Ganesha discharge ಸಂಭ್ರಮದಿಂದ ನಡೆದ 5ನೇ ದಿನದ ಗಣೇಶ ವಿಸರ್ಜನೆ
ಬಾಗಲಕೋಟ : ಜಿಲ್ಲೆಯ ಇಳಕಲ್ ನಗರದಲ್ಲಿ ಗಣೇಶ ಚುತುರ್ಥಿ ಹಬ್ಬದಂದು ಪ್ರತಿಷ್ಠಾಪಿಸಲಾಗಿದ್ದ
ಗಣೇಶನ್ನು 5 ನೇ ದಿನವಾದ ಸೆ.11ಬುಧವಾರ ಮಧ್ಯಾರಾತ್ರಿ 12 ಗಂಟೆಯ ವರೆಗೆ ಗಣೇಶ
ಮೂರ್ತಿಗಳ ವಿಸರ್ಜನೆ ಸಡಗರ ಸಂಭ್ರಮದಿಂದ ಜರುಗಿದವು.
ಮನೆಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಕುಟುಂಬಸ್ಥರೊಂದಿಗೆ ಮೆರವಣಿಗೆ
ಮೂಲಕ ಆಗಮಿಸುತ್ತಾ ಪಟಾಕಿಗಳನ್ನು ಸಿಡಿಸುತ್ತಾ ನಗರಸಭೆ ನಿರ್ಮಾಣಮಾಡಿರುವ
ಹೊಂಡ ಮತ್ತು ಟ್ಯಾಂಕ್‌ಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜನೆಯನ್ನು ಮಾಡಿದರು.
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಪೋಲಿಸ್ ಬಂದೋ
ಬಸ್ತ ವ್ಯವಸ್ಥೆಯನ್ನು ಪಿಎಸ್‌ಐ ಎಸ್.ಆರ್.ನಾಯಕ ನೇತೃತ್ವದಲ್ಲಿ ಮಾಡಲಾಗಿತ್ತು.