Addiction ಆಗಸ್ಟ್ ಒಂದರಂದು ವ್ಯಸನಮುಕ್ತ ದಿನಾಚರಣೆ
ಇಳಕಲ್ : ಇಲ್ಲಿನ ಶ್ರೀಮಠದ ೧೯ ನೇ ಪೀಠಾಧಿಪತಿ ಡಾ ಮಹಾಂತಶ್ರೀಗಳ ೯೪ ನೇ ಜನುಮ ದಿನವನ್ನು ವ್ಯಸನಮುಕ್ತ ದಿನವನ್ನಾಗಿ
ಆಚರಣೆ ಮಾಡಲಾಗುತ್ತಿದ್ದು ಶ್ರೀಮಠದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಗಷ್ಟ ೧ ಸಂಜೆ ೬ ಗಂಟೆಗೆ ನಡೆಯಲಿರುವ
ಕಾರ್ಯಕ್ರಮದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮಿಗಳು, ಗೌರಿ ಗದ್ದೆಯ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್ ದ
ಅವಧೂತ ಗೂರುಜಿ ಸಾನಿಧ್ಯವನ್ನು ಗುರುಮಹಾಂತಶ್ರೀಗಳು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸುಪ್ರೀಂ ಕೋರ್ಟ್ ವಿಶ್ರಾಂತ ನ್ಯಾಯಾಧೀಶ ಬೆಂಗಳೂರಿನ ಶಿವರಾಜ ಪಾಟೀಲ. ಬಾಗಲಕೋಟ ವೈದ್ಯ ಬಿ ಎಚ್ ಕೆರೂಡಿ,
ಮಾಜಿ ಶಾಸಕಿ ಗೌರಮ್ಮ ಕಾಶಪ್ಪನವರ,ದೇವಮ್ಮ ದೊಡ್ಡನಗೌಡ ಪಾಟೀಲ ರೇಖಾ ಎಸ್ ನವಲಿಹಿರೇಮಠ ಆಗಮಿಸಲಿದ್ದಾರೆ
ಎಂದು ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.