Hunagunda ಹುನಗುಂದ ಪಟ್ಟಣದ ಗಾಂಧಿ ವೃತ್ತದಲ್ಲಿ ಗಾಂಧಿ- ಶಾಸ್ತ್ರಿ ಜಯಂತಿ ಆಚರಣೆ
ಹುನಗುಂದ: ಮಹಾತ್ಮ ಗಾಂಧೀಜಿ ಸತ್ಯ, ಅಹಿಂಸೆಯ ಪ್ರತೀಕವಾಗಿದ್ದು, ಅವರ ಬದುಕು ಮತ್ತು ಸಾಧನೆಗಳು ಯುವಪೀಳಿಗೆಗೆ ಮಾದರಿ ಎಂದು ವೇದ ಮೂರ್ತಿ ಮಹಾಂತಯ್ಯ ಗಚ್ಚಿನಮಠ ಹೇಳಿದರು.
ಪಟ್ಟಣದ ಮೇನ್ ಬಜಾರ್ದ ಗಾಂಧಿ ವೃತ್ತದಲ್ಲಿ ಮಂಗಳವಾರ ಹಮ್ಮಿ ಕೊಂಡಿದ್ದ ಗಾಂಧಿ- ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧೀಜಿ ಅವರ ಗ್ರಾಮ ಸ್ವರಾಜ್ಯ ಕಲ್ಪನೆ. ಭಾರತದ ಹಳ್ಳಿಗಳ ಉದ್ದಾರದ ಕನಸು ನನಸಾಗಬೇಕಿದೆ ಎಂದರು.
ನಿವೃತ್ತ ಜಿ.ಬಿ.ಕಂಬಾಳಿಮಠ, ವಿ.ಮ. ಬ್ಯಾಂಕ್ ನಿರ್ದೇಶಕರಾದ ರವಿ ಹುಚನೂರ, ಪುರಸಭೆ ಸದಸ್ಯ ಶಾಂತಪ್ಪ ಹೊಸಮನಿ,ಮಹಾಂತೇಶ ಮಠ,ಶಿವಪುತ್ರಪ್ಪ ತಾರಿವಾಳ,ಶಿವಪ್ಪ ಸುಂಕಾಪೂರ,ಕೃಷ್ಣಾ ಜಾಲೀಹಾಳ, ಹೊಸಮನಿ, ಸುರೇಶ ಹಳಪೇಟಿ, ರಾಜು ಬಯ್ಯಾಪುರ, ಗಿರಿಮಲ್ಲಪ್ಪ ಹಳಪೇಟಿ, ಶಿವಪ್ಪ ಹಳಪೇಟಿ, ಮುನ್ನಾ ಬಾಗವಾನ, ನಾಗಪ್ಪ ತ್ಯಾಪಿ, ಮಂಜು ಕೋಲಾರ ಇತರರಿದ್ದರು.