ಲಯನ್ಸ್ ಕ್ಲಬ್ ವತಿಯಿಂದ ವನಮಹೋತ್ಸವ
ಇಳಕಲ್ : ಹಸಿರೇ ಉಸಿರು , ಹಸಿರನ್ನು ಬೆಳೆಸಿ ಉಳಿಸಿ ಎನ್ನವ ತತ್ವದಡಿ ಇಲ್ಲಿನ ಜೋಶಿಗಲ್ಲಿ ಬಡಾವಣೆಯಲ್ಲಿ ಲಯನ್ಸ್ ಸಂಸ್ಥೆ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಜರುಗಿತು.
ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮಹಾಬಲೇಶ ಮರಟದ ಸಸಿ ನೆಡುವದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಡಾ. ಮಹಾಂತೇಶ ಅಕ್ಕಿ, ಖಜಾಂಚಿ ಮುರಿಗೇಶ ಪಾಟೀಲ, ನಿಕಟ ಪೂರ್ವ ಅಧ್ಯಕ್ಷ ರಾಜಕುಮಾರ ಕಾಟವಾ,
ಡಾ.ಸಂತೋಷ ಪೂಜಾರ, ಪ್ರಮೋದ ಹಂಚಾಟೆ ಮತ್ತು ನಗರ ಸಭೆ ಸದಸ್ಯ ಮೌಲಪ್ಪ ಬಂಡಿವಡ್ಡರ ಮತ್ತು ಸಂಸ್ಥೆಯ
ಸದಸ್ಯರು ತಲಾ ಒಂದೊAದು ಸಸಿಯನ್ನು ನೆಟ್ಟು ವನಮಹೋತ್ಸವವನ್ನು ಆಚರಿಸಿದರು.