For 2024 Lok Sabha Elections: Hunagunda Taluk administration is all set: ೨೦೨೪ ಲೋಕಸಭೆ ಚುನಾವಣೆಗೆ : ಹುನಗುಂದ ತಾಲೂಕು ಆಡಳಿತ ಸಕಲ ಸನ್ನದ್ದವಾಗಿದೆ

WhatsApp Group Join Now
Telegram Group Join Now
Instagram Group Join Now
Spread the love

 

೨೦೨೪ ಲೋಕಸಭೆ ಚುನಾವಣೆಗೆ : ಹುನಗುಂದ ತಾಲೂಕು ಆಡಳಿತ ಸಕಲ ಸನ್ನದ್ದವಾಗಿದೆ : ಸಹಾಯಕ ಚುನಾವಣಾಧಿಕಾರಿ ಶ್ರೀಧರ ಗೋಟ್ಟೂರ

 

ಹುನಗುಂದ : ಭಾರತ ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯ ೨೦೨೪ ಘೋಷಿಸಿದ್ದು ಬಾಗಲಕೋಟೆ ಜಿಲ್ಲೆಯಲ್ಲಿ ಮೇ ೭ ರಂದು ಮತದಾನ ನಡೆಯಲಿದೆ ಚುನಾವಣೆಗೆ ಜಿಲ್ಲಾಡಳಿತ ಸೇರಿದಂತೆ ಹುನಗುಂದ ತಾಲೂಕು ಆಡಳಿತ ಸಕಲ ಸನ್ನದ್ದವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಶ್ರೀಧರ ಗೋಟ್ಟೂರ ಹೇಳಿದರು.

 

       ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ ಮಂಗಳವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುನಗುಂದ ವಿಧಾನಸಭೆ ಕ್ಷೇತ್ರದಲ್ಲಿ ಒಟ್ಟು ೨,೨೬,೧೬೪ ಮತದಾರರಿದ್ದಾರೆ. ಅದರಲ್ಲಿ ಮಹಿಳಾ ಮತದಾರರು ೧.೧೩.೮೯೮, ಪುರಷ ೧.೮೮.೫೩ ಮತದಾರರು. ೧೩ ತೃತೀಯ ಲಿಂಗಿಗಳು ತಮ್ಮ ಹಕ್ಕು ಚಲಾವಣೆಯನ್ನು ಮಾಡಲಿದ್ದಾರೆ. ಹುನಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ೧೪೨ ಗ್ರಾಮಗಳಿದ್ದು ಗ್ರಾಮೀಣ ಪ್ರದೇಶಗಳಲ್ಲಿ ೨೪೫ ಮತಗಟ್ಟೆಗಳಿವೆ. ೪೩ ಸೂಕ್ಷö?? ಮತಗಟ್ಟೆಗಳಿವೆ.

 

ರಾಜ್ಯದ ೨ನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ಅಭ್ಯರ್ಥಿಗಳು ಏ.೧೯ರ ವರೆಗೆ ನಾಮಪತ್ರ ಸಲ್ಲಿಕೆ ಹಾಗೂ ನಾಮ ಪತ್ರ ಪರೀಶೀಲನೆ ಏ. ೨೦ ಪರೀಶೀಲನೆ ಆಗಿರುತ್ತದೆ. ಏ.೨೨ರಂದು ನಾಮಪತ್ರ ಹಿಂಪಡೆಯಲು ಅವಕಾಶವಿದೆ. ಮೇ ೭ ರಂದು ಮತದಾನ ನಡೆಯಲಿದ್ದು ಜೂನ್ ೪ ರಂದು ಮತ ಎಣಿಕೆ ಕಾರ್ಯ ನಡೆಯಲಿದೆ ಎಂದರು.
ಹುನಗುಂದ ಮತಕ್ಷೇತ್ರದಲ್ಲಿ ೮೫ ವಯಸ್ಸು ಮೇಲ್ಪಟ್ಟವರು ೧೫೧೦ ಇದ್ದು ಅವರು ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಇದೆ. ಯುವ ಮತದಾರ ೫೪೭೫ ಇದ್ದಾರೆ. ೨೨೫ ಸೇವಾ ಮತದಾರ. ೩೩೩ ಜನ ವಿಕಲಚೇತನರು ಮತದಾರರು ಇದ್ದಾರೆ. ಮತದಾರರ ಪರಿಷ್ಕರಣೆ ಕಾರ್ಯ ಚಾಲ್ತಿಯಲ್ಲಿದ್ದು, ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದ ವರೆಗೆ ಅರ್ಹ ಮತದಾರರು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ತಹಸೀಲ್ದಾರ ನಿಂಗಪ್ಪ ಬಿರಾದರ ಮಾತನಾಡಿ ಮಾದರಿಯ ನೀತಿ ಸಂಹಿತಿ ಜಾರಿಗೊಂಡಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳ ಜಾಹೀರಾತು ಬ್ಯಾನರ್, ಭಾವಚಿತ್ರಗಳನ್ನು ತೆರವುಗೊಳಿಸಲಾಗಿದೆ. ಹುನಗುಂದ ಇಲಕಲ್ಲ ಅವಳಿ ತಾಲೂಕಿಗೆ ನೀತಿ ಸಂಹಿತೆ ಪಾಲನೆಗೆ ವಿವಿಧ ಕಡೆಗೆ ತಂಡಗಳನ್ನು ರಚಿಸಲಾಗಿದೆ. ತಾಲೂಕಿನ ನಾಲ್ಕು ಗಡಿಗಳಲ್ಲಿ ಚಕ್ ಪೋಸ್ಟ್ ಗೂಡೂರ, ಧನ್ನೂರ, ಗುಗ್ಗಲಮರಿ, ನಂದವಾಡಗಿ ಬಳಿ ಚೆಕ್ ಪೋಸ್ಟ್ಗಳು ಸ್ಥಾಪಿಸಿ ದಿನದ ೨೪ ಗಂಟೆ ಕಾರ್ಯನಿರ್ವಹಸುತ್ತಿವೆ. ಒಂದು ಚಕ್ ಪೋಸ್ಟ್ಗಳಲ್ಲಿ ವಿವಿಧ ಇಲಾಖೆಯ ಒಟ್ಟು ೬ ಸಿಬ್ಬಂದಿ ದಿನರಾತ್ರಿ ಕಾರ್ಯ ನಿರ್ವಹಣೆಯಲ್ಲಿದ್ದಾರೆ. ದೂರು ನಿರ್ವಹಣಾ ಕೇಂದ್ರ ತಹಸೀಲ್ದಾರ ಕಚೇರಿಯಲ್ಲಿ ಸ್ಥಾಪಿಸಲಾಗಿದ್ದು ಯಾವುದೇ ರೀತಿಯ ಚುನಾವಣೆಯ ಸಂಬಧಿಸಿದ ದೂರ ಮಾಹಿತಿಯನ್ನು ೦೮೩೫೧-೨೦೦೨೧೨ ನಂಬರ್‌ಗೆ ಕರೆ ಮಾಡಬಹುದು ಎಂದು ತಿಳಿಸಿದರು.


Spread the love

Leave a Comment

error: Content is protected !!