Independence Day ಸ್ವತಂತ್ರ ದಿನವು ಪ್ರತಿಯೋಬ್ಬ ಭಾರತೀಯರಿಗೆ ಹೆಮ್ಮೆ : ಶಾಸಕ ಕಾಶಪ್ಪನವರ
ಹುನಗುಂದ: ದೇಶದ ಪರಂಪರೆ ಸಿದ್ದಾಂತದ ರಾಷ್ಟçಪಿತಾಮಹ ಮಹಾತ್ಮ ಗಾಂಧಿಯವರು ಹೇಳಿದ ಮಾತಿನಂತೆ ದೇಶಕ್ಕೆ ಪವಿತ್ರವಾದ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ ಅವರ ಸಂವಿಧಾನದ ಅಡಿಯಲ್ಲಿ ಭಾರತ ದೇಶವು ಪ್ರಜಾತತ್ವ ಮತ್ತು ಜ್ಯಾತ್ಯಾತೀತ ತಳಹದಿಯಲ್ಲಿ ನಡೆದು ಈ ದೇಶವನ್ನು ಒಗ್ಗಟ್ಟಾಗಿ ಕಟ್ಟಿ ಮುನ್ನೆಡಿಸೋಣ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ಟಿಸಿಎಚ್ ಕಾಲೇಜು ಆವರಣದಲ್ಲಿ ತಾಲೂಕ ಆಡಳಿತ ಗುರವಾರ ಹಮ್ಮಿಕೊಂಡ ೭೮ ನೇ ಸ್ವಾತಂತ್ರೋತ್ಸವ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು, ಸ್ವತಂತ್ರದಿನವು ಪ್ರತಿಯೋಬ್ಬ ಭಾರತೀಯರಿಗೆ ಹೆಮ್ಮೆಯ ದಿನವಾಗಿದೆ. ಅವರು ಇಂದು ಸ್ವಾತಂತ್ರö??ಕ್ಕಾಗಿ ಹೋರಾಡಿದ ಅಸಂಖ್ಯಾತ ಮಹನೀಯರ ತ್ಯಾಗ, ಹೋರಾಟ, ಬಲಿದಾನವನ್ನು ಸ್ಮರಿಸುವ ದಿನವಾಗಿದೆ ಎಂದು ತಿಳಿಸಿದರು.
ತಹಸೀಲ್ದಾದ ನಿಂಗಪ್ಪ ಬಿರಾದರ ದ್ವಜಾರೋಹನ ನೇರವೇರಿಸಿ ಮಾತನಾಡಿದ ಅವರು ಬ್ರೀಟಿಷರ ಕಪಿಮುಷ್ಟಿಯಲ್ಲಿದ್ದ ಭಾರತ ಸ್ವತಂತ್ರö?? ಪಡೆಯಲು ಹಲವಾರು ಮಹಾತ್ಮರ ತ್ಯಾಗ ಬಲಿದಾನವೇ ಕಾರಣ ಅವರ ತಂದು ಕೊಟ್ಟ ಸ್ವಾತಂತ್ರö??ಕ್ಕೆ ಇಂದು ೭೮ ನೇ ವರ್ಷದ ಸ್ವತಂತ್ರö??ದಿನವಾಗಿ ಆಚರಿಸುತ್ತಿದ್ದೇವೆ ಎಂದು ಹೇಳಿದರು.
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕವನ್ನು ಪಡೆದ ವಿದ್ಯಾರ್ಥಿಗಳಿಗೆ ತಾಲೂಕಾ ಆಡಳಿತದಿಂದ ಸನ್ಮಾನಿಸಲಾಯಿತು. ಪಿಎಸ್ಐ ಚನ್ನಯ್ಯ ದೇವೂರ ನೇತೃತ್ವದಲ್ಲಿ ಪೋಲಿಸರು ಮತ್ತು ವಿವಿಧ ಶಾಲಾ ಕಾಲೇಜು ಎಸ್ ಸಿಸಿ ಮತ್ತು ಎನ್ ಎಸ್ ಎಸ್ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಪರೇಡ್ ಮೂಲಕ ಧ್ವಜ ವಂದನೆಯನ್ನು ಸಲ್ಲಿಸಿದರು.
ತಾಲೂಕಾ ಭೂನ್ಯಾಯ ಮಂಡಳಿಯ ಸದಸ್ಯರಾದ ಅಮರೇಶ ನಾಗೂರ, ಮಹಾಂತೇಶ ಅವಾರಿ, ಸಂಗಣ್ಣ ಗಂಜೀಹಾಳ ಪೋಲಿಸ್ ಉಪಾಧೀಕ್ಷಕ ವಿಶ್ವನಾಥರಾವ ಕುಲಕರ್ಣಿ, ಸಿಪಿಐ ಸುನೀಲ ಸವದಿ, ತಾಪಂ ಇಒ ಮುರಳೀಧರ ದೇಶಪಾಂಡೆ, ಬಿಇಒ ಜಾಸ್ಮೀನ ಕಿಲ್ಲೇದಾರ, ಕ್ಷೇತ್ರ ಸಮನ್ವಯಧಿಕಾರಿ ಸದಾಶಿವ ಗುಡಗುಂಟಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಎಂ.ಎಚ್.ಕಟ್ಟಿಮನಿ,
ಹಿಂದೂಳಿದ ಕಲ್ಯಾಣ ಇಲಾಖೆಯ ಅಧಿಕಾರಿ ಸಂಗಮೇಶ ಗಡೇದ, ಲೋಕೋಪಯೋಗಿ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶ ಹೂಲಗೇರಿ, ಸಿಡಿಪಿಒ ವಿ.ಎ.ಗಿರಿತಿಮ್ಮಣ್ಣವರ, ಕೆಡಿಪಿ ಸದಸ್ಯರಾದ ವಿಜಯಮಹಾಂತೇಶ ಗದ್ದನಕೇರಿ, ವಿ.ಮ.ಬ್ಯಾಂಕ್ ಅಧ್ಯಕ್ಷ ಶಿವಾನಂದ ಕಂಠಿ, ಪುರಸಭೆಯ ಸದಸ್ಯರಾದ ಚಂದ್ರು ತಳವಾರ, ಬಸವರಾಜ ಗೋಣ್ಣಾಗರ, ಶಾಂತಾ ಮೇಲಿನಮನಿ
ಭಾಗ್ಯಶ್ರೀ ರೇವಡಿ,ಕಮಲವ್ವ ಸಂದಿಮನಿ, ಮಾರುತಿ ಹುನಗುಂದ, ರಾಜು ಹುನಗುಂದ, ಗುರಲಿಂಗಪ್ಪ ಇಂಗಳಗೇರಿ, ಮಲ್ಲಪ್ಪ ಅಠರದಾನಿ, ಮಹಾಂತಪ್ಪ ಪಲ್ಲೇದ, ಯಮನಪ್ಪ, ಬೆಣ್ಣಿ, ವೀರುಪಾಕ್ಷಿ ಬೀಳಗಿ,ಚೇತನ ಮುಕ್ಕಣ್ಣನವರ, ವಿನೋದ ಭೋವಿ ಸೇರಿದಂತೆ ಇತರರು ಇದ್ದರು.