದ ಕಾಶಪ್ಪನವರ ಆಗ್ರಹಿಸಿದರು.
ಕರ್ನಾಟಕ ಸಿನಿಮಾ ಮತ್ತು ಸಾಂಸ್ಕೃತಿಕ ಕಾರ್ಮಿಕರ ಕಲ್ಯಾಣ ಮಂಡಳಿ’ಯಡಿ ನೋಂದಾಯಿಸಿಕೊಳಲಾಗುವುದು. ನೋಂದಾಯಿತ ಕಾರ್ಮಿಕರರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳಾದ ಜೀವ ವಿಮೆ, ಅಪಘಾತ ಪರಿಹಾರ, ಹೆರಿಗೆ ಭತ್ಯೆ,ಶವ ಸಂಸ್ಕಾರ ವೆಚ್ಚ ಹಾಗೂ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯಧನ ಸೇರಿದಂತೆ ಹಲವು ಭದ್ರತಾ ಯೋಜನೆಗಳನ್ನು ಒದಗಿಸಲಾಗುವುದು.
ಈ ವೇಳೆ ಸದನದಲ್ಲಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ವಿಜಯಾನಂದ ಕಾಶಪ್ಪನವರ ಅವರು ಉತ್ತರ ಕರ್ನಾಟಕದಲ್ಲಿರುವ ರಂಗಭೂಮಿ ಕಲಾವಿದರಿಗೆ,ಜಾನಪದ ಸಾಹಿತ್ಯಗಳಿಗೆ ಹಾಗೂ ಗೀಗೀಪದ ಹಾಡುವ ಕಲಾವಿದರಿಗೆ
ಈ ಯೋಜನೆಯಡಿ ಸೇರಿಸುವ ಮೂಲಕ ಉತ್ತರ ಕರ್ನಾಟಕದ ಕಲಾವಿದರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಮಸೂದೆ ಬಗ್ಗೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.