ಪುಟ್ಟ ಬಾಲಕನಿಗೆ ರಾಷ್ಟ್ರ ಮಟ್ಟದ ಪ್ರಶಸ್ತಿ
ಇಳಕಲ್ : ಕಂದಗಲ್ಲ ಗ್ರಾಮದ ಮೊರಾರ್ಜಿ ಶಾಲೆಯ ಪ್ರಜ್ವಲ್ ಎಂ ಬೀರಣ್ಣನವರ ಎಂಬ ೮ ನೇ ತರಗತಿ
ವಿದ್ಯಾರ್ಥಿ ಧಾರವಾಡ ದಲ್ಲಿ ನೆಡೆದ, ಬಣ್ಣದ ಮನೆ ಸಂಸ್ಕೃತಿಕ ವೇದಿಕೆ ಗದಗ, ಕರ್ನಾಟಕ ಬಾಲ ವಿಕಾಸ
ಅಕಾಡೆಮಿ ಧಾರವಾಡ, ಬಾಲಭವನ ಸೊಸೈಟಿ ಬೆಂಗಳೂರು, ಇವರುಗಳ ಸಂಯುಕ್ತ ಆಶ್ರಯದಲ್ಲಿ
“ಚಿಣ್ಣರ ಚಿತ್ರ ಚಿತ್ತಾರ “೨೦೨೩-೨೪ ನೇ ಸಾಲಿನ ರಾಷ್ಟ್ರ ಮಟ್ಟದ ಚಿತ್ರ ಕಲೋತ್ಸವದಲ್ಲಿ ಭಾಗವಹಿಸಿ
ರಾಷ್ಟ್ರ ಮಟ್ಟದ “ಪುಟ್ಟ ಕಲಾವಿದ ” ಪ್ರಶಸ್ತಿ ಪಡೆದು ಶಾಲೆಯ ಗ್ರಾಮದ ಕೀರ್ತಿ ಹೆಚ್ಚಿಸಿದ್ದಾನೆ.
ಈತನ ಚಿತ್ರ ಕಲಾಕೃತಿ ನಿರ್ಣಾಯಕರ ಮೆಚ್ಚುಗೆ ಪಡೆದುದಲ್ಲದೆ ವಿದ್ಯಾರ್ಥಿಯ ಸ್ರಜನಶಿಲತೆ ಹಾಗೂ
ಪ್ರತಿಭೆಯನ್ನು ಮೆಚ್ಚಿ ಪ್ರಖ್ಯಾತ್ ಕಲಾವಿದರಾದ ವೀರಯ್ಯ್ ವಂಟಿಗೋಡಿಮಠರವರ ಹೆಸರಿನಲ್ಲಿ
ನೀಡುವ ಪುಟ್ಟ ಕಲಾವಿದ ಪ್ರಶಸ್ತಿ, ನಗದು ೩೦೦೦ ರೂ, ವಿಶೇಷ ಸ್ಮರಣಿಕೆ, ಗೌರವ ಪತ್ರ ನೀಡಿ ಸನ್ಮಾನಿಸಿದರು.
ಪ್ರಶಸ್ತಿ ಪಡೆದುಕೊಂಡ ವಿದ್ಯಾರ್ಥಿಯನ್ನು ಶಾಲೆಯ ಪ್ರಾಂಶುಪಾಲರಾದ ಮಲ್ಲಿಕಾರ್ಜುನ ಹತ್ತಿ ,
ಹಿಂದಿ ಶಿಕ್ಷಕರಾದ ಸುನೀಲಕುಮಾರ ಕಠಾರಿ, ಚಿತ್ರಕಲಾ ಗುರುಮಾತೆ ಅನುಸೂಯ ಕಡಿ, ಸಂಗೀತ ಶಿಕ್ಷಕಿ
ಸಂಗೀತಾ ಬಾದಾ ಹಾಗೂ ಶಾಲಾ ಶಿಕ್ಷಕರು,ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.