ಪಿಎಲ್ಡಿ ಬ್ಯಾಂಕ್ ಚುನಾವಣೆ: ೧೧ ಕಾಂಗ್ರೆಸ್ ೩ ಬಿಜೆಪಿ
ಹುನಗುಂದ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ ನಿರ್ದೇಶಕ ಮಂಡಳಿಯ ೧೪ ಸ್ಥಾನಗಳ ಪೈಕಿ ಹತ್ತು ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, ಉಳಿದ ನಾಲ್ಕು ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಮೂವರು ಬಿಜೆಪಿ ಬೆಂಬಲಿತರು ಹಾಗೂ ಓರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಶನಿವಾರ ಪಟ್ಟಣದ ಶ್ರೀ ವಿಜಯಮಹಾಂತೇಶ ಪ್ರೌಢ ಶಾಲೆಯಲ್ಲಿ ಪಿಎಲ್ಡಿ ಬ್ಯಾಂಕ್ನ ನಾಲ್ಕು ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ವೀರೇಶ ಸಂಗನಗೌಡ ಗೌಡರ (ಜಂಬಲದಿನ್ನಿ ಸಾಮಾನ್ಯ),ರುದ್ರಪ್ಪ ವೀರಪ್ಪ ಶೀಲವಂತರ (ಹಿರೇಶಿಂಗನಗುತ್ತಿ.ಸಾಮಾನ್ಯ),ಲೀಲಾವತಿ ಸಿದ್ದನಗೌಡ ಪಾಟೀಲ(ಸೂಳೇಭಾವಿ.ಸಾಮಾನ್ಯ.ಮಹಿಳೆ) ಬಿಜೆಪಿ ಬೆಂಬಲಿತರು,ಇನ್ನು ಶಿವನಗೌಡ ಭೀಮನಗೌಡ ಜಡಿಯಪ್ಪಗೌಡ (ನಂದವಾಡಗಿ ಸಾಮಾನ್ಯ) ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಅವಿರೋಧವಾಗಿ ಆಯ್ಕೆಯಾದವರ ವಿವರ: ಮಹಾಲಿಂಗಪ್ಪ ರಾಚಪ್ಪ ಕಾಶಪ್ಪನವರ (ಸಾಮಾನ್ಯ, ಧನ್ನೂರ),ಶಿವಕುಮಾರಯ್ಯ ಬಸಯ್ಯ ಬಿನ್ನೇದ(ಸಾಮಾನ್ಯ,ನಾಗೂರ),ಮಲ್ಲಪ್ಪ ಮಹಾಂತಪ್ಪ ಬಿಸರಡ್ಡಿ (ಸಾಮಾನ್ಯ, ಚಿತ್ತರಗಿ),ಪ್ರಭಾಕರ ಸಿದ್ರಾಮಪ್ಪ ನಾಗರಾಳ(ಸಾಮಾನ್ಯ,ಅಮೀನಗಡ), ಸುವರ್ಣಾ ಗಂಗಪ್ಪ ಇಲಕಲ್ಲ (ಮಹಿಳಾ,ಹುನಗುಂದ),ನೂರಪ್ಪ ಮೊತಪ್ಪ ಲಮಾಣಿ(ಪರಿಶಿಷ್ಟ ಜಾತಿ,ಇಳಕಲ್),ಸೋಮೇಶ್ವರ ಹುಲ್ಲಪ್ಪ ಬಲಕುಂದಿ(ಪರಿಶಿಷ್ಟ ಪಂಗಡ,ಗುಡೂರು ಎಸ್.ಸಿ), ಖಾಜಾಸಾಬ್ ಮಹಮದ್ಸಾಬ್ ಮುದುಗಲ್(ಹಿಂದುಳಿದ ವರ್ಗ ಅ,ಕರಡಿ),ಬಾಲನಗೌಡ ಹನಮಂತಗೌಡ ಪಾಟೀಲ(ಹಿಂದುಳಿದ ವರ್ಗ ಅ,ಕೂಡಲಸಂಗಮ),ಶೇಖರಪ್ಪ ಗುರಪ್ಪ ಬಾದ ವಾಡಗಿ( ಬಿನ್ಸಾಲಗಾರ) ಆಯ್ಕೆಯಾಗಿದ್ದಾರೆ.
ಒಟ್ಟಾರೆಯಾಗಿ ಚುನಾವಣೆಯಲ್ಲಿ ಮೂವರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದರೂ ಕೂಡಾ ನಂದವಾಡಗಿ ಕ್ಷೇತ್ರದಿಂದ ಗೆಲುವು ಸಾಧಿಸಿದ ಒರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೊತೆಗೆ ಹತ್ತು ಅವಿರೋಧ ಆಯ್ಕೆಯಾಗಿರುವ ಅಭ್ಯರ್ಥಿಗಳು ಕಾಂಗ್ರೆಸ್ ಬೆಂಬಲಿತರಾಗಿರುವುದರಿAದ ಪಿಎಲ್ಡಿ ಬ್ಯಾಂಕ್ ಅಧಿಕಾರ ಕಾಂಗ್ರೆಸ್ ಬೆಂಬಲಿಗರ ಪಾಲಾಗುವುದು ನಿಶ್ಚಿತವಾಗಿದೆ.
ಸಂಭ್ರಮಾಚರಣೆ-ನಾಲ್ಕು ಸ್ಥಾನದಲ್ಲಿ ಮೂವರ ಬಿಜೆಪಿ ಬೆಂಬಲಿತರು,ಓರ್ವ ಕಾಂಗ್ರೆಸ್ ಬೆಂಬತ ಗೆಲುವು ಸಾಧಿಸುತ್ತಿದಂತೆ ಎರಡು ಪಕ್ಷದ ಮುಖಂಡರು,ಕಾರ್ಯಕರ್ತರು ಸೇರಿ ಗುಲಾಲ ಎರಚಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಬಾಕ್ಸ್ ಸುದ್ದಿ -ಪಿಎಲ್ಡಿ ಬ್ಯಾಂಕ್ ೪ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಲ್ವರಲ್ಲಿ ಮೂವರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿರುವುದು.ಬಿಜೆಪಿಯ ಪಾಲಿಗೆ ಈ ಗೆಲುವು ಮುಂದೆ ನಡೆಯುವ ಎಲ್ಲ ಚುನಾವಣೆಗೆ ದಿಕ್ಸೂಚಿಯಾಗಲಿದೆ.ಒಂದು ವೇಳೆ ಪಿಎಲ್ಡಿ ಬ್ಯಾಂಕಿನ ೧೪ ಸ್ಥಾನಕ್ಕೂ ಚುನಾವಣೆ ನಡೆದಿದ್ದರೇ ಖಂಡಿತವಾಗಲೂ ೧೦ ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆಲುವು ಸಾಧಿಸುತ್ತಿದ್ದರು.ರಾಜಕುಮಾರ ಬಾದವಾಡಗಿ ಬಿಜೆಪಿ ಮುಖಂಡರು ಹುನಗುಂದ.
ಬಾಕ್ಸ್ ಸುದ್ದಿ- ಪಿಎಲ್ಡಿ ಬ್ಯಾಂಕ್ ಚುನಾವಣೆಯ ಮತದಾರ ಯಾದಿಯನ್ನು ತನ್ನ ಮೂಗಿನ ನೇರಕ್ಕೆ ತಯಾರಿಸಿ ಮತ್ತೇ ಕೋರ್ಟ್ನಲ್ಲಿ ಹೆಚ್ಚುವರಿ ಮತದಾರರನ್ನು ಒಪ್ಪಿಗೆ ತರೋವುದು ನಾಚಿಗೇಡಿನ ನಾಯಕತ್ವದ ಲಕ್ಷಣವಾಗಿದೆ. ಆದರೂ ಸಹಿತ ಸಧ್ಯ ನಾಲ್ಕು ಸ್ಥಾನಗಳಲ್ಲಿ ಮೂವರು ಬಿಜೆಪಿ ಬೆಂಬಲಿತರು ಗೆದ್ದಿರೋದು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ.ಜನರ ಒಲವು ನಮ್ಮ ಪರವಾಗಿದೆ ಎನ್ನುವುದ್ದನ್ನು ಈ ಚುನಾವಣೆ ಸಾಭೀತು ಮಾಡಿದೆ.ಈಗ ಮೂವರು ಗೆದ್ದೀವೆ ಹಾಗೇನಾದರೂ ಮರಳಿ ಎಲ್ಲರನ್ನು ರಾಜೀನಾಮೆ ಕೊಡಿಸಿ ಚುನಾವಣೆ ಎದರಿಸಲಿ ನಾವು ೧೦ ಕ್ಕೂ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ. ಪರತಗೌಡ ಪಾಟೀಲ ಬಿಜೆಪಿ ಮುಖಂಡರು ಹಿರೇಶಿಂಗನಗುತ್ತಿ.