ವರವಿ ಫಕೀರಪ್ಪ ನಿಧನಕ್ಕೆ ಶ್ರದ್ದಾಂಜಲಿ
ಇಳಕಲ್ : ಖ್ಯಾತ ರಂಗಭೂಮಿ ಕಲಾವಿದ ಗುಬ್ಬಿ ವೀರಣ್ಣ ಪ್ರಶಸ್ತಿ ವಿಜೇತ ನಿರ್ದೇಶಕ ವರವಿ ಫಕೀರಪ್ಪ ನಿಧನಕ್ಕೆ
ಇಲ್ಲಿನ ಗಣ್ಯ ವ್ಯಕ್ತಿಗಳು ಸಂಘ ಸಂಸ್ಥೆಗಳು ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಶ್ರೀಮಠದ ಗುರುಮಹಾಂತಶ್ರೀಗಳು, ಶಾಸಕ ವಿಜಯಾನಂದ ಕಾಶಪ್ಪನವರ ,ಮಾಜಿ ಶಾಸಕ ದೊಡ್ಡನಗೌಡ ಪಾಟೀಲ,
ನಾಟಕ ಅಕಾಡೆಮಿಯ ಸದಸ್ಯ ಕೆ ಎ ಬನ್ನಟ್ಟಿ, ರಂಗ ಸಮಾಜ ಸದಸ್ಯ ಮಹಾಂತೇಶ ಗಜೇಂದ್ರಗಡ , ನಾಟ್ಯರಾಣಿ ಕಲಾ ಸಂಘದ
ಸಂಚಾಲಕಿ ಉಮಾರಾಣಿ ಬಾರಿಗಿಡದ, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಬಲವಂತ ಪಾಟೀಲ ,
ರಂಗನಟ ಪುರುಷೋತ್ತಮ ಹಂದ್ಯಾಳ, ಕೆಬಿಆರ್ ಡ್ರಾಮಾ ಕಂಪನಿಯ ಮಾಲಿಕ ವಿಜಯಕುಮಾರ ಮತ್ತಿತರರು
ಶೋಕ ವ್ಯಕ್ತಪಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ