ಲಾರಿಗೆ ಬೈಕ್ ಡಿಕ್ಕಿ : ಯುವಕ ಸಾವು
ಕುಷ್ಟಗಿ: ನಿಂತ ಲಾರಿಗೆ ಬೈಕ್ ಡಿಕ್ಕಿಯಾಗಿ ಯುವಕ ದುರ್ಮರಕ್ಕೀಡಾದ ಘಟನೆ ಯಲಬುರ್ಗಾ ತಾಲೂಕಿನ ಮಾಟಲದಿನ್ನಿ
ಬಳಿ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ.
ಕುಷ್ಟಗಿ ತಾಲೂಕಿನ ಕುರಬನಾಳ ಗ್ರಾಮದ ನಿವಾಸಿ ಹನಮಂತ ಸಿದ್ದಪ್ಪ ಪೂಜಾರಿ (೨೨) ಮೃತ ದುರ್ದೈವಿ.
ಹನಮಂತ ಪೂಜಾರಿ ಅಕ್ಕನ ಮಗ ಅಳಿಯ ಶ್ರೀಕಾಂತನನ್ನು ಹಿರೇವಂಕಲಕುAಟಾ ಮುರಾರ್ಜಿ ವಸತಿ ಶಾಲೆಯಲ್ಲಿ ೮ನೇ ತರಗತಿ ಓದುತ್ತಿದ್ದ.
ಹಬ್ಬಕ್ಕೆಂದು ಬೈಕ್ ನಲ್ಲಿ ಕರೆದುಕೊಂಡು ಬರುವಾಗ ಈ ದುರ್ಘಟನೆ ಸಂಭವಿಸಿದೆ. ಹನಮಂತ ಪೂಜಾರಿ ಸ್ಥಳದಲ್ಲಿ ಮೃತನಾಗಿದ್ದಾನೆ.
ಅಳಿಯ ಶ್ರೀಕಾಂತ ತೀವ್ರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳದಿಂದ ಹುಬ್ಬಳ್ಳಿಗೆ ಕರೆದೊಯ್ಯಲಾಗಿದೆ.
ಬೇವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.