Shri Vijaya Mahantesh Cooperative Bank ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್‌ಗೆ ೩೦೧.೫೫ ಲಕ್ಷ ರೂ. ನಿವ್ವಳ ಲಾಭ : ಶಿವಾನಂದ ಕಂಠಿ
ಹುನಗುಂದ: ಪಟ್ಟಣದ ಶ್ರೀ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ ೩೦೧.೫೫ ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಶಿವಾನಂದ ಕಂಠಿ ಹೇಳಿದರು.
ಪಟ್ಟಣದ ವಿಜಯ ಮಹಾಂತೇಶ ಸಹಕಾರಿ ಬ್ಯಾಂಕಿನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಸದ್ಯಕ್ಕೆ ಬ್ಯಾಂಕ್ ೧೮೪೪.೫೧ ಲಕ್ಷ ಶೇರಬಂಡವಾಳ ೬೨,೬೧೩.೭೨ ಲಕ್ಷ ರೂ. ದುಡಿಯುವ ಬಂಡವಾಳ ೩೩೩೨.೨೭ ಲಕ್ಷ ರೂ. ಕಾಯ್ದಿಟ್ಟ ನಿಧಿ ಹೊಂದಿದೆ. ೫೬೭೪೩.೪೪ ಲಕ್ಷ ರೂ. ಠೇವಣಿ ಹೊಂದಿರುವ ಬ್ಯಾಂಕ್‌ನಿAದ ೩೯೦೪೯.೩೫ ಲಕ್ಷ ರೂ. ಮುಂಗಡ ಸಾಲ ನೀಡಲಾಗಿದೆ. ೪೨೨೭೧ ಸದಸ್ಯರು ಇದ್ದಾರೆ. ಬ್ಯಾಂಕ್ ಆರಂಭಗೊAಡು ೬೩ ವರ್ಷಗಳಾಗಿದ್ದು, ಎಲ್ಲ ೧೨ ಶಾಖೆಗಳು ಸಂಪೂರ್ಣ ಗಣಕೀಕೃತಗೊಂಡಿವೆ. ಒಟ್ಟು ೧೨೩ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.ಎಂದು ಮಾಹಿತಿ ನೀಡಿದರು.
ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ಕೆ.ಎಸ್. ಆಲದಿ ಮಾತನಾಡಿ, ಸೆ.೧೫ ರಂದು ಬೆಳಗ್ಗೆ ೧೧ ಗಂಟೆಗೆ ಎಪಿಎಂಸಿಯ ಆವರಣದ ಬ್ಯಾಂಕಿನ ಕಟ್ಟಡದಲ್ಲಿ ವಾರ್ಷಿಕ ಮಹಾಸಭೆ ನಡೆಯಲಿದೆ ಆದ್ದರಿಂದ ಬ್ಯಾಂಕಿನ ಎಲ್ಲ ಶೇರುದಾರರು, ಠೇವಣೆದಾರರು, ಸಾಲಗಾರರು ಈ ಸಭೆಗೆ ಆಗಮಿಸಬೇಕೆಂದು ಹೇಳಿದರು.
ಬ್ಯಾAಕ್ ಉಪಾಧ್ಯಕ್ಷ ಅನ್ನಪೂರ್ಣ ಎಸ್ ಹೊಸೂರ, ನಿರ್ದೇಶಕರಾದ ರವಿ ಹುಚನೂರ, ಬಸವರಾಜ ನಾಡಗೌಡರ, ದೇವು ಡಂಬಳ, ಶಶಿಕಾಂತ ಪಾಟೀಲ, ನೀಲಪ್ಪ ತಫೇಲಿ, ಮಲ್ಲು ವೀರಾಪೂರ, ಮಹಾಂತೇಶ ಅವಾರಿ, ಸಂಗಣ್ಣ ಕಡಪಟ್ಟಿ, ರಾಜಕುಮಾರ ಬಾದವಾಡಗಿ, ಸೋಮಶೇಖರ ಬಲಕುಂದಿ, ಎಸ್.ಎಸ್.ಗಂಜಿಹಾಳ, ಮಂಜುನಾಥ ಆಲೂರ, ಲಕ್ಷ್ಮೀಬಾಯಿ ಮುಕ್ಕಣ್ಣವರ, ಸುಜಾತಾ ನಾಗರಾಳ, ತಿರುಪತಿ ಕುಷ್ಟಗಿ, ಬಸವರಾಜ ಗದ್ದಿ, ಕ್ಲಾರ್ಕ ರಾಜು ಬಯ್ಯಾಪೂರ ಸೇರಿದಂತೆ ಇತರರು ಇದ್ದರು.