Free Cataract Surgery as part of Sri Satyatmatirtha’s Chaturmasya ಶ್ರೀ ಸತ್ಯಾತ್ಮತೀರ್ಥರ ಚಾತುರ್ಮಾಸ್ಯದ ಅಂಗವಾಗಿ ಉಚಿತ ಕಣ್ಣಿನ ಪೊರೆ ಶಸ್ತçಚಿಕಿತ್ಸೆ

WhatsApp Group Join Now
Telegram Group Join Now
Instagram Group Join Now
Spread the love

Free Cataract Surgery as part of Sri Satyatmatirtha's Chaturmasya ಶ್ರೀ ಸತ್ಯಾತ್ಮತೀರ್ಥರ ಚಾತುರ್ಮಾಸ್ಯದ ಅಂಗವಾಗಿ ಉಚಿತ ಕಣ್ಣಿನ ಪೊರೆ ಶಸ್ತçಚಿಕಿತ್ಸೆ

Chaturmasya  ಶ್ರೀ ಸತ್ಯಾತ್ಮತೀರ್ಥರ ಚಾತುರ್ಮಾಸ್ಯದ ಅಂಗವಾಗಿ ಉಚಿತ ಕಣ್ಣಿನ ಪೊರೆ ಶಸ್ತçಚಿಕಿತ್ಸೆ

ಇಳಕಲ್ : ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥರ ದಿವ್ಯಾನುಗ್ರಹದಿಂದ ನೂರು ಜನ ಬಡವರಿಗೆ ಉಚಿತವಾಗಿ ಕಣ್ಣಿನ ಪೊರೆಯ ಶಸ್ತçಚಿಕಿತ್ಸೆಯನ್ನು ಮಾಡಲಾಗುವುದು ಎಂದು ಖ್ಯಾತ ನೇತ್ರ ತಜ್ಞರಾದ ಡಾ. ಸುಶೀಲ ಕಾಖಂಡಕಿಯವರು ಇಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.

ರಾಘವೇಂದ್ರ ನೇತ್ರಸೇವಾ ಕೇಂದ್ರ ಚಾರಿಟೇಬಲ್ ಟ್ರಸ್ಟ್, ಇಳಕಲ್ ಬ್ರಾಹ್ಮಣ ಸಮಾಜ ಹಾಗೂ ಲಯನ್ಸ್ ಕ್ಲಬ್ ಇಳಕಲ್ ಶಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಗಸ್ಟ್ ೩೦ ಹಾಗೂ ೩೧ರಂದು ಕಣ್ಣಿನ ಪೊರೆ ಉಚಿತ ಶಸ್ತçಚಿಕಿತ್ಸಾ ಶಿಬಿರವನ್ನು ಆಯೋಜಿಸಲಾಗಿದೆ.

ಆರ್ಥಿಕವಾಗಿ ಹಿಂದುಳಿದ ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯಬಹುದಾಗಿದೆ ಎಂದು ಅವರು ಹೇಳಿದರು. ಈ ಉಚಿತ ಶಿಬಿರದ ಎಲ್ಲ ಮಾಹಿತಿಗಳನ್ನು ಟ್ರಸ್ಟ್ನ ಅಧ್ಯಕ್ಷೆ ಸುದೀಪ್ತಾ ಕಾಖಂಡಕಿಯವರು ತಿಳಿಸುತ್ತಾ ಲೋಕಕಲ್ಯಾಣಕ್ಕಾಗಿ ಅನೇಕ ಸೇವೆ ಹಾಗೂ ಯೋಜನೆಗಳನ್ನು ಹಾಕಿಕೊಂಡು ಈಗ ಮುಂಬೈನಲ್ಲಿ ಚಾತುಮಾಸ್ಯ ಸಂಕಲ್ಪ ಕೈಗೊಂಡಿರುವ ಉತ್ತರಾದಿ ಮಠಾಧೀಶರಾದ ಶ್ರೀ ಶ್ರೀ ಸತ್ಯಾತ್ಮತೀರ್ಥರ ಅನುಗ್ರಹದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು

ಭವ್ಯ ಇತಿಹಾಸ ಹೊಂದಿರುವ ಉತ್ತರಾದಿ ಮಠದ ಚಾತುರ್ಮಾಸ್ಯ ಹಾಗೂ ಮಹಾಸಮಾರಾಧನೆಗಳು ದೇಶಾದ್ಯಂತ ತುಂಬಾ ಜನಪ್ರಿಯವಾಗಿವೆ. ಶ್ರೀ ಸತ್ಯಾತ್ಮತೀರ್ಥರ ದರ್ಶನ ಮಾತ್ರದಿಂದ ತಮ್ಮ ಪಾಪಗಳೆಲ್ಲ ದೂರವಾಗುವವು ಎಂದು ಭಕ್ತರು ನಂಬಿದ್ದಾರೆ. ಶ್ರೀಗಳ ಕ್ಷಣಮಾತ್ರದ ದರ್ಶನಕ್ಕಾಗಿ ಜನರು ಹಾತೊರೆಯುತ್ತಾರೆ. ವಿದೇಶಗಳಲ್ಲಿಯೂ ಅವರಿಗೆ ಅಪಾರ ಸಂಖ್ಯೆಯ ಭಕ್ತರಿದ್ದಾರೆಂದು ಈ ಸಂದರ್ಭದಲ್ಲಿ ಕಾಖಂಡಕಿ ದಂಪತಿಗಳು ಗುರುಗಳನ್ನು ಸ್ಮರಿಸಿದರು.

ಇಳಕಲ್ ಬ್ರಾಹ್ಮಣ ಸಮಾಜ, ಲಯನ್ಸ್ ಕ್ಲಬ್ ಹಾಗೂ ಜೇಸಿ ಸಿಲ್ಕ್ ಸಿಟಿ ಸಂಸ್ಥೆಗಳು ಕೂಡಾ ಈ ಸೇವೆಯಲ್ಲಿ ಕೈಜೋಡಿಸಿವೆ. ಅಗಸ್ಟ್ ೩೦ರಂದು ತಮ್ಮ ಆಸ್ಪತ್ರೆಯಲ್ಲಿ ಕ್ಯಾರ‍್ಯಾಕ್ಟ್ ಆಪರೇಶನ್ ಮಾಡಲಾಗುವುದು ಹಾಗೂ ಮರುದಿನ ೩೧ರಂದು ಶಸ್ತçಚಿಕಿತ್ಸೆಗೆ ಒಳಗಾದವರಿಗೆ ಶುಶ್ರೂಷೆ ಮಾಡಲಾಗುವುದು ಎಂದು ಡಾ. ಕಾಖಂಡಕಿ ಅವರು ತಿಳಿಸಿದರು. ೩೧ರಂದು ಬೆಳಿಗ್ಗೆ ಪಾಂಡುರAಗ ಸಮುದಾಯ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಎಲ್ಲ ಫಲಾನುಭವಿಗಳು ಭಾಗವಹಿಸುತ್ತಾರೆ.

ಸಮಾರಂಭದ ಮುಖ್ಯ ಅತಿಥಿಗಳಾಗಿ ಹುನಗುಂದ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ವಿಜಯಾನಂದ ಕಾಶಪ್ಪನವರ ಹಾಗೂ ಹಿರಿಯ ಮುಖಂಡರಾದ ವೆಂಕಟೇಶ ಸಾಕಾ, ರಾಜು ಬೋರಾ, ಶಾಂತು ಸುರಪುರ, ಅವರು ಆಗಮಿಸಲಿದ್ದಾರೆ. ಸುದೀಪ್ತಾ ಈ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಜೇಸಿ ಸಿಲ್ಕ್ ಸಿಟಿ ಸಂಸ್ಥೆ ಹಾಗೂ ಅಕ್ಕನ ಬಳಗ ಈ ಶಿಬಿರಕ್ಕೆ ಸಹಕಾರ ನೀಡಲಿವೆ.

ಶ್ರೀ ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನವಾದ ಉತ್ತರಾದಿ ಮಠವು ಶ್ರೀ ಸತ್ಯಾತ್ಮತೀರ್ಥರ ವಿದ್ವತ್ತು ಹಾಗೂ ಶಿಷ್ಯರಿಗೆ ಅವರು ಧಾರೆ ಎರೆಯುವ ವಿದ್ವತ್ತುಗಳಿಂದ ಶ್ರೀಮಠವು ಕೀರ್ತಿಶಿಖರದ ಉತ್ತುಂಗಕ್ಕೇರಿದೆ. ಸದಾ ಲೋಕಕಲ್ಯಾಣದ ಚಿಂತನೆಯನ್ನು ಮಾಡುತ್ತಿರುವ ಉತ್ತರಾದಿ ಮಠಾಧೀಶರ ಅನುಗ್ರಹವು ನಮ್ಮ ಜೀವನವನ್ನು ಪುನೀತಗೊಳಿಸಿದೆ ಎಂದು ಡಾ. ಕಾಖಂಡಕಿ ಹೇಳಿದರು.


Spread the love

Leave a Comment

error: Content is protected !!