KudalSangam ಸುಕ್ಷೇತ್ರ ಕೂಡಲಸಂಗಮದಲ್ಲಿ ಅನೈತಿಕ ಚಟುವಟಿಕೆಗಳು : ಕರವೇ ಅರೋಪ
ಬಾಗಲಕೋಟ : ಜಿಲ್ಲೆಯ ಹುನುಗಂದ ತಾಲೂಕಿನ ಸುಕ್ಷೇತ್ರ ಕೂಡಲಸಂಗಮದಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಈ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಸಂಜಯಗೌಡ ಗೌಡರ ಕಳವಳ ವ್ಯಕ್ತಪಡಿಸಿದ್ದಾರೆ.
ದೇವಸ್ಥಾನಕ್ಕೆ ಹೋಗುವ ದ್ವಿಪಥ ರಸ್ತೆಯ ಆಜು ಬಾಜುದಲ್ಲಿ ಕಸ ಕಡ್ಡಿಗಳ ರಾಶಿ ತುಂಬಿಕೊಂಡಿದೆ. ಅವುಗಳನ್ನು ಸ್ವಚ್ಚಮಾಡಿಸುವ ಯಾವುದೇ ಹೊಣೆಗಾರಿಕೆಯನ್ನು ಅಭಿವೃದ್ಧಿ ಮಂಡಳಿ ಹೊತ್ತುಕೊಳ್ಳದೇ ಕಣ್ಣು ಮುಚ್ಚಿ ಕುಳಿತಿದೆ.
ಇನ್ನೂ ಅಲ್ಲಿನ ರಥದ ಮನೆಯನ್ನು ನೋಡಿದಾಗ ಇದು ಪವಿತ್ರ ಸ್ಥಳವೋ ಅಥವಾ ಕುಡುಕರ ತಾಣವೋ ಎಂಬ ಅನುಮಾನ ಕಾಡುತ್ತಿದೆ.
ರಥದ ಮನೆಯಲ್ಲಿ ಎಲ್ಲಿ ಬೇಕೋ ಅಲ್ಲಿ ಬೀರ ಬಾಟಲಿಗಳು, ಸಾರಾಯಿ ಪಾಕೀಟಗಳು ನೀರಿನ ಪೌಚುಗಳು ಗ್ಲಾಸುಗಳು ತುಂಬಿವೆ. ಇದನ್ನು ನೋಡಿದಾಗ ಅಯ್ಯೋ ಕೂಡಲಸಂಗಮನಾಥ ಎಂಬ ಉದ್ಗಾರ ಜನರ ಬಾಯಿಯಲ್ಲಿ ಬರುತ್ತದೆ.
ಅಭಿವೃದ್ದಿ ಮಂಡಳಿ ಪದಾಧಿಕಾರಿಗಳು ಇದರತ್ತ ಕೂಡಲೇ ಗಮನಹರಿಸಿ ಸ್ವಚ್ಚತೆಯನ್ನು ಕಾಪಾಡುವ ಜೊತೆಗೆ ಇಂತಹ ಅನೈತಿಕ ಚಟುವಟಿಕೆಗಳು ನಡೆಯದಂತೆ ಎಚ್ಚರಿಕೆ ವಹಿಸುವದು ಅಗತ್ಯವಾಗಿದೆ. ಒಂದು ವೇಳೆ ಅಭಿವೃದ್ಧಿ ಮಂಡಳಿ ಯಾವುದೇ ಕ್ರಮ ಕೈಗೊಳ್ಳದೇ ಹೋದರೆ ಕರವೇ ವತಿಯಿಂದ ಪ್ರತಿಭಟನೆಯನ್ನು ಮಾಡಬೇಕಾಗುತ್ತದೆ ಎಂದು ಪದಾಧಿಕಾರಿಗಳು ಎಚ್ಚರಿಸಿದ್ದಾರೆ.