ಜೈ ಶಂಕರ್ ಕಂಡ್ರೆ ಚೀನಾಕ್ಕೆ ಊರಿ ಯಾಕೆ ಗೊತ್ತಾ!
ಭಾರತ ಸರ್ಕಾರದ ಅತ್ಯಂತಪ್ರಭಾವಿ ಸಚಿವರದೊಂದು ಪಟ್ಟಿ ಮಾಡಿದರೆ ಅದರಲ್ಲಿಟಾಪ್ ಫೈವ್ ಒಳಗಡೆ ಕಾಣಿಸಿಕೊಳ್ಳುವುದು ಎಸ್ಜ ಜಯಶಂಕರ್ ಅವರ ಹೆಸರು ಭಾರತದ ವಿದೇಶಾಂಗನೀತಿಗೊಂದು ಹೊಸ ಧನಿಯನ್ನು ಕೊಟ್ಟವರು ಜಯಶಂಕರ್ಭಾರತವನ್ನ ಮತ್ತು ಭಾರತದ ನಿರ್ಧಾರಗಳನ್ನಅಂತರಾಷ್ಟ್ರೀಯ ವೇದಿಕೆಗಳಲ್ಲಿ ಅತ್ಯಂತನಿರ್ಭೆಯಿಂದ ಸಮರ್ಥಿಸಿಕೊಳ್ಳುವ ಜಯಶಂಕರ್ ಅವರಮಾತುಗಳು ಕೆಲವು ಬಾರಿ ಕೆಲವರಿಗೆ ಕೇಳುವುದಕ್ಕೆಕೂಡ ಕಠಿಣ ಅನ್ನಿಸಬಹುದು ಆದರೆ ಭಾರತದದೃಷ್ಟಿಯಿಂದ ಅದರ ಅಗತ್ಯ ಖಂಡಿತ ಇದೆ ಅಂತ ಕೂಡಅನ್ನಿಸದೆ ಇರುವುದಿಲ್ಲ ಅಂತಹ ಜಯಶಂಕರ್ ಪಶ್ಚಿಮದಮಾಧ್ಯಮಗಳಿಗೆ ಮಾತ್ರ ಅಲ್ಲ ಈಗ ಚೈನಾದ ಮಾಧ್ಯಮಗಳಪಾಲಿಗೆ ಕೂಡ ವಿಲನ್ ತರ ಕಾಣ್ತಾ ಇದ್ದಾರೆಮೊನ್ನೆ ಜಯಶಂಕರ್ ಬಗ್ಗೆ ಒಂದು ಲೇಖನವನ್ನುಪ್ರಕಟಿಸಿ ಅದಕ್ಕೆ ಭಾರತದ ವಿದೇಶಾಂಗ ನೀತಿಗೆಜಯಶಂಕರ್ ಅನ್ನೋದೇ ಒಂದು ಸಮಸ್ಯೆ ಅನ್ನೋತಲೆಬರಹವನ್ನು ಕೊಟ್ಟಿದ್ದ ಚೈನಾ ಸರ್ಕಾರದಮುಖವಾಣಿ ಗ್ಲೋಬಲ್ ಟೈಮ್ಸ್ ಆ ಲೇಖನವನ್ನೀಗಇದ್ದಕ್ಕಿದ್ದ ಹಾಗೆ ಅಳಿಸಿ ಹಾಕಿದೆ ಹಾಗಾದ್ರೆ ಜಯಶಂಕರ್ ಬಗ್ಗೆ ಚೈನಾಗೆ ಅಷ್ಟೊಂದು ದ್ವೇಷ ಹಾಗೂಭಯ ಎರಡು ಯಾಕೆ ಆ ಲೇಖನದಲ್ಲಿ ಚೈನಾ ಹೇಳೋದಕ್ಕೆ ಹೋಗಿದ್ದೇನು ಬನ್ನಿ ನೋಡೋಣ
ಚೈನಾದ ಬಗ್ಗೆ ಭಾರತ ಈ ಹಿಂದೆ ಯಾವತ್ತೂಮಾತನಾಡದಷ್ಟು ಹೆಚ್ಚು ಇತ್ತೀಚಿನ ದಿನಗಳಲ್ಲಿಮಾತಾಡ್ತಾ ಇದೆ ಪ್ರತಿ ವೇದಿಕೆಯಲ್ಲಿ ಕೂಡ ಚೈನಾದಹೆಸರು ಪ್ರಸ್ತಾಪ ಮಾಡ್ತಾ ಚೈನಾ ಅನ್ನೋದುಜಗತ್ತಿಗೆ ಹೇಗೆ ಕಂಟಕವಾಗಿ ಪರಿಣಮಿಸುತ್ತಾ ಇದೆಅನ್ನೋದನ್ನ ಬಹಿರಂಗವಾಗಿ ಹೇಳುತ್ತಾ ಪೂರ್ವಏಷ್ಯಾದಲ್ಲಿ ಚೈನಾದಿಂದ ಸಂಕಷ್ಟಕ್ಕೆ ಕೀಡಾಗ್ತಾಇರೋದು ದೇಶಗಳ ಜೊತೆಗೆ ಭಾರತದ ಸಂಬಂಧಗಳುಗಟ್ಟಿಯಾಗುವ ಹಾಗೆ ನೋಡಿಕೊಳ್ಳುತ್ತಾ ಪೂರ್ವಮತ್ತು ಪಶ್ಚಿಮ ಎರಡು ಕಡೆಗಳಲ್ಲಿ ಚೈನಾದಹೆಸರನ್ನು ಬದ್ನಾಮ್ ಮಾಡ್ತಾ ಇರುವ ಏಕೈಕವ್ಯಕ್ತಿ ಅಂದ್ರೆ ಅದು ಭಾರತದ ವಿದೇಶಾಂಗ ಸಚಿವಎಸ್ ಜಯಶಂಕರ್ ಹೀಗಾಗಿ ಚೈನಾ ಜಯಶಂಕರ್ ಅವರಹೆಸರು ಕೇಳಿದರು ಕೂಡ ಉರಿದು ಬೀಳುತ್ತೆ ಹಾಗೆಪದೇಪದೇ ಚೈನಾದ ವಿದೇಶಾಂಗ ಸಚಿವ ವಾಂಗಿ ಜಯಶಂಕರ್ಅವರನ್ನ ಭೇಟಿ ಮಾಡ್ತಾರೆ ಮಾತುಕಥೆಗಳನ್ನುಮಾಡ್ತಾರೆ ಆದರೆ ಭಾರತ ಹಾಗೂ ಚೈನಾದ ನಡುವಿನಸಮಸ್ಯೆಗಳು ಬಗೆಹರಿತಾ ಇಲ್ಲ
ಭಾರತದ ಗಡಿಯಲ್ಲಿ ಚೈನಾ ಸೇನೆ
ಭಾರತದ ಗಡಿಯಲ್ಲಿ ಚೈನಾ ತಂದು ನಿಲ್ಲಿಸಿರುವ ಸೇನೆಯನ್ನ ಹಿಂದಕ್ಕೆಪಡಿತಾ ಇಲ್ಲ ಹಾಗೆ ಭಾರತದ ಜೊತೆಗೆ ಬೆಣ್ಣೆಮಾತುಗಳ ಮೂಲಕವೇ ಒಂದು ಕಡೆ ವ್ಯಾಪಾರನುಮಾಡಿಕೊಳ್ಳುತ್ತಾ ಮತ್ತೊಂದು ಕಡೆ ಗಡಿಯಲ್ಲಿಸ್ವಲ್ಪ ಸ್ವಲ್ಪವೇ ಆಕ್ರಮಿಸಿಕೊಳ್ಳುತ್ತಾ ಬರ್ತಾಇದ್ದ ಚೈನಾದ ಹಳೆಯ ಸಲಾಮಿ ಸ್ಲೈಸಿಂಗ್ ಟೆಕ್ನಿಕ್ಕೂಡ ಈಗ ಹೆಚ್ಚು ನಡೀತಾ ಇಲ್ಲ ಭಾರತ ಸಾಕಷ್ಟುಚೈನಾ ವಸ್ತುಗಳ ಆಮದಿನ ಮೇಲೆ ನಿರ್ಬಂಧವನ್ನುವಿಧಿಸಿದೆ ಭಾರತದ ಮಾರುಕಟ್ಟೆಗೆ ಈಗ ಚೈನಾದಮುಕ್ತ ಪ್ರವೇಶ ಸಾಧ್ಯವಾಗ್ತಾ ಇಲ್ಲ ಇದೆಲ್ಲದರಹಿಂದೆ ಜಯಶಂಕರ್ ಕೂಡ ಇದ್ದಾರೆ ಹೀಗಾಗಿ ಜಯಶಂಕರ್ಮೇಲೆ ಚೈನಾ ಬೆಂಕಿ ಕಾರ್ತಾ ಇದೆ ಅದು ಕೂಡ ತುಂಬಾಇಂಟರೆಸ್ಟಿಂಗ್ ಆಗಿಗೆಳೆಯರೇ ಚೈನಾದ ಕಮ್ಯುನಿಸ್ಟ್ ಸರ್ಕಾರ ಇದೆಯಲ್ಲಅದರ ಮುಖವಾಣಿಯ ಹೆಸರು ಗ್ಲೋಬಲ್ ಟೈಮ್ಸ್ ಚೈನಾದಬಗ್ಗೆ ಮತ್ತು ಚೈನಾ ವಿರೋಧಿಗಳ ಬಗ್ಗೆ ಅಲ್ಲಿನಸರ್ಕಾರ ಏನನ್ನಾದರೂ ಹೇಳಬೇಕು ಅಂದುಕೊಂಡರೆ ಅದುಪ್ರಕಟಣೆಗೊಳ್ಳುವುದು ಇದೆ ಗ್ಲೋಬಲ್ ಟೈಮ್ಸ್ಅಲ್ಲಿ ಇಂತಹ ಗ್ಲೋಬಲ್ ಟೈಮ್ಸ್ ಮೊನ್ನೆ ವಾಂಗ್ಡಾಮಿಂಗ್ ಅನ್ನೋ ಹೆಸರಲ್ಲಿ ಒಂದು ಲೇಖನವನ್ನುಪ್ರಕಟಿಸಿದೆ
ಈ ವಾಂಗ್ ಡಾಮಿಂಗ್ ಚೈನಾದ ರಾಜಕೀಯವಿಶ್ಲೇಷಣೆಕಾರ ವಿಜ್ಞಾನದ ಇತಿಹಾಸಕಾರ ಅಂತೆಲ್ಲಅದರಲ್ಲಿ ಹೇಳಲಾಗಿದೆ ಆದರೆ ಈ ವಾಂಗ್ ಡಾಮಿಂಗ್ಅನ್ನೋದು ಒಂದು ನಕಲಿ ಹೆಸರು ಚೈನಾದ ಸರ್ಕಾರಬೇನಾಮಿ ಹೆಸರಲ್ಲಿ ಯಾರ ವಿರುದ್ಧವಾದರೂ ತನ್ನಅಭಿಪ್ರಾಯವನ್ನು ಹೇಳಬೇಕಾಗಿ ಬಂದಾಗ ಇಂತಹ ನಕಲಿಹೆಸರುಗಳಲ್ಲಿ ಲೇಖನಗಳನ್ನ ಪ್ರಕಟಿಸುವ ಕೆಲಸವನ್ನಮಾಡುತ್ತೆ ಅಂತ ತೈವಾನ್ ನಲ್ಲಿ ಕೆಲಸ ಮಾಡುವಪತ್ರಕರ್ತ ಆದಿಲ್ ಬ್ರಾರ್ ಅನ್ನೋವರು ಟ್ವೀಟ್ಮಾಡಿದ್ದಾರೆ ಈ ವಾಂಗ್ ಡಾಮಿಂಗ್ ಯಾರುಅನ್ನೋದನ್ನ ಸ್ವಲ್ಪ ಬಕ್ಕಿಟ್ಟು ಆ ಲೇಖನದಲ್ಲಿಇದ್ದದ್ದು ಏನು ಅನ್ನೋ ಬಗ್ಗೆ ಮಾತ್ರ ನಾವಿಲ್ಲಿಗಮನಹರಿಸೋಣ ಗೆಳೆಯರೇ ಭಾರತ ಮತ್ತು ಚೈನಾಸಂಬಂಧಗಳು ಸುಧಾರಣೆ ಆಗೋದಕ್ಕೆ ಎಸ್ ಜೆ ಶಂಕರ್ಬಿಡ್ತಾರೆ ಇಲ್ಲ ಅನ್ನೋದು ಲೇಖನದ ಒಟ್ಟಾರೆಸಾರಾಂಶ ಭಾರತದಲ್ಲಿ ದೇಶದ ಹಿತಾಸಕ್ತಿಗಳ ಬಗ್ಗೆಗಮನ ಕೊಡುವ ನಾಯಕರ ಸಂಖ್ಯೆ ತುಂಬಾ ಕಡಿಮೆ ಇದೆಅಲ್ಲಿನ ಬಹುತೇಕರು ತಮ್ಮ ಸ್ವಹಿತಾಸಕ್ತಿಗಳ ಕಡೆಹೆಚ್ಚು ಗಮನ ಕೊಡುತ್ತಾರೆ ಅಂತವರಲ್ಲಿ ಜಯಶಂಕರ್ಕೂಡ ಒಬ್ಬರು ಅಂತ ಆ ಲೇಖನದಲ್ಲಿ ಆರೋಪಮಾಡಲಾಗಿದೆ ಹಾಗೆ ಭಾರತ ಮತ್ತು ಚೈನಾದ ನಡುವಿನಸಮಸ್ಯೆಗಳು ಬಗೆಹರಿದು ಅಲ್ಲಿ ಸಾಮರಸ್ಯ ಏರ್ಪಡದಹಾಗೆ ಕೂಡ ಜಯಶಂಕರ್ ತಡಿತಾ ಇದ್ದಾರೆ ಅಂತ ಚೈನಾದಮಾಧ್ಯಮ ಹೇಳ್ತಾ ಇದೆ ಅಂದ್ರೆ ಚೈನಾದ ಅದೇ ಯಥಾಪ್ರಕಾರದ ಬಣ್ಣದ ಮಾತುಗಳನ್ನು ಹೇಳ್ಕೊಂಡು ಹಿಂದಿಚೀನಿ ಬಾಯಿ ಬಾಯಿ ಅಂತ ಹೇಳಿ ಬಾಯಿಗೆ ಮಣ್ಣುಹಾಕಿಕೊಳ್ಳುವ ಕೆಲಸವನ್ನ ಭಾರತ ಮಾಡ್ತಾ ಇಲ್ಲಅದಕ್ಕೆ ಜಯಶಂಕರ್ ಅಡ್ಡಿ ಆಗ್ತಾ ಇದ್ದಾರೆಅನ್ನೋದು ಚೈನಾದ ಉದ್ದೇಶ ಇರಬೇಕು.
ಈ ಜಗತ್ತಿನ ಸಾಮಾನ್ಯಸಮಸ್ಯೆ ಅಂದ್ರೆ ಕಾಮನ್ ಪ್ರಾಬ್ಲಮ್ ಚೈನಾ
ಇನ್ನುಇತ್ತೀಚಿಗಷ್ಟೇ ಜಯಶಂಕರ್ ಈ ಜಗತ್ತಿನ ಸಾಮಾನ್ಯಸಮಸ್ಯೆ ಅಂದ್ರೆ ಕಾಮನ್ ಪ್ರಾಬ್ಲಮ್ ಚೈನಾ ಅಂತಹೇಳಿದ್ರು ನೀವು ಬೇಕಿದ್ರೆ ಯುರೋಪ್ ಗೆ ಹೋಗಿಕೇಳಿ ಅಲ್ಲಿನ ಜನರ ಸಮಸ್ಯೆ ಚೈನಾನೇ ಆಗಿರುತ್ತೆಅಲ್ಲಿನ ಪ್ರಮುಖ ಆರ್ಥಿಕ ಹಾಗೂ ರಾಷ್ಟ್ರೀಯಭದ್ರತೆಗೆ ಸಂಬಂಧಪಟ್ಟ ಚರ್ಚೆಗಳು ಚೈನಾದಹೆಸರಿಲ್ಲದೆ ಮುಗಿಯುವುದಿಲ್ಲ ಹಾಗೆ ಅಮೆರಿಕಾಕೂಡ ಚೈನಾದ ಬಗ್ಗೆ ಬಗ್ಗೆ ತೀವ್ರ ಕಳವಳವನ್ನಹೊಂದಿದೆ ಹೀಗಾಗಿ ಚೈನಾ ಅನ್ನೋದು ಕೇವಲ ಭಾರತದಸಮಸ್ಯೆ ಮಾತ್ರ ಅಲ್ಲ ಹಾಗೆ ಚೈನಾ ಜೊತೆ ಹೇಗೆವ್ಯವಹರಿಸಬೇಕು ಅನ್ನೋ ಬಗ್ಗೆ ಚಿಂತೆ ಕೇವಲಭಾರತಕ್ಕೆ ಮಾತ್ರ ಇಲ್ಲ ಅದೊಂದು ಜಾಗತಿಕ ಸಮಸ್ಯೆಇಲ್ಲಿ ಕಳೆದ ನಾಲ್ಕು ವರ್ಷಗಳ ಗಡಿಬಿಕ್ಕಟ್ಟಿನಕಾರಣದಿಂದ ಭಾರತ ಮತ್ತು ಚೈನಾದ ಸಮಸ್ಯೆ ಸ್ವಲ್ಪಭಿನ್ನವಾಗಿ ಕಾಣ್ತಾ ಇದೆ ಅಷ್ಟೇ ಅಂತ ಜಯಶಂಕರ್ಹೇಳಿದ್ರು ಅವರ ಈ ಮಾತುಗಳಿಗೆ ಆ ಲೇಖನದಲ್ಲಿಖಾರವಾಗಿ ಪ್ರತಿಕ್ರಿಯಿಸುವ ಪ್ರಯತ್ನ ನಡೆದಿದೆಜಯಶಂಕರ್ ಚೈನಾದ ಬಗ್ಗೆ ವಿಪರೀತ ಅಸೂಯೆ ಮತ್ತುಮತ್ತು ಈರ್ಷೆಯನ್ನು ಹೊಂದಿದ್ದಾರೆ ಅಂತ ಆಲೇಖನದಲ್ಲಿ ಹೇಳಲಾಗಿದೆ
ಇಲ್ಲಿ ಚೈನಾ ಹಾಗೂಭಾರತದ ಸಂಬಂಧ ಸುಧಾರಣೆಯ ಪ್ರಯತ್ನಗಳಿಂದಲೇಜಯಶಂಕರ್ಭಯಭ್ರಾಂತರಾಗಿದ್ದಾರೆ ಒಂದು ವೇಳೆ ಎರಡು ದೇಶಗಳನಡುವೆ ಸಮಸ್ಯೆ ಸರಿಹೋಗಿಬಿಟ್ರೆ ಕಳೆದ ನಾಲ್ಕುವರ್ಷಗಳಲ್ಲಿ ಅವರ ವಿದೇಶಾಂಗ ನೀತಿಗಳು ತಪ್ಪುನಿರ್ವಹಣೆಯಿಂದ ಕೂಡಿದ್ವು ಅನ್ನೋದುಗೊತ್ತಾಗಿಬಿಡುತ್ತೆ ಅನ್ನುವ ಆತಂಕ ಜಯಶಂಕರ್ಅವರನ್ನ ಕಾಡ್ತಾ ಇದೆ ಅಂತ ಕೂಡ ಈ ಲೇಖನ ಹೇಳ್ತಾಇದೆ ಜೊತೆಗೆ ಜಯಶಂಕರ್ ಪಶ್ಚಿಮವನ್ನು ತೃಪ್ತಿಪಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ ಅನ್ನೋಆರೋಪವನ್ನು ಕೂಡ ಈ ಲೇಖನದಲ್ಲಿ ಹೇಳಲಾಗಿದೆಮೊನ್ನೆ ಭಾರತದ ಪ್ರಧಾನಿ ನರೇಂದ್ರ ಮೋದಿರಷ್ಯಾಗೆ ಹೋಗಿ ಬಂದರು ಅದರ ಬೆನ್ನಲ್ಲೇ ಅವರಪ್ರವಾಸವನ್ನ ಯುಕ್ರೇನ್ ಗೆ ಏರ್ಪಡಿಸಿದ್ದುವಿದೇಶಾಂಗ ಸಚಿವ ಎಸ್ ಜಯಶಂಕರ್ ಈ ಭೇಟಿಯ ಉದ್ದೇಶಅಮೆರಿಕಾನ ತೃಪ್ತಿ ಪಡಿಸುವುದು ಮಾತ್ರ ಆಗಿತ್ತುಮೋದಿಯವರ ಈ ಭೇಟಿಯಿಂದ ರಷ್ಯಾಗೂ ಖುಷಿಯಾಗಲಿಲ್ಲಯುಕ್ರೇನ್ ಗೂ ಲಾಭ ಆಗಲಿಲ್ಲ ಆದರೆ ಅಮೆರಿಕಾಗೆಮಾತ್ರ ಖುಷಿಯಾಯಿತು ಇಲ್ಲಿ ಚೈನಾ ವಿರುದ್ಧಭಾರತದ ವಿದೇಶಾಂಗ ಸಚಿವರು ಬೆಂಕಿ ಉಗಳೋವುದರಹಿಂದೆ ಕೂಡ ಅಮೆರಿಕಾನ ತೃಪ್ತಿ ಪಡಿಸುವ ಇರಾದೆಇದೆ ಅಂತ ಗ್ಲೋಬಲ್ ಟೈಮ್ಸ್ ಬರ್ಕೊಂಡಿದೆಗೆಳೆಯರೇ ಜಯಶಂಕರ್ ಪಶ್ಚಿಮದ ದೇಶಗಳನ್ನು ಯಾವಪರಿ ಓಲೈಸ್ತಾ ಇದ್ದಾರೆ ಅನ್ನೋದನ್ನ ಯುಕ್ರೇನ್ಯುದ್ಧ ಶುರುವಾದ ದಿನದಿಂದಲೂ ನಾವೆಲ್ಲ ನೋಡ್ತಾಇದ್ದೀವಿ ಭಾರತ ರಷ್ಯಾದಿಂದ ಯಾವ ವಸ್ತುಗಳನ್ನುಖರೀದಿ ಮಾಡಬಾರದು ಅಂತ ಪಶ್ಚಿಮ ಹಾಗೂ ಅಮೆರಿಕಾಎರಡು ಕೂಡ ಬಯಸ್ತಾ ಇದ್ವು ಆದರೆ ಭಾರತ ಕಚ್ಚಾತೈಲಖರೀದಿಯನ್ನು ನಿಲ್ಲಿಸಲಿಲ್ಲ ಬದಲಿಗೆ ಹೆಚ್ಚುಮಾಡ್ತು ಪಶ್ಚಿಮದ ದೇಶಗಳು ಅದರ ವಿರುದ್ಧ ದೊಡ್ಡಮಟ್ಟದಲ್ಲಿ ಧನಿಯ ಎತ್ತಿದ್ವು ಅದನ್ನಅಂತರಾಷ್ಟ್ರೀಯ ವೇದಿಕೆಗಳಲ್ಲಿ ಶಂಕರ್ಸಮರ್ಥಿಸಿಕೊಂಡ ರೀತಿ ಹೇಗಿತ್ತು ಅನ್ನೋದನ್ನನಾವೆಲ್ಲ ನೋಡಿದೀವಿ ತೀರಾ ಇಷ್ಟೊಂದು ಖಾರವಾಗಿಮಾತನಾಡಬೇಕಾ ಅಂತ ಕೂಡ ಕೆಲವರು ಅವತ್ತುಕೇಳಿದ್ದಿದೆ ರಷ್ಯಾದಿಂದ ತೈಲ ಖರೀದಿ ಮಾಡುವಮೂಲಕ ಭಾರತ ಪಶ್ಚಿಮಕ್ಕೆ ಉಪಕಾರ ಮಾಡ್ತಾ ಇದೆನೀವು ಈ ಕಾರಣಕ್ಕೆ ನಮಗೆ ಥ್ಯಾಂಕ್ಸ್ ಹೇಳಬೇಕುಅಂತ ಕೂಡ ಹೇಳಿದ್ದ ಜಯಶಂಕರ್ ಯಾರಿಂದ ಏನು ಖರೀದಿಮಾಡಬೇಕು ಅನ್ನೋದು ನಮ್ಮ ಸ್ವಾತಂತ್ರ್ಯ ನಾವುನಿಮ್ಮ ಗುಲಾಮರಲ್ಲ ಅನ್ನೋ ಮಾತುಗಳನ್ನು ನೇರವಾಗಿಹೇಳಿದ್ರು ಜೊತೆಗೆ ಶೀತಲ ಸಮರದ ಕಾಲದಲ್ಲಿಅಮೆರಿಕಾ ನಮ್ಮ ಶತ್ರು ಪಾಕಿಸ್ತಾನವನ್ನ ತೊಡೆಮೇಲೆ ಕೂಡಿಸಿಕೊಂಡಿತ್ತು ಅವತ್ತು ನಮ್ಮ ಜೊತೆನಿಂತಿದ್ದು ರಷ್ಯಾ ಹೊರತು ಪಶ್ಚಿಮದ ದೇಶಗಳಲ್ಲಅನ್ನೋದನ್ನು ಕೂಡ ತುಂಬಾ ನೇರವಾಗಿ ಮತ್ತುಸ್ಪಷ್ಟವಾಗಿ ಹೇಳಿದ್ದವರು ಜಯಶಂಕರ್ ಹೀಗಿರುವಾಗಅವರು ಪಶ್ಚಿಮದ ದೇಶಗಳ ಓಲೈಕೆ ಮಾಡ್ತಾ ಇದ್ದಾರೆಅನ್ನೋ ಆರೋಪ ಇದೆಯಲ್ಲ ಅದೇ ಒಂತರ ಹಾಸ್ಯಾಸ್ಪದಅನಿಸಿಕೊಳ್ಳುತ್ತೆ
ಚೈನಾ ಅನ್ನೋ ಮಗ್ಗುಲಮುಳ್ಳ
ಇನ್ನು ಚೈನಾ ಅನ್ನೋ ಮಗ್ಗುಲಮುಳ್ಳಿನ ವಿರುದ್ಧ ಯಾರೆಲ್ಲ ಇದ್ದಾರೆ ಅವರನ್ನವಿಶ್ವಾಸಕ್ಕೆ ತಗೊಳ್ಳೋದಕ್ಕೆ ಭಾರತದ ವಿದೇಶಾಂಗಸಚಿವರು ಪ್ರಯತ್ನಗಳನ್ನು ಮಾಡಿದ್ರೆ ಚೈನಾದವಿರುದ್ಧ ಪಶ್ಚಿಮದ ದೇಶಗಳನ್ನು ಓಲೈಸುವ ಪ್ರಯತ್ನಮಾಡಿದ್ರೆ ಅದರಲ್ಲಿ ಖಂಡಿತ ತಪ್ಪು ಕೂಡ ಏನಿಲ್ಲಯಾಕೆಂದರೆ ಚೈನಾ ನಮ್ಮ ಹಾಗೆ ಯಾರಿಗೆಲ್ಲ ಶತ್ರುಅವರನ್ನ ನಮ್ಮ ಜೊತೆ ಇಟ್ಟುಕೊಳ್ಳುವುದು ಭಾರತದದೃಷ್ಟಿಯಿಂದ ಲಾಭದ ಕೆಲಸನೇ ತಾನೇ ಇನ್ನು ಆಲೇಖನದಲ್ಲಿ ತುಂಬಾ ಆಕರ್ಷಕವಾಗಿರುವ ಸಾಲುಅಂದ್ರೆ ಜಯಶಂಕರ್ ಅವರ ವಿದೇಶಾಂಗ ನೀತಿಯಲ್ಲಿನೆಹರು ಅವರ ನೈತಿಕ ಪ್ರಜ್ಞೆ ಆಗಲಿ ಇಂದಿರಾಗಾಂಧಿಯವರ ರಾಜತಾಂತ್ರಿಕ ನೈಪುಣ್ಯ ಆಗಲಿ ಇಲ್ಲಅನ್ನೋದು ಚೈನಾದ ವಿಷಯದಲ್ಲಿ ಜಯಶಂಕರ್ ಒಬ್ಬರಿಗೆಅಲ್ಲ ಭಾರತದ ಯಾವ ನಾಯಕನಿಗೂ ಕೂಡ ಪಂಡಿತ್ಜವಹರ್ಲಾಲ್ ನೆಹರು ಅವರಿಗೆ ಇದ್ದಷ್ಟು ವಿಪರೀತನೈತಿಕತೆ ಇರುವುದು ಬೇಡ ಅಂತಲೇ ಭಾರತ ಬಯಸುವುದುನೆಹರು ಅವತ್ತು ಸ್ವಲ್ಪ ಚಾಣಾಕ್ಷತನವನ್ನುಬಳಸಿದ್ದಾರೆ ಇವತ್ತು ಚೈನಾ ಭಾರತದ ಗಡಿಯಲ್ಲಿಕೂತು ಹೀಗೆ ಆಟ ಆಡುವುದಕ್ಕೆ ಸಾಧ್ಯಆಗ್ತಿರಲಿಲ್ಲ ಅವತ್ತು ನೆಹರು ಅವರು ಇನ್ನುಸ್ವಲ್ಪ ಪ್ರೊ ಆಕ್ಟಿವ್ ಆಗಿ ಕೆಲಸಮಾಡಿದ್ದಿದ್ರೆ ಸ್ವಲ್ಪ ಬೇಗಹೆಚ್ಚೆತ್ತುಕೊಂಡಿದ್ದಿದ್ರೆ ಚೈನಾ ಯಾರಿಗೂಗೆಳೆಯನಾಗುವುದಕ್ಕೆ ಸಾಧ್ಯನೇ ಇಲ್ಲ ಅನ್ನೋದನ್ನಅರ್ಥ ಮಾಡಿಕೊಂಡಿದ್ದರೆ ಟಿಬೆಟ್ ಅವತ್ತು ಚೈನಾದಪಾಲಾಗುವುದನ್ನ ತಪ್ಪಿಸುವ ಸಾಧ್ಯತೆಗಳು ಇರ್ತಾಇದ್ವು ಟಿಬೆಟ್ ಚೈನಾದ ಕೈ ಸೇರದೆ ಇದ್ದಿದ್ರೆಭಾರತದ ಜೊತೆಗೆ ಚೈನಾ ಗಡಿ ಹಂಚಿಕೊಳ್ಳುವಪ್ರಮೇಯನೆ ಬರ್ತಾ ಇರ್ಲಿಲ್ಲ ಎರಡು ದೇಶಗಳ ನಡುವೆಟಿಬೆಟ್ ಅನ್ನೋದು ಗಡಿಯಾಗಿ ಬಫರ್ ಜೋನ್ ಆಗಿಉಳಿತಾ ಇತ್ತು ಅಲ್ವಾ ಇಲ್ಲಿ ನೆಹರು ತರ ಜಯಶಂಕರ್ಒಳ್ಳೆಯವರಲ್ಲ ಅಂತ ಚೈನಾ ಹೇಳಿದ್ರೆ ಅದನ್ನನಾವೆಲ್ಲ ಒಪ್ಪಲೇ ಬೇಕಾಗುತ್ತೆ ಇನ್ನು ಇಲ್ಲಿಚೈನಾದ ಮಾಧ್ಯಮ ಜಯಶಂಕರ್ ವಿರುದ್ಧ ದೊಡ್ಡದೊಂದುಆರೋಪವನ್ನು ಕೂಡ ಮಾಡಿದೆ ಅದೇನು ಅಂದ್ರೆ ಭಾರತದವಿದೇಶಾಂಗ ಸಚಿವರಾಗುವ ಮೊದಲು ಜಯಶಂಕರ್ ಟಾಟಾಸಂಸ್ಥೆಗಾಗಿ ಕೆಲಸ ಮಾಡ್ತಾ ಇದ್ರು ಆಗ ಚೈನಾದಜೊತೆ ಸಂಬಂಧವನ್ನು ಬೆಳೆಸುವುದಕ್ಕೆಉತ್ಸುಕರಾಗಿದ್ದ ಜಯಶಂಕರ್ ಈಗ ಅದೇ ಚೈನಾನ ದ್ವೇಷಮಾಡ್ತಾ ಇದ್ದಾರೆ.
ಇದರ ಹಿಂದೆ ಅವರಸ್ವಹಿತಾಸಕ್ತಿಗಳಿವೆ ಅನ್ನೋದು ಬೇನಾಮಿಹೆಸರಲ್ಲಿ ಇಷ್ಟೆಲ್ಲಾ ಲೇಖನವನ್ನು ಬರೆದಗ್ಲೋಬಲ್ ಟೈಮ್ಸ್ ಆ ಲೇಖನ ಪ್ರಕಟವಾದ ಮರುದಿನವೇಅದನ್ನ ತನ್ನ ಜಾಲತಾಣದಿಂದ ತೆಗೆದು ಹಾಕಿದೆ ಈಗ ಆಂಗ್ಲ ಭಾಷೆಯ ಲೇಖನ ಓದೋದಕ್ಕೆ ಸಿಕ್ತಾ ಇಲ್ಲಆದರೆ ಚೀನಿ ಭಾಷೆಯಲ್ಲಿನ ಲೇಖನವನ್ನ ಹಾಗೆಉಳಿಸಿಕೊಳ್ಳಲಾಗಿದೆ ಇಲ್ಲಿ ಎಲ್ಲಾ ಸರಿಇದ್ದಿದ್ರೆ ಬರೆದ ಲೇಖನವನ್ನ ಗ್ಲೋಬಲ್ ಟೈಮ್ಸ್ಯಾಕೆ ತೆಗೆದು ಹಾಕ್ತು ಗೊತ್ತಿಲ್ಲ ಆದರೆ ಈ ಲೇಖನ ಮತ್ತು ಅದು ಡಿಲೀಟ್ ಆದ ರೀತಿ ಎರಡು ಕೂಡ ಚೈನಾಭಾರತದ ಈ ವಿದೇಶಾಂಗ ಸಚಿವನ ಬಗ್ಗೆಇಟ್ಟುಕೊಂಡಿರುವ ಸಿಟ್ಟು ಅಸಹನೆಗಳಿಗೆಕನ್ನಡಿಯನ್ನು ಹಿಡಿತಾ ಇದೆ ಇದು ಗೆಳೆಯರೇ ಎಸ್ಜಯಶಂಕರ್ ಅವರ ಮೇಲೆ ಚೀನಾದ ಸರ್ಕಾರಿ ಮಾಧ್ಯಮಪ್ರಕಟಿಸಿದ ಲೇಖನಕ್ಕೆ ಸಂಬಂಧಪಟ್ಟ ಒಂದಷ್ಟುಮಾಹಿತಿ