Mahantesh Kadiwalaಶೇರುದಾರರೇ ಸಂಘದ ಅಸ್ತಿ ; ಮಹಾಂತೇಶ ಕಡಿವಾಲ
ಕಂದಗಲ್ಲ : ಸಹಕಾರಿ ಸಂಘಕ್ಕೆ ಶೇರುದಾರರೇ ಅಸ್ತಿ ಅವರಿಂದ ಹಾಗೂ ಅವರ ಸಹಕಾರದಿಂದ ಸಂಘದ ಬೆಳವಣಿಗೆಯಾಗಲು
ಸಾಧ್ಯ ಅಭಿವೃದ್ಧಿ ದ್ರಷ್ಠಿಯನ್ನು ಇಟ್ಟುಕೊಂಡು ಈಗಿನ ಸಮಿತಿ ಸಾಕಷ್ಟು ಶ್ರಮಿಸುತ್ತಿದ್ದು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದು
ಇದಕ್ಕೆ ಸಂಸ್ಥೆಯ ಪ್ರತಿಯೊಬ್ಬ ಸದಸ್ಯರು ಸಹಕರಿಸಬೇಕು ಎಂದು ಸಂಘದ ಅಧ್ಯಕ್ಷರಾದ ಮಹಾಂತೇಶ ಕಡಿವಾಲ ಅವರು ಹೇಳಿದರು.
ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವರ್ಷದ ವಾರ್ಷಿಕ ಸರ್ವಸಾಧಾರಣಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರಾದ ಮಹಮ್ಮದಸಾಬ ಭಾವಿಕಟ್ಟಿ ಮಾತನಾಡಿದರು.
ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜ್ ಅಳ್ಳೊಳ್ಳಿ, ಮರಟಗೇರಿಯ ಹೇಮಪ್ಪ ಹವಾಲ್ದಾರ,ಹಿರಿಯರಾದ ಚನ್ನಪ್ಪ ಜಾಲಿಹಾಳ,
ಗುರುಪಾದಪ್ಪ ಪುರದಣ್ವವರ, ಶೇಖಯ್ಯ್ ಗುರುವಿನಮಠ, ಅಮಾತೆಪ್ಪ ಯರದಾಳ, ಪ್ರಶಾಂತ ಬನ್ನಿಗೋಳ,ಸಂಘದ ಉಪಾಧ್ಯಕ್ಷರಾದ
ಶಂಕ್ರಪ್ಪ ಚಲವಾದಿ, ನಿರ್ದೇಶಕರಾದ ಚಂದ್ರಶೇಖರ ಕಂಠಿ, ರುದ್ರಪ್ಪ ಶೀಲವಂತರ,ಶರಣಯ್ಯ ಮಠ,ಆಶೆಸಾಬ ಶಿಂಗನಗುತ್ತಿ, ಹನಮಪ್ಪ
ಗೆಜ್ಜೆಲಗಟ್ಟಿ, ಪಾರ್ವತೆವ್ವ ಸೂಜಿ, ದೇವಮ್ಮ ಬಳಿಗಾರ, ಸಂಜೀವಪ್ಪ ಗೋದಿ, ಚಂದ್ರಶೇಖರಯ್ಯ ಮಠ, ಮಹಾಂತೇಶ ದಿವಾಣದ,
ಡಿ ಸಿ ಸಿ ಬ್ಯಾಂಕ್ ಸೂಪರ್ ವೈಜರ ವಾಯ ಎಚ್ ಗಿರಿಯಣ್ಣನವರ ಹಾಗೂ ಕಂದಗಲ್ಲ, ಮರಟಗೇರಿ,ಸೋಮಲಾಪುರ,
ಗೋನಾಳ್ ಎಸ್ ಕೆ ಗ್ರಾಮಗಳ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಗೌರವ ಸಲಹೆಗಾರರಾದ ಮಹಾಂತಗೌಡ ಹೊನ್ನಳ್ಳಿ ಕಾರ್ಯಕ್ರಮ ನಿರೂಪಿಸಿದರು. ಹಿರೇಒತಗೇರಿ ಪಿ ಕೆ ಪಿ ಎಸ್ ನ ಕಾರ್ಯದರ್ಶಿ
ಅಯ್ಯನಗೌಡ ಐಹೊಳ್ಳಿ ಸ್ವಾಗತಿಸಿದರು,
ಕಂದಗಲ್ಲ ಪಿ ಕೆ ಪಿ ಎಸ್ ನ ಮು ಕಾರ್ಯ ನಿರ್ವಾಹಕರಾದ ಮಹೇಶ್ ಕಡಿವಾಲ ವಂದಿಸಿದರು ಸಂಘದ ಸಿಬ್ಬಂದಿ ಹಾಜರಿದ್ದರು.