power supply ಸೆ.೧೪ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
೧೧೦ ಕೆವಿ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮಾಡಬೇಕಾಗಿರುವುದರಿಂದ
ಸೆ. ೧೪ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಸಾರ್ವಜನಿಕರು ಸಹಕರಿಸಲು
ಸಹಾಯಕ ಕಾರ್ಯನಿವಾಹಕ ಎಂಜಿನಿಯರ್ ಮನವಿ ಮಾಡಿದ್ದಾರೆ.
ಶನಿವಾರ ಬೆಳಗ್ಗೆ ೯ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ೩೩ ಮತ್ತು ೧೧ಕೆವಿ ಮಾರ್ಗದಲ್ಲಿ
ಬರುವ ಎಪಿಎಂಸಿ, ಹುನ್ನೂರ, ರಾಮತೀರ್ಥ, ಜಮಖಂಡಿ, ಕೆಎಚ್. ಬಿ, ಮತ್ತು ಆಲಗೂರ-೧ ಆಯ್.
ಪಿ ಪೀಡರ್‌ಗಳಿಗೆ (ಐಪಿ) ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ವಾಗಲಿದೆ ಎಂದು ಅವರು
ಸೆ.೧೩ ಶುಕ್ರವಾರ ಮುಂಜಾನೆ ೧೦ ಗಂಟೆಗೆ ಪ್ರಕಟಣೆ ಮೂಲಕ ತಿಳಿಸಿದ್ದಾರೆ.