2024 Paris Olympic ಪ್ಯಾರಿಸ್ ಒಲಂಪಿಕ್ 2024: ಭಾರತದ ಹಾಕಿ ತಂಡಕ್ಕೆ ಕಂಚಿನ ಪದಕ
ಪ್ಯಾರಿಸ್: ಭಾರತ ಹಾಕಿ (Indian Hocky) ತಂಡ ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಸ್ಪೇನ್ (Spain) ವಿರುದ್ಧ ಗೆಲುವು ಸಾಧಿಸಿ ಸತತ 2ನೇ ವರ್ಷವೂ ಪದಕ ಗೆದ್ದಿದೆ. ಟೂರ್ನಿಯಲ್ಲಿ ಚಿನ್ನದ ಪದಕ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದ್ದ ಟೀಮ್ ಇಂಡಿಯಾ ಸೆಮಿಫೈನಲ್ನಲ್ಲಿ ಸೋಲು ಕಂಡು ನಿರಾಶೆ ಅನುಭವಿಸಿತ್ತು. ಆದರೆ ಇಂದಿನ ಕೊನೆಯ ಅವಕಾಶದಲ್ಲಿ ಅದ್ಬುತ ಪ್ರದರ್ಶನ ತೋರಿ ಕಂಚಿನ ಪದಕ ಪಡೆಯಿತು.
ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇಲ್ಲಿಯವರೆಗೆ 8 ಬಾರಿ ಚಿನ್ನದ ಪದಕ ಗೆದ್ದಿದೆ. 1928, 1932, 1936, 1948, 1952, 1956, 1964ರಲ್ಲಿ ಚಿನ್ನದ ಪದಕ ಗೆದ್ದಿತ್ತು. 1968ರಲ್ಲಿ ಬೆಳ್ಳಿ ಹಾಗೂ 72ರಲ್ಲಿ ಬಂಗಾರದ ಪದಕ ಗೆದ್ದಿತ್ತು. ಮುಂದಿನ ಒಲಿಂಪಿಕ್ಸ್ನಲ್ಲಿ ಪದಕ ತಪ್ಪಿಸಿಕೊಂಡಿದ್ದ ಭಾರತ 1980 ರ ಮಾಸ್ಕೋ ಒಲಿಂಪಿಕ್ಸ್ನಲ್ಲಿ ಬಂಗಾರಕ್ಕೆ ಪದಕ ಗೆದ್ದಿತ್ತು. ಆದಾದ ಮೇಲೆ 48 ವರ್ಷಗಳ ಬದಕದ ಬರ ಎದುರಿಸಿತ್ತು. ಆದರೆ 2020ರಲ್ಲಿ ಟೋಕಿಯೋದಲ್ಲಿ ಪದಕ ಗೆದ್ದು ಕಮ್ಬ್ಯಾಕ್ ಮಾಡಿದ್ದ ಟೀಮ್ ಇಂಡಿಯಾ ಇದೀಗ ಸತತ 2ನೇ ಬಾರಿ ಪದಕದೊಂದಿಗೆ ಹಿಂತಿರುಗುತ್ತಿದೆ.