MLA Kashappanavara ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭ : ತಾಲ್ಲೂಕಿನ ರೈತರು ಸದುಪಯೋಗಪಡಿಸಿಕೊಳ್ಳಿ : ಶಾಸಕ ಕಾಶಪ್ಪನವರ
ಹುನಗುಂದ : ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ ಕೇಂದ್ರ ಆರಂಭಿಸಲಾಗಿದ್ದು, ತಾಲ್ಲೂಕಿನ ರೈತರು ಸದುಪಯೋಗಪಡಿಸಿ ಕೊಳ್ಳಬೇಕೆಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದಿAದ ಭಾನುವಾರ ಸೂರ್ಯಕಾಂತಿ ಬೆಂಬಲ ಬೆಲೆ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಋತುಮಾನದ ಬೆಳೆಗಳಿಗೆ ಸರ್ಕಾರ ಬೆಂಬಲ ಘೋಷಣೆ ಮಾಡಿದೆ. ರೈತರ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಸರ್ಕಾರ ನಮ್ಮದು. ಸಿದ್ದರಾಮಯ್ಯ ಹಾಗೂ ಕೃಷಿ ಸಚಿವರೊಂದಿಗೆ ಮಾತನಾಡಿ ರೈತರು ಬೆಂಬಲ ಬೆಲೆ ಅಡಿ ಸೂರ್ಯಕಾಂತಿ ಮಾರಾಟ ಮಾಡಲು ನೊಂದಣಿಗೆ ಇನ್ನಷ್ಟು ಕಾಲಾವಕಾಶಕ್ಕೆ ಮನವಿ ಮಾಡಲಾಗುವುದು ಎಂದರು.
ಎಪಿಎಂಸಿ ಕಾರ್ಯದರ್ಶಿ ಆರ್ ಎಂ. ದಂಡಿನ ಮಾತನಾಡಿ, ಸೂರ್ಯಕಾಂತಿ ಪ್ರತಿ ಕ್ವಿಂಟಾಲ್‌ಗೆ ೭೨೮೦ ರೂ. ಬೆಂಬಲವಾಗಿ ಒಬ್ಬ ರೈತರಿಂದ ೧೫ ಕ್ವಿಂಟಾಲ್ ಖರೀದಿಸಲು ಅವಕಾಶವಿದ್ದು,ರೈತರು ೧೮೮ ನೊಂದಣಿ ಮಾಡಿಕೊಂಡಿದ್ದಾರೆ ಎಂದರು.
ಸAಘದ ಅಧ್ಯಕ್ಷ ಮಹಾಲಿಂಗಯ್ಯ ಹಿರೇಮಠ ಮಾತನಾಡಿದರು.ಸಂಘದ ಉಪಾಧ್ಯಕ್ಷ ಮಾಂತಮ್ಮ ಹೊಸೂರ, ಗಿರಿಜಾ ಗಂಜಿಹಾಳ, ಜೈನಸಾಬ ಹಗೇದಾಳ, ಶಿವಾನಂದ ಕಂಠಿ, ಸಂಗಣ್ಣ ಗಂಜಿಹಾಳ, ವಿಜಯ ಗದ್ದನಕೇರಿ, ಶಿವನಗೌಡ ಜಡಿಯಪ್ಪಗೌಡರ,ನಾಗಪ್ಪ ಬೀಳಗಿ, ಬಸವಂತಪ್ಪ ಅಂಟರತಾನಿ,ಗAಗಣ್ಣ ಇಲಕಲ್ಲ, ಮಲ್ಕಣ್ಣ ಹೂಗಾರ, ಮುತ್ತು ಕುದರಿಮನಿ ಇತರರಿದ್ದರು.